ರಾಜ್ಯದಲ್ಲಿ ಕನ್ನಡ ಫಿಲಂ ಚೇಂಬರ್ ಸ್ಥಾಪನೆ: ಡಾ.ಪ್ರಹ್ಲಾದ್‌

KannadaprabhaNewsNetwork |  
Published : Jun 01, 2024, 12:45 AM IST
31ಕೆಡಿವಿಜಿ5-ದಾವಣಗೆರೆಯಲ್ಲಿ ಶುಕ್ರವಾರ ಕನ್ನಡ ಫಿಲಂ ಚೇಂಬರ್ ಉಪಾಧ್ಯಕ್ಷ ಡಾ.ಪ್ರಹ್ಲಾದ ಇತರರು ಸುದ್ದಿಗೋಷ್ಟಿಯಲ್ಲಿ ಸಂಸ್ಥೆ ಪೋಸ್ಟರ್ ಪ್ರದರ್ಶಿಸಿದರು. | Kannada Prabha

ಸಾರಾಂಶ

ಕನ್ನಡ ಚಿತ್ರರಂಗದ ಹಿತದೃಷ್ಟಿಯಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪರ್ಯಾಯವಾಗಿ ಕನ್ನಡ ಫಿಲಂ ಚೇಂಬರ್ ಆರಂಭಿಸಿರುವುದಾಗಿ ಚೇಂಬರ್ ಉಪಾಧ್ಯಕ್ಷ ಡಾ.ಪ್ರಹ್ಲಾದ್ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪರ್ಯಾಯ ಸಂಸ್ಥೆ - ಚಿತ್ರರಂಗದ ಎಲ್ಲ ವಿಭಾಗವನ್ನೂ ಒಳಗೊಂಡ ಚೇಂಬರ್: ಉಪಾಧ್ಯಕ್ಷ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಕನ್ನಡ ಚಿತ್ರರಂಗದ ಹಿತದೃಷ್ಟಿಯಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪರ್ಯಾಯವಾಗಿ ಕನ್ನಡ ಫಿಲಂ ಚೇಂಬರ್ ಆರಂಭಿಸಿರುವುದಾಗಿ ಚೇಂಬರ್ ಉಪಾಧ್ಯಕ್ಷ ಡಾ.ಪ್ರಹ್ಲಾದ್ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಹಿರಿಯ ಕಲಾವಿದರು, ಹೊಸ ಕಲಾವಿದರು ಜೊತೆಗೂಡಿ ನೂತನವಾಗಿ ಕನ್ನಡ ಫಿಲಂ ಚೇಂಬರ್ ಸ್ಥಾಪಿಸಲಾಗಿದೆ. ನಮ್ಮಲ್ಲಿ ಸಿನಿಮಾಗೆ ಸಂಬಂಧಿಸಿದ ಕಲಾವಿದರು, ನಿರ್ದೇಶಕರು, ಕ್ಯಾಮೆರಾಮನ್‌ಗಳು, ಸಂಗೀತ, ನೃತ್ಯ, ಫೈಟ್ ಮಾಸ್ಟರ್ ಸೇರಿದಂತೆ ಎಲ್ಲ ವಿಭಾಗದವರೂ ₹2 ಸಾವಿರ ನೋಂದಣಿ ಶುಲ್ಕ ನೀಡಿ, ಆಜೀವ ಸದಸ್ಯತ್ವ ಪಡೆಯಬಹುದು ಎಂದರು.

ಸಂಸ್ಥೆಯಿಂದ ಸದಸ್ಯರಿಗೆ ಗುರುತಿನ ಪತ್ರವನ್ನು ನೀಡಲಾಗುವುದು. ನಿರ್ಮಾಪಕರ ಮೂವಿ ಬ್ಯಾನರ್ ಲೈಫ್ ಟೈಮ್ ಸದಸ್ಯತ್ವಕ್ಕೆ ₹5 ಸಾವಿರ ಹಾಗೂ ಮೂವಿ ಟೈಟಲ್‌ಗೆ ₹500 ನಿಗದಿಪಡಿಸಲಾಗಿದೆ. ನೋಂದಾಯಿತ ಸದಸ್ಯರಿಗೆ ಕನ್ನಡ ಫಿಲಂ ಚೇಂಬರ್‌ ಚುನಾವಣೆಯಲ್ಲಿ ಮತದಾನದ ಹಕ್ಕು ಹಾಗೂ ಸ್ಪರ್ಧಿಸಲು ಅವಕಾಶ ಇರುತ್ತದೆ. ಈಗಾಗಲೇ 19 ನಿರ್ಮಾಪಕರು, 384 ಕಲಾವಿದರು, ತಂತ್ರಜ್ಞರು ಚೇಂಬರ್‌ನಲ್ಲಿ ನೋಂದಣಿ ಮಾಡಿಸಿದ್ದಾರೆ ಎಂದು ಹೇಳಿದರು.

ಈಗಿರುವ ಫಿಲಂ ಚೇಂಬರ್‌ನಲ್ಲಿ ಕೇವಲ ಚಿತ್ರ ನಿರ್ಮಾಪಕರು, ವಿತಕರಕರು, ಪ್ರದರ್ಶಕರರಿಗೆ ಮಾತ್ರ ಸದಸ್ಯತ್ವ ಇದೆ. ಆಧರೆ, ಸಿನಿಮಾ ಕೇವಲ ಈ ಮೂವರಿಂದಲೇ ಆಗುವುದಿಲ್ಲ. ಹಾಗಾಗಿ, ಸಿನಿಮಾದ ಎಲ್ಲ ವಿಭಾಗದವರನ್ನೂ ಸೇರಿಸಿಕೊಂಡು, ಹೊಸದಾಗಿ ಕನ್ನಡ ಫಿಲಂ ಚೇಂಬರ್ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.

ಚೇಂಬರ್ ಪದಾಧಿಕಾರಿಗಳಾದ ನರಸಿಂಹಯ್ಯ, ಅಂಜಿನಪ್ಪ, ನಿವೃತ್ತ ಪೊಲೀಸ್ ಅಧೀಕ್ಷಕ ಎನ್.ರುದ್ರಮುನಿ, ಜಗನ್ನಾಥ, ಚಿರತೆ ನಾಗರಾಜ ಇತರರು ಇದ್ದರು.

- - - -31ಕೆಡಿವಿಜಿ5:

ದಾವಣಗೆರೆಯಲ್ಲಿ ಶುಕ್ರವಾರ ಕನ್ನಡ ಫಿಲಂ ಚೇಂಬರ್ ಉಪಾಧ್ಯಕ್ಷ ಡಾ.ಪ್ರಹ್ಲಾದ ಇತರರು ಸುದ್ದಿಗೋಷ್ಟಿಯಲ್ಲಿ ಸಂಸ್ಥೆ ಪೋಸ್ಟರ್ ಪ್ರದರ್ಶಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