ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮುಧೋಳ ಮತಕ್ಷೇತ್ರ : ಬೆಳಗಲಿ (ಮಸಂ.4), ಮುಧೋಳ (ಮಸಂ.102), ಚನ್ನಾಳ (ಮ.ಸಂ.124), ಕಸಬಾಜಂಬಗಿ (ಮಸಂ.158) ಹಾಗೂ ಲೋಕಾಪುರ (ಮ.ಸಂ.206)ರಲ್ಲಿ ಮಹಿಳಾ ಸಖಿ ಮತಗಟ್ಟೆ ಸ್ಥಾಪಿಸಿದರೆ, ಲೋಕಾಪುರದ ಉರ್ದು ಬಾಲಕರ ಶಾಲೆ (ಮ.ಸಂ.198) ಯುವ ಮತಗಟ್ಟೆ, ಅಳಗುಂಡಿ ಬಿ.ಕೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಮ.ಸಂ.164)ರಲ್ಲಿ ವಿಶೇಷ ಚೇತನರ, ಬರಗಿ ಗ್ರಾಪಂ ಕಾರ್ಯಾಲಯ (ಮ.ಸಂ.149) ರಲ್ಲಿ ಥೀಮ್ ಆಧಾರಿತ ಹಾಗೂ ಮುಧೋಳ ಎಸ್.ಆರ್.ಕಂಠಿ ಕಾಲೇಜು (ಮ.ಸಂ.85) ರಲ್ಲಿ ಸಾಂಪ್ರಾಯಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ತೇರದಾಳ ಮತಕ್ಷೇತ್ರ :ಬನಹಟ್ಟಿಯ (ಮ.ಸಂ.140), ಮಹಾಲಿಂಗಪುರ (ಮ.ಸಂ.192), ತೇರದಾಳ (ಮ.ಸಂ.21), ನಾವಲಗಿಯ (ಮ.ಸಂ.66) ಹಾಗೂ ಚಿಮ್ಮಡ (ಮ.ಸಂ.177) ರಲ್ಲಿ ಮಹಿಳಾ ಸಖಿ ಮತಗಟ್ಟೆ ಸ್ಥಾಪಿಸಲಾಗಿದೆ. ತೇರದಾಳ ದೇವರಾಜ ನಗರದ (ಮ.ಸಂ.5)ರಲ್ಲಿ ಯುವ ಮತಗಟ್ಟೆ, ಬನಹಟ್ಟಿ (ಮ.ಸಂ.128)ರಲ್ಲಿ ವಿಕಲಚೇತನರ, ರಾಂಪುರದ ಸರ್ಕಾರಿ ಪ್ರಾಥಮಿಕ ಶಾಲೆ (ಮಸಂ.109) ರಲ್ಲಿ ಥೀಮ್ ಆಧಾರಿತ ಹಾಗೂ ರಾಂಪುರ (ಮಸಂ.111) ರಲ್ಲಿ ಸಾಂಪ್ರದಾಯಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಬೀಳಗಿ ಮತಕ್ಷೇತ್ರ :ಸಿದ್ದಾಪುರ ಗ್ರಾಮದ (ಮ.ಸಂ.54), ಕೊರ್ತಿ ಗ್ರಾಮದ (ಮ.ಸಂ.21), ಕಂದಗಲ್ಲ ಗ್ರಾಮದ (ಮ.ಸಂ.94) ನಾಗರಾಳ ಗ್ರಾಮದ (ಮ.ಸಂ.55) ಮತ್ತು ಬೀಳಗಿ ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ (ಮ.ಸಂ.76)ರಲ್ಲಿ ಮಹಿಳಾ ಸಖಿ ಮತಗಟ್ಟೆ ಸ್ಥಾಪಿಸಿದರೆ, ಮುತ್ತಲದಿನ್ನಿ ಆರ್.ಸಿ ಗ್ರಾಮದ (ಮ.ಸಂ.65) ರಲ್ಲಿ ಯುವ ಮತಗಟ್ಟೆ, ಬಾಡಗಂಡಿ ಗ್ರಾಮದ (ಮಸಂ.73)ರಲ್ಲಿ ವಿಕಲಚೇತನರ, ಸುನಗ ಗ್ರಾಮದ (ಮ.ಸಂ.103)ರಲ್ಲಿ ಥೀಮ್ ಆಧಾರಿತ ಹಾಗೂ ಅನಗವಾಡಿ ಗ್ರಾಮದ (ಮ.ಸಂ.139) ರಲ್ಲಿ ಸಾಂಪ್ರದಾಯಿಕ ಮತಗಟ್ಟೆ ಸ್ಥಾಪಿಸಲಾಗಿದೆ.ಬಾದಾಮಿ ಮತಕ್ಷೇತ್ರ :
