ಕನ್ನಡಪ್ರಭವಾರ್ತೆ ಮೂಲ್ಕಿ
ಎಸ್ ಕೋಡಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ವೇದಿಕೆ ವತಿಯಿಂದ ತೋಕೂರು ಎಸ್ಕೋಡಿ ಪದ್ಮಾವತಿ ಲಾನ್ ಸಭಾಭವನದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಲಲಿತ ಭಾಸ್ಕರ್ ಶೆಟ್ಟಿಗಾರ್ ಅವರು ಸಮಯದ ಮಹತ್ವ ಮತ್ತು ಸದ್ಬಳಕೆಯ ಬಗ್ಗೆ ಮಾಹಿತಿಗಳನ್ನು ನೀಡಿದರು.ಚಾಮರ ಫೌಂಡೇಶನ್ ನ ವ್ಯವಸ್ಥಾಪನ ಟ್ರಸ್ಟಿ ರಚನಾ ಮನೀಷ್ ಶುಭ ಶಂಸನೆಗೈದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ನವೀನ್ ಹರಿಪಾದೆ ವಹಿಸಿದ್ದರು. ಸೇವಾ ಸಂಘದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಗುರುರಾಜ್ ಎಸ್ ಪೂಜಾರಿ, ಮಂದಿರದ ಅರ್ಚಕ ದಾಮೋದರ ಸುವರ್ಣ, ಮಹಿಳಾ ವೇದಿಕೆಯ ಅಧ್ಯಕ್ಷೆ ಶಾಂತ ಅಶೋಕ್ ಕರ್ಕೇರ, ಯುವ ವೇದಿಕೆ ಅಧ್ಯಕ್ಷ ಪವನ್ ಕುಮಾರ್ ಬಬಿತಾ ಜೆ. ಸುವರ್ಣ ಕುಸುಮ ಎಚ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದರು.