ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ

KannadaprabhaNewsNetwork |  
Published : Jun 08, 2025, 02:27 AM IST
7ಎಚ್ಎಸ್ಎನ್17 :  | Kannada Prabha

ಸಾರಾಂಶ

ಬರಗಾಲದ ಪರಿಸ್ಥಿತಿಯ ಚಿತ್ರಣವನ್ನು ಉದಾಹರಣೆ ನೀಡುವುದರ ಮೂಲಕ ನಾವು ಅಳವಡಿಸಿಕೊಳ್ಳುವ ಸಣ್ಣ ಸಣ್ಣ ಬದಲಾವಣೆಯು ಕೂಡ ಸಮತೋಲಿತ ಪರಿಸರವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ಮಕ್ಕಳಿಗೆ ಬಾಲ್ಯದಿಂದಲೇ ಪರಿಸರ ಶಿಕ್ಷಣ ನೀಡುವುದು ಅವಶ್ಯಕ ಎಂಬುದನ್ನು ತಿಳಿಸುತ್ತಾ, ಪ್ಲಾಸ್ಟಿಕ್ ಮುಕ್ತ ಸಮಾಜ, ಸಾವಯವ ಕೃಷಿಯ ಮಹತ್ವ, ಹಸಿರು ಕ್ರಾಂತಿಯ ಪಿತಾಮಹ ಡಾ. ಸ್ವಾಮಿನಾಥನ್ ಕೊಡುಗೆಯನ್ನು ವಿವರಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ವಿಜಯ ಶಾಲೆಯಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆಯು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ತಾಂತ್ರಿಕ ವಿಭಾಗಾಧಿಕಾರಿ ಮಂಜುನಾಥ್ ಎಚ್.ಡಿ ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಬಾಲ್ಯದಿಂದಲೇ ಪರಿಸರ ಶಿಕ್ಷಣ ನೀಡುವುದು ಅವಶ್ಯಕ ಎಂಬುದನ್ನು ತಿಳಿಸುತ್ತಾ, ಪ್ಲಾಸ್ಟಿಕ್ ಮುಕ್ತ ಸಮಾಜ, ಸಾವಯವ ಕೃಷಿಯ ಮಹತ್ವ, ಹಸಿರು ಕ್ರಾಂತಿಯ ಪಿತಾಮಹ ಡಾ. ಸ್ವಾಮಿನಾಥನ್ ಕೊಡುಗೆಯನ್ನು ವಿವರಿಸಿದರು.

ಬರಗಾಲದ ಪರಿಸ್ಥಿತಿಯ ಚಿತ್ರಣವನ್ನು ಉದಾಹರಣೆ ನೀಡುವುದರ ಮೂಲಕ ನಾವು ಅಳವಡಿಸಿಕೊಳ್ಳುವ ಸಣ್ಣ ಸಣ್ಣ ಬದಲಾವಣೆಯು ಕೂಡ ಸಮತೋಲಿತ ಪರಿಸರವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ಶಾಲೆಯ ಅಧ್ಯಕ್ಷರು ಮತ್ತು ಪರಿಸರ ಪ್ರೇಮಿಯೂ ಆದ ವೈ.ಎನ್. ಸುಬ್ಬಸ್ವಾಮಿ, ಪರಿಸರ ಸಂರಕ್ಷಣೆಗೆ ಅಪೂರ್ವ ಕೊಡುಗೆಯನ್ನು ನೀಡಿದ ರಾಜೇಂದ್ರ ಸಿಂಗ್, ಜಾಧವ್ ಪಾಯೆಂಗ್, ಸಾಲುಮರದ ತಿಮ್ಮಕ್ಕರಂತಹ ಮಹನೀಯರ ಕೊಡುಗೆಯನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿಯನ್ನು ನೆನಪಿಸಿದರು. ಶಾಲೆಯ ಸಂಸ್ಥಾಪಕ ನಿರ್ದೇಶಕರಾದ ತಾರಾ ಎಸ್. ಸ್ವಾಮಿಯವರು ಮಾತನಾಡಿ, ವಿದ್ಯಾರ್ಥಿಗಳಿಗೆ ‘ನನ್ನ ಕಸ ನನ್ನ ಜವಾಬ್ದಾರಿ’ ಎಂಬ ಘೋಷ ವಾಕ್ಯದ ಮೂಲಕ ಪರಿಸರ ಸ್ವಚ್ಛತೆಯ ಜಾಗೃತಿಯನ್ನು ಮೂಡಿಸಿದರು. ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿರುವ ಪ್ರತಿಯೊಂದು ಗಿಡಮರಗಳ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ, ಅವುಗಳ ಹೆಸರುಗಳನ್ನು ಹಾಡಿನ ಮೂಲಕ ಪರಿಚಯಿಸಿದರು.

ಕಾರ್ಯಕ್ರಮದಲ್ಲಿ ವಿಜಯ ಶಾಲೆಯ ಅಧ್ಯಕ್ಷ ವೈ.ಎನ್. ಸುಬ್ಬಸ್ವಾಮಿ, ಸಂಸ್ಥಾಪಕ ನಿರ್ದೇಶಕರಾದ ತಾರ ಎಸ್. ಸ್ವಾಮಿ, ಮುಖ್ಯ ಅತಿಥಿಗಳಾಗಿದ್ದ ಮಂಜುನಾಥ ಎಚ್ ಡಿ, ಪ್ರಾಂಶುಪಾಲರಾದ ನಂದೀಶ ಕೆ. ಎಸ್, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