-ತಾಲೂಕು ಮಟ್ಟದ ಸ್ಪರ್ಧಾತ್ಮಕ ಚಟುವಟಿಕೆ ಉದ್ಘಾಟನಾ ಕಾರ್ಯಕ್ರಮ
------ಕನ್ನಡಪ್ರಭವಾರ್ತೆ ಚಳ್ಳಕೆರೆ ಹದಿನೈದನೇ ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ಮತದಾರ ಸಾಕ್ಷರತಾ ಸಂಘದ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ, ರಸಪ್ರಶ್ನೆ, ಬಿತ್ತಿಪತ್ರ ಸ್ಪರ್ಧೆಗಳನ್ನು ಆಯೋಜಿಸಿದ್ದ ಮತದಾನ ಜಾಗೃತಿ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಮನವಿ ಮಾಡಿದರು.
ನಗರದ ಬಿಇಒ ಕಚೇರಿಯಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಹಿನ್ನೆಲೆ ಆಯೋಜಿಸಿದ್ದ ತಾಲೂಕು ಮಟ್ಟದ ಸ್ಪರ್ಧಾತ್ಮಕ ಚಟುವಟಿಕೆಗಳನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಬರುವ ಜ.೨೦೨೫ರ ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಮುಖ ಘಟ್ಟ. ಈಗಾಗಲೇ ಮತದಾರರ ಪಟ್ಟಿ, ಸೇರ್ಪಡೆ ಮತ್ತು ಬದಲಾವಣೆಯ ಬಗ್ಗೆ ಚುನಾವಣಾ ಶಾಖೆ ಸಾಕಷ್ಟು ಮಾಹಿತಿ ನೀಡಿದೆ. ಗ್ರಾಮೀಣ ಪ್ರದೇಶದಲ್ಲೂ ರಾಷ್ಟ್ರೀಯ ಮತದಾರರ ದಿನಾಚರಣೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ವಿದ್ಯಾರ್ಥಿಗಳಿಗೆ ಸ್ಪರ್ಧೆ ಹಮ್ಮಿಕೊಂಡಿದೆ. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಸುಗಮವಾಗಿ ನಡೆಯಲು ಎಲ್ಲರೂ ಕೈಜೋಡಿಸಬೇಕು ಎಂದರು.ಜಿಲ್ಲಾ ನೋಡಲ್ ಅಧಿಕಾರಿ ಕೆ.ಜಿ.ಪ್ರಶಾಂತ್, ಮತದಾರರ ಪರಿಷ್ಕರಣೆ ಕಾರ್ಯ ತಾಲೂಕಿ ನಾದ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಮತದಾರರ ಪಟ್ಟಿ ಸಂಬಂಧ ನಿಯೋಜನೆಗೊಂಡ ಅಧಿಕಾರಿಗಳು ಚುನಾವಣಾ ಕಾರ್ಯವನ್ನು ಜಾಗ್ರತೆಯಿಂದ ಮಾಡುವಂತೆ ಮನವಿ ಮಾಡಿದರು.
