ಕನ್ನಡಪ್ರಭ ವಾರ್ತೆ ಔರಾದ್
ರಾಜ್ಯದಲ್ಲೆ ಪ್ರಥಮ ಬಾರಿಗೆ 2500 ಕೆ.ವಿ ವಿದ್ಯುತ್ ಟ್ರಾನ್ಸ್ ಮಿಶನ್(ಪರಿವಾಹಕ) ಕೇಂದ್ರ ಕಮಲನಗರ ತಾಲೂಕಿನ ಚಿಮ್ಮೆಗಾಂವ ಗ್ರಾಮದ ಬಳಿ ಸ್ಥಾಪನೆಯಾಗುತ್ತಿದೆ.ಇಲ್ಲಿಂದ ಹೈದ್ರಾಬಾದ್ ನ ಮಹೇಶ್ವರಂವರೆಗೆ ಡಬಲ್ ಸರ್ಕಿಟ್ ಲೈನ್ ಸಂಪರ್ಕಿಸುವ ಈ ಕೇಂದ್ರ ಸರ್ಕಾರದ ಸಹಯೋಗದ ಯೋಜನೆಗೆ 2147 ಕೋಟಿ ರು. ವೆಚ್ಚದಲ್ಲಿ 163 ಎಕರೆ ಜಮಿನಿನಲ್ಲಿ ಈಗಾಗಲೆ ನಿರ್ಮಾಣ ಕಾರ್ಯ ಆರಂಭವಾಗಿದೆ. ಇದು ವಿದ್ಯುತ್ ಪರಿವಹನ ಕೇಂದ್ರವಾಗಿದ್ದು, ವಿದ್ಯುತ್ ಉತ್ಪಾದನೆ ಘಟಕವಲ್ಲ. ಸೋಲಾರ್ ಪಾರ್ಕ್ ನಿರ್ಮಾಣವಾದ ಮೇಲೆ ಈ ಭಾಗದಲ್ಲಿ ವಿದ್ಯುತ್ ಉತ್ಪಾದನೆ ಕೂಡ ಜೋರಾಗಿ ನಡೆಯಲಿದೆ.
12000 ಎಕರೆಯ ಸೋಲಾರ ಪಾರ್ಕ್ :ಔರಾದ್ ಹಾಗೂ ಕಮಲನಗರ ತಾಲೂಕಿನ ಒಟ್ಟು ಈ ಭಾಗದಲ್ಲಿ ಅಂದಾಜು 12000 ಎಕರೆ ಜಮಿನಿನಲ್ಲಿ ಸೋಲಾರ್ ಪಾರ್ಕ ನಿರ್ಮಾಣ ಮಾಡಲಾಗ್ತಿದೆ. ಇದಕ್ಕಾಗಿ ರೈತರಿಂದ ಭೂಮಿಯನ್ನು ಬಾಡಿಗೆಯಲ್ಲಿ ಪಡೆಯಲು ಹಲವು ಸೋಲಾರ್ ಕಂಪನಿಗಳು ಕೆಲಸ ಮಾಡ್ತಿವೆ.
ಒಂದು ಎಕರೆ ಜಮಿನಿಗೆ ವಾರ್ಷಿಕ 30 ಸಾವಿರ ರು. ಬಾಡಿಗೆ 29 ವರ್ಷಗಳ ಒಪ್ಪಂದ ಹಾಗೂ ಪ್ರತಿ ವರ್ಷಕ್ಕೆ ಶೇ.5 ರಷ್ಟು ಬಾಡಿಗೆ ಹೆಚ್ಚಳ ಮಾಡಿಕೊಂಡು ರೈತರ ಭೂಮಿಯನ್ನು ಕೆಲವೊಂದು ಖಾಸಗಿ ಸೋಲಾರ್ ಕಂಪನಿಗಳು ಕಾರ್ಯ ಆರಂಭಿಸಿವೆ.ತಾಲೂಕಿನ ಬೊಂತಿ, ಸಾವರಗಾಂವ್, ಲಿಂಗಿ, ಧೋಪರವಾಡಿ, ಹಂದಿಖೇರಾ, ಚಿಮ್ಮೆಗಾಂವ್, ಕರಕ್ಯಾಳ, ಹುಲ್ಯಾಳ, ವಾಗನಗೇರಾ, ಮುರ್ಕಿ ಸೇರಿದಂತೆ ಹಲವು ಗ್ರಾಮಗಳ ರೈತರು ತಮ್ಮ ಜಮಿನು ಸೋಲಾರ ಪಾರ್ಕ್ ನಿರ್ಮಾಣಕ್ಕೆ ಬಾಡಿಗೆಗೆ ನೀಡಲು ಮುಂದಾಗಿದ್ದಾರೆ.
