ಗೋಕಾಕ: ಪಶ್ಚಿಮ ಘಟ್ಟ ಮತ್ತು ಹಿಡಕಲ್ ಡ್ಯಾಂ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಘಟಪ್ರಭಾ ನದಿ ತೀರದ ಸಾರ್ವಜನಿಕರನ್ನು ಸುರಕ್ಷತಾ ದೃಷ್ಟಿಯಿಂದ ಸ್ಥಳಾಂತರಿಸಲು ಮೂಡಲಗಿ ಮತ್ತು ಗೋಕಾಕ ತಾಲೂಕಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಸಂತ್ರಸ್ತ ಕುಟುಂಬಗಳಿಗೆ ಅಗತ್ಯವಿರುವ ಕಾಳಜಿ ಕೇಂದ್ರಗಳನ್ನು ತೆರೆಯುವಂತೆ ಅಧಿಕಾರಿಗಳಿಗೆ ಸೂಚಿಸಿರುವುವಾಗಿ ಅವರು ತಿಳಿಸಿದ್ದಾರೆ. ನದಿ ತೀರದ ಗ್ರಾಮಗಳಾದ ಅಡಿಬಟ್ಟಿಯಿಂದ ತಳಕಟ್ನಾಳವರೆಗೆ ಅಬ್ದುಲ್ ಮಿರ್ಜಾನಾಯಿಕ (7795367576) ಲೋಳಸೂರದಿಂದ ಹುಣಶ್ಯಾಳ ಪಿ.ಜಿ.ವರೆಗೆ ಸಿಪಿ.ಯಕ್ಸಂಬಿ (9972619149) ವಡೇರಟ್ಟಿಯಿಂದ ಮುನ್ಯಾಳವರೆಗೆ ದಾಸಪ್ಪ ನಾಯಿಕ (9900161986) ಮತ್ತು ತಿಗಡಿಯಿಂದ ಅವರಾದಿ ಗ್ರಾಮದವರೆಗೆ ಭಾಸ್ಕರ್ (9538389191) ಅವರನ್ನು ಟೀಂ ಎನ್‌ಎಸ್‌ಎಫ್ ದಿಂದ ಸಂತ್ರಸ್ತರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.