ವಿಜೇತರ ಪಟ್ಟಿ: ಕನ್ನಡ ಮಾದ್ಯಮ ಪ್ರಬಂಧ ಸ್ಪರ್ಧೆಯಲ್ಲಿ ಎಚ್‌ಟಿಟಿ ಪ್ರೌಢ ಶಾಲೆಯ ಸಿ.ಸ್ನೇಹ, ಪ್ರಥಮ ಸ್ಥಾನ, ಚೌಳೂರಿನ ಎಸ್‌ವಿಎಸ್ ಪ್ರೌಢಶಾಲೆಯ ಎಂ.ತನುಜ ದ್ವಿತೀಯ, ನಾಯಕನಹಟ್ಟಿಯ ಎಸ್‌ಟಿಎಸ್ ಶಾಲೆಯ ಜಿ.ಎಸ್.ಮಂಜುಳ ತೃತೀಯ ಸ್ಥಾನ, ಆಂಗ್ಲ ಮಾಧ್ಯಮದಲ್ಲಿ ವಾಸವಿ ವಿದ್ಯಾ ಸಂಸ್ಥೆಯ ಜಿ.ಎಲ್.ಜೀವಿತ ಪ್ರಥಮ, ಇನ್‌ಫೆಂಟ್ ಜೀಸಿಸ್ ಶಾಲೆಯ ವಿ.ಗಗನ ದ್ವಿತೀಯ, ಎಚ್‌ಟಿಟಿ ಶಾಲೆಯ ಎಂ.ವಿ.ಕಾವೇರಿ ತೃತೀಯ, ಬಿತ್ತಿ ಪತ್ರ ವಿಭಾಗದಲ್ಲಿ ವಾಸವಿ ವಿದ್ಯಾಸಂಸ್ಥೆಯ ಜೆ.ಎಸ್.ರಿತೀಶ್ ದೊರೆ ಪ್ರಥಮ, ಎಚ್‌ಟಿಟಿ ಶಾಲೆಯ ಎನ್.ಶ್ರಾವಣಿ ದ್ವಿತೀಯ, ನಾಯಕನಹಟ್ಟಿ ಎಸ್‌ಟಿಎಸ್ ಶಾಲೆಯ ಎಂ.ವಿ.ಕಾರ್ತಿಕ್ ತೃತೀಯ ಸ್ಥಾನ. ರಸಪ್ರಶ್ನೆ ವಿಭಾಗದಲ್ಲಿ ಎಚ್‌ಟಿಟಿ ಪ್ರೌಢಶಾಲೆ ವಿ.ರುಚಿತ, ಎಸ್.ದೀಕ್ಷಿತ ಪ್ರಥಮ ಸ್ಥಾನ, ಸಿದ್ದೇಶ್ವರ ನಗರದ ದುರ್ಗ ಪ್ರೌಢಶಾಲೆಯ ಎಸ್.ಎಚ್.ಸುಚಿತ, ಯು.ರಂಗನಾಥ ದ್ವಿತೀಯ, ಪಿ.ಮಹದೇವರಪುರ ಪ್ರೌಢಶಾಲೆಯ ಆರ್.ಅಜಿತ್, ಆರ್.ಧನಂಜಯ ತೃತೀಯಸ್ಥಾನ ಪಡೆದಿದ್ದಾರೆ.ಕಾರ್ಯಕ್ರಮದಲ್ಲಿ ಪ್ರೌಢಶಾಲೆ ಮುಖ್ಯ ಶಿಕ್ಷಕರ ಸಂಘದ ತಾ. ಅಧ್ಯಕ್ಷ ಡಿ.ಟಿ.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಡಿ.ಎಸ್.ಪಾಲಯ್ಯ, ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಿ.ರಾಜಕುಮಾರ್, ಮಾರುತಿ ಭಂಡಾರಿ, ಮೂರ್ತಿ, ಬೋರಯ್ಯ, ಶಿವಮೂರ್ತಿ, ಸುನೀಲ್ ನಾಯ್ಕ, ಶಿವಣ್ಣ, ಡಿ.ಈರಣ್ಣ, ತಿಪ್ಪೇಸ್ವಾಮಿ, ಜ್ಯೋತಿ ಉಪಸ್ಥಿತರಿದ್ದರು.
-----ಪೋಟೋ: ಚಳ್ಳಕೆರೆ ನಗರದ ಬಿಇಒ ಕಚೇರಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಸ್ಪರ್ಧಾತ್ಮಕ ಚಟುವಟಿಕೆಗಳನ್ನು ಬಿಇಒ ಕೆ.ಎಸ್.ಸುರೇಶ್ ಉದ್ಘಾಟಿಸಿದರು.
-----೨೦ಸಿಎಲ್‌ಕೆ೧