ಒಟ್ಟನಲ್ಲಿ ಬಯಲು ಸೀಮೆಯ ತುತ್ತ ತುದಿಯ ಔರಾದ್ ಕ್ಷೇತ್ರದಲ್ಲಿ ರಾಜ್ಯಕ್ಕೆ ಮೊದಲ ವಿದ್ಯುತ್ ಟ್ರಾನ್ಸಮಿಶನ್ ಸ್ಥಾಪನೆಯಾಗ್ತಿರುವುದು ಒಣ ಬೇಸಾಯದಿಂದ ಕೈ ಸುಟ್ಟುಕೊಂಡಿದ್ದ ಅನ್ನದಾತರಆರ್ಥಿಕ ಸಬಲಿಕರಣ ಹಾಗೂ ನಿರೂದ್ಯೋಗಿ ಯುವಕರ ಪಾಲಿಗೆ ಉದ್ಯೋಗದ ಕನಸು ನನಸಾಗುವ ಕಾಲಕ್ಕೆ ತಂದಿದೆ.2026ರ ಫೆಬ್ರವರಿಗೆ ಲೋಕಾರ್ಪಣೆ ಗುರಿ
ರಾಜ್ಯದಲ್ಲೆ ಮೊದಲ ಬಾರಿಗೆ 765/400/275 ಇಷ್ಟೊಂದು ದೊಡ್ಡ ಮಟ್ಟದ ಟ್ರಾನ್ಸ್ ಮಿಶನ್ ಕೇಂದ್ರ ಸ್ಥಾಪನೆಗೆ ಪವರ್ ಗಿರ್ಡ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ ನಡೆಸುತ್ತಿದೆ. ಸುಮಾರು 2500 ಕೆ.ವಿ ವಿದ್ಯುತ್ ಸಾಮರ್ಥ್ಯದ ಕೇಂದ್ರ ಇದಾಗಿದೆ ಎಂದು ಸಂಸ್ಥೆಯ ಹಿರಿಯ ವ್ಯವಸ್ಥಾಪಕ ಗಣೇಶ ಅವರು ಹೇಳಿದ್ದಾರೆ.ಈಗಾಗಲೆ ರೈತರಿಂದ ಜಮಿನು ಖರೀದಿಸಿದ್ದು ಕಾಮಗಾರಿ ಕೂಡ ಆರಂಭವಾಗಿದೆ. ಪ್ರತಿ ರೈತರ ಜಮೀನಿಗೆ ಜಿಲ್ಲಾಡಳಿತ ನಿಗದಿಪಡಿಸಿದ ಅನುದಾನ ಕೂಡ ಒದಗಿಸಲಾಗಿದೆ. ಯೋಜನೆಯನ್ನು 2026 ರ ಫೆಬ್ರವರಿ ತಿಂಗಳಲ್ಲಿ ಲೋಕಾರ್ಪಣೆ ಮಾಡುವ ಗುರಿ ಹೊಂದಲಾಗಿದೆ ಎಂದು ಗಣೇಶ ಅವರು ತಿಳಿಸಿದ್ದಾರೆ.ವಿದ್ಯುತ್ ಟ್ರಾನ್ಸ್‌ಮಿಶನ್ ಕೇಂದ್ರಕ್ಕೆ ಚವ್ಹಾಣ ಭೇಟಿಕಮಲನಗರ: ಅತ್ಯಂತ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿಯಿರುವ ಕಮಲನಗರ ತಾಲೂಕಿನ ಚಿಮ್ಮೇಗಾಂವ ಬಳಿ ನಿರ್ಮಿಸಲಾಗುತ್ತಿರುವ ಸೋಲಾರ್ ಪವರ್ ಗ್ರಿಡ್ ಸ್ಥಳಕ್ಕೆ ಶುಕ್ರವಾರ ಶಾಸಕ ಪ್ರಭು ಬಿ.ಚವ್ಹಾಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನೂತನವಾಗಿ 163 ಏಕರೆ ಪ್ರದೇಶದಲ್ಲಿ ಸ್ಥಳ ಪರಿಶೀಲನೆ ನಂತರದಲ್ಲಿ ನಿರ್ಮಿಸಲಾಗುತ್ತಿದ್ದು 2500 ಮೆ. ವ್ಯಾ. ಸೋಲಾರ್ ವಿದ್ಯುತ್ ಗ್ರಿಡ್ ಉತ್ಪಾದನೆ ಮಾಡಲಾಗುವುದು ಎಂದು ಹೇಳಿದರು.