ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ
ಆರೋಗ್ಯ ಎನ್ನುವುದು ಎಲ್ಲರಿಗೂ ಎಷ್ಟು ಮಹತ್ವವಾದುದಾಗಿದೆ ಎಂಬುದನ್ನು ಈ ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳವುದು ಪ್ರತಿಯೊಬ್ಬರ ಅಗತ್ಯ ಕರ್ತವ್ಯವಾಗಿದೆ ಎಂದು ಶ್ರೀ ಅಮೃತೇಶ್ವರ ಪ್ರೌಢಶಾಲೆ ಸ್ಥಳೀಯ ಸಲಹಾ ಸಮಿತಿ ಉಪಾಧ್ಯಕ್ಷ ಷಡಕ್ಷರಪ್ಪ ಹೇಳಿದ್ದಾರೆ.ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆಯಿಂದ ಶಾಲೆಯಲ್ಲಿ ಏರ್ಪಡಿಸಿದ್ದ ವಿಶ್ವ ಯೋಗ ದಿನಾಚರಣೆಯಲ್ಲಿ ಮಾತನಾಡಿದರು. ನಾವೆಲ್ಲರೂ ನಮ್ಮ ಆರೋಗ್ಯವನ್ನು ಸಾತ್ವಿಕ ಆರೋಗ್ಯ ಶೈಲಿ ಮೂಲಕ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ದೈಹಿಕ ಶಿಕ್ಷಕ ಪಂಚಾಕ್ಷರಪ್ಪ.ಎಚ್ ಯೋಗದ ವಿವಿಧ ಪ್ರಕಾರಗಳು, ವಿವಿಧ ಆಸನಗಳ ಬಗ್ಗೆ ಮತ್ತು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಔಚಿತ್ಯ ತಿಳಿಸಿದರು. ಅಲ್ಲದೆ ಎಲ್ಲ ಮಕ್ಕಳು ಪ್ರತಿನಿತ್ಯ ಯೋಗಾಸನಗಳನ್ನು ನಿರ್ವಹಿಸುವ ಮೂಲಕ ಚೇತೋಹಾರಿ ಆರೋಗ್ಯ ಮತ್ತು ಮನಸ್ಥಿತಿ ಹೊಂದಬೇಕೆಂದು ತಿಳಿಸಿದರು. ನೇರಲಕೆರೆ ಗ್ರಾಮಸ್ಥ ನವೀನ್ ಮಾತನಾಡಿ ನಮ್ಮೆಲ್ಲರ ಮನಸ್ಸು ಮತ್ತು ಆರೋಗ್ಯದ ಉತ್ತಮ ಸ್ಥಿತಿಗಾಗಿ ಈ ಯೋಗ ಎಷ್ಟು ಅಗತ್ಯವಾಗಿದೆ ಎಂಬುದನ್ನು ವಿವರಿಸಿದರು. ಉತ್ತಮ ಜೀವನ ಶೈಲಿ ಅಳವಡಿಸಿಕೊಳ್ಳುವ ಮೂಲಕ ನಾವೆಲ್ಲರೂ ಸದಾ ಆರೋಗ್ಯವಂತರಾಗೋಣ ಎಂದು ತಿಳಿಸಿದರು. ಮುಖ್ಯೋಪಾಧ್ಯಾಯರಾದ ಹಾಲೇಶ್ ಕೆ ಟಿ ಮಾತನಾಡಿ, ಆರೋಗ್ಯ ಎಂದರೆ ಆರು ವಿಷಯಗಳಲ್ಲಿ ಯೋಗ್ಯ ರಾಗಬೇಕೆಂದು ಹೇಳುತ್ತಾ, ಆ ಆರು ವಿಷಯಗಳು ಯಾವುವು ಎಂದರೆ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳಲ್ಲಿ ಹತೋಟಿ ಹೊಂದಿದ್ದಾಗ ಉತ್ತಮ ಆರೋಗ್ಯವಂತರಾಗಲು ಸಾಧ್ಯ. ಪರಿಸರದ ಉತ್ತಮ ಅಂಶಗಳನ್ನು ಆಸ್ವಾದಿಸುವ ಮೂಲಕ, ಪರಿಸರದ ಭಾಗವಾಗಿ ಬದುಕಿದಾಗ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದು ಹೇಳಿದರು.ಮಕ್ಕಳು ಯೋಗದ ಮಹತ್ವ ಸಾರುವ ಹಾಡಿಗೆ ಮನಮೋಹಕವಾಗಿ ನೃತ್ಯಮಾಡಿ ಮನಸೆಳೆದರು. ಶಿಕ್ಷಕರಾದ ಖಿಜರ್‌ಖಾನ್, ಮಂಜುಳ ಮಲ್ಲಿಗೆವಾಡ,ರಮಾಕಾಂತ್ ಸತೀಶ್ ನಂದಿಹಳ್ಳಿ, ಸವಿತಮ್ಮ ಬಿ, ಗ್ರಾಮಸ್ಥರಾದ ರವಿಯಣ್ಣ, ಹಾಸ್ಟೆಲ್ ನಿಲಯ ಪಾಲಕಿ ಸೌಮ್ಯ, ಪಲ್ಲವಿ, ಬಿಸಿಯೂಟ ತಯಾರಕರಾದ ಭಾಗ್ಯಮ್ಮ, ರತ್ನಮ, ಆಶಾ ಕಾರ್ಯ ಕರ್ತೆಯರು ಮತ್ತಿತರರು ಭಾಗವಹಿಸಿದ್ದರು.23ಕೆಟಿಆರ್.ಕೆ.1ಃತರೀಕೆರೆ ಸಮೀಪದ ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆಯಿಂದ ಏರ್ಪಡಿಸಿದ್ದ ವಿಶ್ವ ಯೋಗ ದಿನಾಚರಣೆ ಉದ್ಘಾಟನೆಯನ್ನು ಶಾಲೆ ಸಲಹಾ ಸಮಿತಿ ಷಡಾಕ್ಷರಪ್ಪ ನೆರವೇರಿಸಿದರು. ಮುಖ್ಯೋಪಾಧ್ಯಾಯಹಾಲೇಶ್ ಕೆ ಟಿ ಮತ್ತಿತರರು ಇದ್ದರು.