ಕನ್ನಡಪ್ರಭ ವಾರ್ತೆ ಮಧುಗಿರಿ
ಬುಧವಾರ ತಾಲೂಕಿನ ಕೊಡಿಗೇನಹಳ್ಳಿ ಗ್ರಾಪಂ ಆವರಣದಲ್ಲಿ ಏರ್ಪಡಿಸಿದ್ದ ಹೋಬಳಿ ಮಟ್ಟದ ಜನಸ್ಪಂದನಾ ಹಾಗೂ ವಸತಿ ಮಂಜೂರಾತಿ ಆದೇಶ ಪತ್ರ, ನಿವೇಶನ ಹಕ್ಕುಪತ್ರ, ಇತರೆ ಕಂದಾಯ ಗ್ರಾಮ ಹಕ್ಕು ಪತ್ರ , ಮಾಸಾಶನ, ವಿಧವಾ ಸೌಲಭ್ಯಗಳ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪೋಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಕೌಶಲ್ಯ ಕಲಿಸಿ ಶ್ರಮಜೀವಿಗಳು ಮಾಡುವ ಕೆಲಸವನ್ನೇ ಮಕ್ಕಳು ಮಾಡಬಾರದು. ವಿದ್ಯಾವಂತರಾಗಿ ಬೇರೆ ಕೆಲಸ ಮಾಡಲಿ ಮಕ್ಕಳಲ್ಲಿ ಸ್ವಾಭಿಮಾನದ ಕಿಟ್ಟು ಹಚ್ಚಬೇಕು. ಕೊಡಿಗೇನಹಳ್ಳಿ ಹೋಬಳಿಗೆ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಪ್ರಾರಂಭಿಸಿದ್ದೇವೆ. ಇಲ್ಲಿ ಕೈಗಾರಿಕೆ ಬೆಳೆಯಲು ಅವಕಾಶ ಕಲ್ಪಿಸಲಾಗಿದ್ದು ಆ ಮೂಲಕ ಈ ಭಾಗದ ಅಭಿವೃದ್ಧಿಗೆ ನಾಂದಿ ಹಾಡಲಾಗಿದೆ ಎಂದರು.268 ಕೋಟಿ ರು.ವೆಚ್ಚದಲ್ಲಿ ತಾಲೂಕಿನ 45 ಕೆರೆಗಳಿಗೆ ಎತ್ತಿನ ಹೊಳೆ ನೀರುಣಿಸುವ ಕಾಮಗಾರಿ ಬರದಿಂದ ಸಾಗಿದೆಮುಂದಿನ ಮಾರ್ಚ್ ವೇಳೆಗೆ ನೀರು ಹರಿಸುವ ಗುರಿಯಿದೆ. ಭೂಮಿ ಮಾಲೀಕರು ತಮ್ಮ ಭೂಮಿಗೆ ಸಂಬಂಧಪಟ್ಟ ದಾಖಲೆ ಪತ್ರಗಳನ್ನು ಸರಿಯಾಗಿ ಇಟ್ಟುಕೊಳ್ಳಿ. ಭೂಮಿ ಬೆಲೆ ಏರುತ್ತಿದೆ. ಲಭ್ಯತೆ ಕಡಿಮೆಯಿದೆ ಜನಸಂಖ್ಯೆ ಹೆಚ್ಚಾಗುತ್ತಿದೆ. ಪಕ್ಷ ಭೇದವಿಲ್ಲದೆ ಮೂಲಸೌಲಭ್ಯಗಳಿಂದ ವಂಚಿತರು ಸರ್ಕಾರದ ಸೌಲಭ್ಯ ಪಡೆದು ನೆಮ್ಮದಿಯ ಜೀವನ ನಡೆಸಬೇಕು ಎಂದರು.
ಎಸಿ ಗೋಟೂರು ಶಿವಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೊಡಿಗೇನಹಳ್ಳಿ ಗ್ರಾಪಂ ಅಧ್ಯಕ್ಷೆ ಆಂಜಿನಮ್ಮ. ಉಪಾಧ್ಯಕ್ಷೆ ಶಬೀನಾ, ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿನಾರಾಯಣರೆಡ್ಡಿ, ಗೋಪಾಲಯ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶಬಾಬು, ಇಂದಿರಾ, ಸುವರ್ಣಮ್ಮ, ಜಿ.ಡಿ.ವೆಂಕಟೇಶ್, ತಹಸೀಲ್ದಾರ್ ಶ್ರೀನಿವಾಸ್ , ಇಒ ಲಕ್ಷ್ಮಣ್, ಬೆಸ್ಕಾಂ ಇಇ ಜಗದೀಶ್, ಡಿಡಿಪಿಐ ಮಾದವರೆಡ್ಡಿ. ಬಿಇಓ ಕೆ.ಎನ್.ಹನುಮಂತರಾಯಪ್ಪ ಇತರರಿದ್ದರು.