ತಾಲೂಕಿನ ಸೋಲಾರ್ ಪಾರ್ಕ್‌ಗೆ ಉನ್ನತ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿ, ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ ಸೋಲಾರ್ ಪಾರ್ಕ ನಾನು ತಂದಿದ್ದೇನೆ ಎಂದ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರ ಅಭಿವೃದ್ಧಿ ದೃಷ್ಟಿಯಿಂದ ಬರದ ನಾಡಿನಲ್ಲಿ ನಿರ್ಮಿಸಲಾಗುತ್ತಿದ್ದು.ಈ ಯೋಜನೆ ಹಿತ ದೃಷ್ಟಿಯಿಂದ ರೈತರಿಗೆ ಯಾವುದೇ ರೀತಿಯ ಅನ್ಯಾಯ ಆಗಬಾರದು ಎಂದು ಶಾಸಕರು ಅಧಿಕಾರಿಗೆ ಸೂಚನೆ ನೀಡಿದರು.
ಕಮಲನಗರ್ ತಾಲೂಕಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿರುವಂತಹ ನಿರುದ್ಯೋಗಿ ವಿದ್ಯಾರ್ಥಿಗಳಿಗೆ, ಮತ್ತು ಜಮಿನು ಕಳೆದುಕೊಂಡ ರೈತರ ಮಕ್ಕಳಿಗೆ ವಿದ್ಯಾರ್ಹತೆ ಅನುಸಾರವಾಗಿ ಪ್ರಥಮಾದ್ಯತೆ ಮೇರೆಗೆ ಉದ್ಯೋಗ ಒದಗಿಸುವುದೇ ನನ್ನ ಮುಖ್ಯ ಗುರಿಯಿದೆ ಎಂದು ಶಾಸಕರು ಹೇಳಿದರು.ಚಿಮ್ಮೇಗಾಂವ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅನಿಲ್ ಕುಮಾರ್ ಬಿರಾದಾರ್ ರೈತರಿಗೆ ಹೊಲಕ್ಕೆ ಹೋಗಲು ಮತ್ತು ಬರಲು ಕಂಪನಿ ಒಳಗಡೆಯಿಂದ ರಸ್ತೆ ಕೊಡಬೇಕಾಗಿ ಮನವಿ ಮಾಡಿದರು. ಪವರ್ ಗ್ರಿಡ್ ಉಪ ಪ್ರಧಾನ ವ್ಯವಸ್ಥಾಪಕ ವಿ. ಗಣೇಶ್ ಈ ಕಾಮಗಾರಿಯೂ 2026ರ ಫೆಬ್ರುವರಿ ಒಳಗೆ ಮುಕ್ತಾಯ ಮಾಡಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ತಹಸಿಲ್ದಾರ್ ಅಮಿತ್ ಕುಮಾರ್ ಕುಲಕರ್ಣಿ ಹಾಗೂ ಅನೇಕ ರೈತರು ಹಾಜರಿದ್ದರು.