ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಲೋಕಸಭಾ ಚುನಾವಣೆ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಮಂಗಳವಾರ ಕುಟುಂಬ ಸಮೇತರಾಗಿ ಆಗಮಿಸಿ ಮತ ಚಲಾವಣೆ ಮಾಡಿದರು.ಮತದಾನಕ್ಕೂ ಮುನ್ನ ಈಶ್ವರಪ್ಪ ಮನೆಯಲ್ಲಿ ಮನೆದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ ಈಶ್ವರಪ್ಪ ಕುಟುಂಬ, ಶ್ಲೋಕಗಳನ್ನು ಹೇಳುತ್ತಾ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆ ಬಳಿಕ ಮತದಾನಕ್ಕೆ ತೆರಳಿ ಮತದಾನ ಮಾಡಿದರು.ಅಪಪ್ರಚಾರ ವಿರುದ್ಧ ಕಿಡಿ:
ನನ್ನ ವಿರುದ್ಧ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅಪ್ರಚಾರ ನಡೆಸುತ್ತಿದ್ದಾರೆ. ನಾನು ಈ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇನೆ ಎಂದು ಭಯಗೊಂಡಿರುವ ಅವರು ಈ ರೀತಿ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.ಈ ಬಾರಿ ಚುನಾವಣೆಯಲ್ಲಿ ನಾನು ಗೆಲ್ಲುತ್ತೇನೆ ಎಂಬ ಹಿನ್ನೆಲೆಯಲ್ಲಿ ಹಳೆಯ ವಿಡಿಯೋ ವೈರಲ್ ಮಾಡುವುದರ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ವಿರೋಧ ಮಾಡಿ ದ್ದಾರೆ. ನಾನು ಚುನಾವಣೆ ಸ್ಪರ್ಧೆ ಮಾಡುತ್ತಿರುವೆ. ನಾನು ಎರಡು ಲಕ್ಷ ಮತಗಳ ಅಂತರದ ಗೆಲುವು ಸಾಧಿಸುವುದು ನಿಶ್ಚಿತ ಎಂದು ಭರವಸೆ ವ್ಯಕ್ತಪಡಿಸಿದರು.ಲೋಕಸಭೆ ಚುನಾವಣೆ ಮತದಾನ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ದಿಟ್ಟ ಹೆಜ್ಜೆ ಇಟ್ಟಂತೆ. ಪಕ್ಷೇತರ ಅಭ್ಯರ್ಥಿಯಾಗಿರುವ ಆಗಿ ಸ್ಪರ್ಧಿಸಿರುವ ನನಗೆ ಎಲ್ಲೆಡೆ ಹೆಚ್ಚಿನ ಬೆಂಬಲ ಸಿಗುತ್ತಿದೆ.ಜೆಡಿಎಸ್ ಮತ್ತು ಕಾಂಗ್ರೆಸ್ನ ಅನೇಕರ ಬೆಂಬಲ ನನಗೆ ಇದೆ. ಈ ನಡುವೆ ನೀಚ ಕೆಲಸ ನಡೆಯುತ್ತಿದೆ. ಈ ನಡುವೆ ಬಿಜೆಪಿ ಅಭ್ಯರ್ಥಿಗೆ ಸೋಲುವ ಭಯ ಶುರುವಾಗಿದ್ದು, ನೀಚತನದ ಷಡ್ಯಂತ್ರ ನನ್ನ ವಿರುದ್ಧ ಮಾಡಲಾಗುತ್ತಿದೆ. ಸೋಲುವ ಭಯದಿಂದ ಈ ರೀತಿ ಬಿಜೆಪಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಘವೇಂದ್ರ ಬಂಧನಕ್ಕೆ ಡಿಸಿಗೆ ಮನವಿ:ರಾಷ್ಟ್ರಭಕ್ತರ ಬಳಗದವತಿಯಿಂದ ಸ್ವತಂತ್ರ ಅಭ್ಯರ್ಥಿಯಾಗಿರುವ ಕೆ.