ಎಸ್ಟೇಟ್ ಕಳ್ಳತನ ಪ್ರಕರಣ: ಚಿನ್ನ, ನಗದು ವಶಕ್ಕೆ ಪಡೆದ ಪೊಲೀಸರು

KannadaprabhaNewsNetwork |  
Published : Nov 07, 2025, 01:45 AM IST
ಚಿನ್ನ, ಬೆಳ್ಳಿ ಮತ್ತು ನಗದು ವಶಕ್ಕೆ ಪಡೆದ ಕೊಪ್ಪ ಪೊಲೀಸರು | Kannada Prabha

ಸಾರಾಂಶ

ಕೊಪ್ಪ: ಎಸ್ಟೇಟ್ ಕಳ್ಳತನ ಪ್ರಕರಣ ಒಂದರಲ್ಲಿ ವಶಕ್ಕೆ ಪಡೆದ ವಾಹನಗಳ ಶೋಧ ಕಾರ್ಯದ ವೇಳೆಯಲ್ಲಿ ೫೯೫.೫ ಗ್ರಾಂ ತೂಕದ ಚಿನ್ನಾಭರಣ ಮತ್ತು ೫೮೯ ಗ್ರಾಂ ತೂಕದ ಬೆಳ್ಳಿ ವಸ್ತುಗಳು ಹಾಗೂ ₹೩,೪೧,೧೫೦ ನಗದು ಹಣ ಸಿಕ್ಕಿದ್ದು ಸದರಿ ಸ್ವತ್ತನ್ನು ವಶಕ್ಕೆ ಪಡೆದು ಪೊಲೀಸರು ಸೂಕ್ತ ಕಾನೂನು ಕ್ರಮ ಜರುಗಿಸಿದ್ದಾರೆ.

ಕೊಪ್ಪ: ಎಸ್ಟೇಟ್ ಕಳ್ಳತನ ಪ್ರಕರಣ ಒಂದರಲ್ಲಿ ವಶಕ್ಕೆ ಪಡೆದ ವಾಹನಗಳ ಶೋಧ ಕಾರ್ಯದ ವೇಳೆಯಲ್ಲಿ ೫೯೫.೫ ಗ್ರಾಂ ತೂಕದ ಚಿನ್ನಾಭರಣ ಮತ್ತು ೫೮೯ ಗ್ರಾಂ ತೂಕದ ಬೆಳ್ಳಿ ವಸ್ತುಗಳು ಹಾಗೂ ₹೩,೪೧,೧೫೦ ನಗದು ಹಣ ಸಿಕ್ಕಿದ್ದು ಸದರಿ ಸ್ವತ್ತನ್ನು ವಶಕ್ಕೆ ಪಡೆದು ಪೊಲೀಸರು ಸೂಕ್ತ ಕಾನೂನು ಕ್ರಮ ಜರುಗಿಸಿದ್ದಾರೆ. ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್ಟೇಟ್ ಒಂದರಲ್ಲಿ ಈ ಹಿಂದೆ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದರಿ ಪ್ರಕರಣದಲ್ಲಿ ಮೂವರು ಆರೋಪಿಗಳು ಕೃತ್ಯಕ್ಕೆ ಬಳಸಿದ ಎರಡು ವಾಹನಗಳನ್ನು ವಶಕ್ಕೆ ಪಡೆಯಲಾಗಿತ್ತು. ನ.೦೫ ರಂದು ಕೊಪ್ಪ ಪೊಲೀಸರು ಪಂಚರ ಸಮಕ್ಷಮ ಎರಡು ವಾಹನಗಳನ್ನು ಕೂಲಂಕಷವಾಗಿ ಶೋಧನೆಗೆ ಒಳಪಡಿಸಿದ್ದು ಸದರಿ ವಾಹನಗಳಲ್ಲಿ ೫೯೫.೫ ಗ್ರಾಂ ತೂಕದ ಚಿನ್ನಾಭರಣ ಮತ್ತು ೫೮೯ ಗ್ರಾಂ ತೂಕದ ಬೆಳ್ಳಿ ವಸ್ತುಗಳು ಹಾಗೂ ₹೩,೪೧,೧೫೦ ನಗದು ಹಣ ಸಿಕ್ಕಿದ್ದು ಸದರಿ ಸ್ವತ್ತನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಪ್ರಕ್ರಿಯೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