ಬಾದಾಮಿ ಆಶ್ರಮ ಶಾಲೆ (ಮ.ಸಂ.163), ಗುಳೇದಗುಡ್ಡ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜು (ಮ.ಸಂ.23), ಬಾದಾಮಿ ಕನ್ನಡ ಬಾಲಕರ ಶಾಲೆ (ಮ.ಸಂ.150), ಖಾನಾಪುರ ಗ್ರಾಮದ (ಮ.ಸಂ.104) ಮತ್ತು ಅಡಗಲ್ಲ ಗ್ರಾಮದ (ಮ.ಸಂ.119) ರಲ್ಲಿ ಸಖಿ ಮತಗಟ್ಟೆ, ಗುಳೇದಗುಡ್ಡ ಭಂಡಾರಿ ಕಾಲೇಜು (ಮ.ಸಂ.44)ರಲ್ಲಿ ಯುವ ಮತಗಟ್ಟೆ, ಯರಗೊಪ್ಪ ಎಸ್.ಬಿ. ಗ್ರಾಮದ (ಮಸಂ.220) ರಲ್ಲಿ ವಿಕಲಚೇತನರ, ಬಾದಾಮಿ ಸರ್ಕಾರಿ ಕನ್ನಡ ಎಚ್ಪಿಎಸ್ ಶಾಲೆ (ಮ.ಸಂ.171)ರಲ್ಲಿ ಥೀಮ್ ಆಧಾರಿತ ಹಾಗೂ ಹಂಸನೂರ ಗ್ರಾಮದ ಗ್ರಾಪಂ ಕಾರ್ಯಾಲಯ (ಮ.ಸಂ.84)ರಲ್ಲಿ ಸಾಂಪ್ರದಾಯಿಕ ಮತಗಟ್ಟೆ ಸ್ಥಾಪಿಸಲಾಗಿದೆ.ಬಾಗಲಕೋಟೆ ಮತಕ್ಷೇತ್ರ :
ನವನಗರ ಸರ್ಕಾರಿ ಮಾದರಿ ಕನ್ನಡ ಬಾಲಕರ ಶಾಲೆ ನಂ.7 (ಮ.ಸಂ.166), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಮ.ಸಂ.179), ಸೆಕ್ಟರ್ ನಂ.15 ಸರ್ಕಾರಿ ಕನ್ನಡ ಬಾಲಕರ ಶಾಲೆ (ಮ.ಸಂ.144), ಬೆವಿನಮಟ್ಟಿ ಗ್ರಾಮದ (ಮ.ಸಂ.197) ಮತ್ತು ಬೋಡನಾಯಕನದಿನ್ನಿ ಗ್ರಾಮದ (ಮ.ಸಂ.40) ರಲ್ಲಿ ಸಖಿ ಮತಗಟ್ಟೆ, ವಿದ್ಯಾಗಿರಿ ಸೇಂಟ್ ಅನ್ನಿಸ್ ಕಾನ್ವೆಂಟ್ ಹೈ ಸ್ಕೂಲ್ (ಮ.ಸಂ.89)ರಲ್ಲಿ ಯುವ ಮತಗಟ್ಟೆ, ಬಾಗಲಕೋಟೆ ಮೋಟಗಿ ಬಸವೇಶ್ವರ ಪೂರ್ವ ಪ್ರಾಥಮಿಕ ಶಾಲೆ (ಮ.ಸಂ.119) ರಲ್ಲಿ ವಿಕಲಚೇತನರ, ವಿದ್ಯಾಗಿರಿ ಸರ್ಕಾರಿ ಕನ್ನಡ ಬಾಲಕರ ಶಾಲೆ(ಬಿಟಿಡಿಎ) (ಮ.ಸಂ.80)ರಲ್ಲಿ ಥೀಮ್ ಆಧಾರಿತ, ಮುಚಖಂಡಿ ಎಲ್.ಟಿ ದುರ್ಗಾದೇವಿ ನಗರ (ಮ.ಸಂ.191) ರಲ್ಲಿ ಸಾಂಪ್ರದಾಯಿಕ ಮತಗಟ್ಟೆ ಸ್ಥಾಪಿಸಲಾಗಿದೆ.ಹುನಗುಂದ ಮತಕ್ಷೇತ್ರ :
ಹುನಗುಂದ ವಿ.ಎಂ. ಪ್ರೌಢಶಾಲೆ (ಮ.ಸಂ.84), ಇಳಕಲ್ಲ ಸಿಎಂಸಿ (ಮ.ಸಂ.157), ಇಳಕಲ್ಲ ಸಜ್ಜನ ಪ್ರೌಢಶಾಲೆ (ಮ.ಸಂ.159), ಧನ್ನೂರ ಕರ್ನಾಟಕ ಪಬ್ಲಿಕ್ ಸ್ಕೂಲ್ (ಮ.ಸಂ.12), ಸುಳಿಭಾವಿ ರಾಮಯ್ಯಸ್ವಾಮಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ (ಮ.ಸಂ.103)ರಲ್ಲಿ ಸಖಿ ಮತಗಟ್ಟೆ, ಇಳಕಲ್ಲ ಮಾರ್ಖಂಡೇಯ ನೇಕಾರ ಸಹಕಾರ ಸಂಘ (ಮ.ಸಂ.176)ರಲ್ಲಿ ಯುವ ಮತಗಟ್ಟೆ, ತಳ್ಳಿಕೇರಿ ಗ್ರಾಮದ (ಮ.ಸಂ.131)ರಲ್ಲಿ ವಿಕಲಚೇತನರ, ಕರಡಿ ಗ್ರಾಮದ (ಮ.ಸಂ.45)ರಲ್ಲಿ ಥೀಮ್ ಆಧಾರಿತ ಹಾಗೂ ಸಂಗಮದಲ್ಲಿ ಸಂಗಮೇಶ್ವರ ಹೈಯರ್ ಸೆಕೆಂಡರಿ ಶಾಲೆ (ಮ.ಸಂ.8) ರಲ್ಲಿ ಸಾಂಪ್ರದಾಯಿಕ ಆಧಾರಿತ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಸಿಇಒ ಶಶಿಧರ ಕುರೇರ್ ತಿಳಿಸಿದ್ದಾರೆ.