ಎಸ್.ಈಶ್ವರಪ್ಪ ತಮ್ಮ ವಿರುದ್ಧ ವಿಡಿಯೋವೊಂದು ವೈರಲ್ ಅಗಿದ್ದರ ಕಾರಣ ಸಂಸದ ರಾಘವೇಂದ್ರರ ವಿರುದ್ಧ ತಿರುಗಿ ಬಿದ್ದಿದ್ದಾರೆ. ರಾಘವೇಂದ್ರರನ್ನ ಬಂಧಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಸಂಸದ ರಾಘವೇಂದ್ರರ ನೀಚ ಕೃತ್ಯದಿಂದ ಹಳೆ ವಿಡಿಯೋವನ್ನ ಮತ್ತು ಪತ್ರಿಕೆಯಲ್ಲಿ ತಮ್ಮ ವಿರುದ್ಧ ಪ್ರಕಟವಾದ ವಿಷಯದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸಾಮಾಜಿಕ ಜಾಲತಾಣಗಳಾದ ಫೇಸ್ಟುಕ್, ವಾಟ್ಸಾಪ್ ಮೂಲಕ ಹರಿಬಿಟ್ಟು ಮತದಾರರಲ್ಲಿ ಗೊಂದಲವನ್ನು ಸೃಷ್ಠಿ ಮಾಡಲಾಗುತ್ತಿದೆ. ಈ ರೀತಿಯ ಕೆಲಸವು ಚುನಾವಣಾ ನೀತಿ ಸಂಹಿತೆಗೆ ವಿರುದ್ಧವಾಗಿದ್ದು ಈ ವಿಷಯವಾಗಿ ನಾನು ಅಧಿಕೃತವಾಗಿ ತಮ್ಮಲ್ಲಿ ದೂರು ದಾಖಲಿಸುತ್ತಿದ್ದೇನೆ. ತಾವು ಈ ದೂರನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಸುಳ್ಳು ವದಂತಿಯನ್ನು ಹುಟ್ಟು ಹಾಕಿದವರ ಮೂಲವನ್ನು ತಾವು ಪರಶೀಲಿಸಿ ತಪ್ಪಿಸ್ಥರಿಗೆ ಕಾನೂನು ರೀತಿಯ ಸೂಕ್ತ ಶಿಕ್ಷೆಯನ್ನು ನೀಡಬೇಕಾಗಿ ಆಗ್ರಹಿಸಿರುವ ಈಶ್ವರಪ್ಪನವರು ಸಂಸದ ರಾಘವೇಂದ್ರರನ್ನ ಬಂಧಿಸುವಂತೆ ಆಗ್ರಹಿಸಿದ್ದಾರೆ. ಈ ಸಂದರ್ಭ ಪುತ್ರ ಕಾಂತೇಶ್, ವಿಶ್ವಾಸ್ ಮತ್ತಿತರರು ಇದ್ದರು.ನನ್ನ ಬೆಂಬಲ ಬಿಜೆಪಿಗೆ ಎಂಬ ಘೋಷಣೆ ವಿಡಿಯೋ ವೈರಲ್!
ವಾಟ್ಸಾಪ್ ಸಂದೇಶ ರವಾನಿಸುವುದರ ಮೂಲಕ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ನನ್ನ ವಿರುದ್ಧ ನಿರಂತರ ಷಡ್ಯಂತ್ರ ಮಾಡಿದ್ದಾರೆ. ನನ್ನ ಬೆಂಬಲ ಬಿಜೆಪಿಗೆ ಎಂದು ಘೋಷಣೆ ಮಾಡಿರುವಂತೆ ವಿಡಿಯೋ ಹಾಗೂ ಸುದ್ಧಿ ಹಾಕುತ್ತಿದ್ದಾರೆ. ಕಾಂಗ್ರೆಸ್ ಗೆ ಯಾರೂ ಮತ ಚಲಾಯಿಸಬೇಡಿ, ನಾನು ನನ್ನ ಮಾತೃ ಪಕ್ಷಕ್ಕೆ ಬೆಂಬಲಿಸುತ್ತಿದ್ದೇನೆ. ನನಗೆ ನನ್ನ ತಪ್ಪಿನ ಅರಿವಾಗಿದೆ. ಹೀಗಾಗಿ ಬಿಜೆಪಿಗೆ ಬೆಂಬಲಿಸುತ್ತಿದ್ದೇನೆ ಎಂಬ ಫೇಕ್ ವಿಡಿಯೋ ವೈರಲ್ ಮಾಡಲಾಗುತ್ತಿದೆ. ಸೋಲುವ ಭಯದಿಂದ ಈ ರೀತಿ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ವಿರುದ್ಧ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.