ಗದಗ: ರಾಜ್ಯದ 7 ಕೋಟಿ ಜನಸಂಖ್ಯೆಯಲ್ಲಿ 3 ಕೋಟಿಗಿಂತಲೂ ಹೆಚ್ಚಿನ ಜನಸಂಖ್ಯಾ ಬಲವುಳ್ಳ ವೀರಶೈವ-ಲಿಂಗಾಯತರು ಒಗ್ಗಟ್ಟು ಆದರೆ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಅಲುಗಾಡಿಸಿ ನಮ್ಮ ಹಕ್ಕು, ಸೌಲಭ್ಯ ಪಡೆಯಬಹುದು ಎಂದು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ರಾಜ್ಯ ಅಧ್ಯಕ್ಷ ಶಂಕರ ಬಿದರಿ ಹೇಳಿದರು.
ಮಹಾಸಭಾ ರಾಜ್ಯದ ವೀರಶೈವ-ಲಿಂಗಾಯತರನ್ನು ಪ್ರಬಲ ಸಂಘಟನೆಗೆ ಹೆಚ್ಚಿನ ಒತ್ತು ನೀಡಿದ್ದು, 2027ರೊಳಗೆ ರಾಜ್ಯದ ಕನಿಷ್ಠ 200 ತಾಲೂಕುಗಳಲ್ಲಿ ಪ್ರತಿ ತಾಲೂಕಿಗೆ ಕನಷ್ಠ 10 ಸಾವಿರ ಆಜೀವ ಸದಸ್ಯರನ್ನು ಮಾಡುವ ಗುರಿ ಹೊಂದಿದೆ, ಹಾಗೆಯೇ ಗದಗ ಜಿಲ್ಲೆಯಲ್ಲೂ 50 ಸಾವಿರ ಸದಸ್ಯರನ್ನು ಮಾಡಲು ಜಿಲ್ಲಾ ತಾಲೂಕು ಸಂಘಟನೆಗಳು ಹೆಚ್ಚು ಕ್ರಿಯಾಶೀಲತೆಯಿಂದ ಕಾರ್ಯ ನಿರ್ವಹಿಸಬೇಕು ಸಮಾಜ ಬಾಂಧವರು ಈ ವಿಷಯಕ್ಕೆ ಕೈ ಜೋಡಿಸಬೇಕು ಎಂದರು.
ಮಹಾಸಭಾದ ತಾಲೂಕು ಸಂಘಟನೆಯ ಮೂಲಕ ಸಮಾಜದ ಪ್ರತಿ ಕುಟುಂಬದ ಜನಗಣತಿ, ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ವಾಸ್ತವಿಕ ಚಿತ್ರಣದ ಮಾಹಿತಿ ಗಣಕೀಕೃತ ಮಾಡಲು ಉದ್ದೇಶಿದೆ. ಶೀಘ್ರದಲ್ಲೇ ರಾಜ್ಯದ ಎಲ್ಲ ತಾಲೂಕು ಘಟಕಗಳಿಗೆ ಕಂಪ್ಯೂಟರ್ ನೀಡಿ ಇಬ್ಬರು ಸಿಬ್ಬಂದಿ ನೇಮಿಸಿ ಮಾಹಿತಿ ಕಲೆ ಹಾಕಲಾಗುತ್ತಿದೆ. ಕಾರಣ ವೀರಶೈವ-ಲಿಂಗಾಯತ ಕುಟುಂಬದ ಮುಖ್ಯಸ್ಥರು ಮಕ್ಕಳ ಹಾಗೂ ಸಮಾಜದ ಭವಿಷ್ಯದ ಹಿತದೃಷ್ಠಿಯಿಂದ ಮಾಹಿತಿ ಒದಗಿಸಬೇಕು ಎಂದರು.ಸಾನ್ನಿಧ್ಯ ವಹಿಸಿದ್ದ ಹೊಸಳ್ಳಿಯ ಬೂದೀಶ್ವರ ಸಂಸ್ಥಾನಮಠದ ಜ. ಅಭಿನವ ಬೂದೀಶ್ವರ ಶ್ರೀಗಳು ಮಾತನಾಡಿ, ನಾಡಿನ ವೀರಶೈವ ಲಿಂಗಾಯತ ಮಠ ಮಂದಿರಗಳು ಅನ್ನದಾಸೋಹ, ಜ್ಞಾನದಾಸೋಹಕ್ಕೆ ಬಹುದೊಡ್ಡ ಕೊಡುಗೆ ನೀಡಿವೆ ಎಂದರು.
ಸಮ್ಮುಖ ವಹಿಸಿದ್ದ ಅಬ್ಬಿಗೇರಿಯ ಯಲ್ಲಾಲಿಂಗೇಶ್ವರ ಮಠದ ಬಸವರಾಜ ಬಸವರಡ್ಡೇರ ಸ್ವಾಮೀಜಿ,ಮಹಾಸಭಾದ ರಾಜ್ಯ ಉಪಾಧ್ಯಕ್ಷ ಅಮರೇಗೌಡ ಬಯ್ಯಾಪುರ, ರಾಜ್ಯ ಕಾರ್ಯಕಾರಿಮಂಡಳಿಯ ಸದಸ್ಯ ಸಂಗನಗೌಡ ಪಾಟೀಲ ಮುಂತಾದವರು ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಮಹಾಸಭಾದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಹಿರಿಯರಾದ, ಮಾಜಿ ಸಚಿವ ಎಸ್.ಎಸ್. ಪಾಟೀಲ ಉಪಸ್ಥಿತರಿದ್ದರು. ಶಿವಬಸಯ್ಯ ಗಡ್ಡದಮಠ ಸಂಗಡಿಗರು ಪ್ರಾರ್ಥಿಸಿದರು, ಸುರೇಖಾ ಪಿಳ್ಳೆ ಗಣಸ್ತುತಿ ಮಾಡಿದರು. ಜಿಲ್ಲಾ ಕಾರ್ಯದರ್ಶಿ ಮುರುಘರಾಜೇಂದ್ರ ಬಡ್ನಿ ಸ್ವಾಗತಿಸಿ, ನಿರೂಪಿಸಿದರು. ಚನ್ನವೀರಪ್ಪ ಹುಣಶೀಕಟ್ಟಿ ವಂದಿಸಿದರು.
ಮಹೇಶ ಕೋಟಿ, ಸಂಗಮೇಶ ಕವಳಿಕಾಯಿ, ಅಪ್ಪಣ್ಣ ನಾಯ್ಕರ್, ಅಜೀತಗೌಡ ಪಾಟೀಲ, ಶಿವನಗೌಡ್ರ ಡೋಣಿ, ಸಿದ್ಧನಗೌಡ್ರ ಪಾಟೀಲ, ಅನೀಲಕುಮಾರ ತೆಗ್ಗಿನಕೇರಿ, ಮಲ್ಲಿಕಾರ್ಜುನ ರಡ್ಡೇರ ಉಪಸ್ಥಿತರಿದ್ದರು.