ಸಾಮಾನ್ಯ ಮಗುವಿನಲ್ಲೂ ಇರುತ್ತೆ ಅಸಾಮಾನ್ಯ ಪ್ರತಿಭೆ: ರವಿಕುಮಾರ ಕೋಟೆಬಾವಿ

KannadaprabhaNewsNetwork |  
Published : Nov 18, 2026, 02:30 AM IST
ಅವರ್ಸಾ ದಂಡೇಭಾಗದ ಶಾಲೆಯಲ್ಲಿ ಅವರ್ಸಾ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ರವಿಕುಮಾರ ಕೋಟೆಬಾವಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಕಾರ್ಯಕ್ರಮವನ್ನು ಉದ್ಘಾಟಿಸಿದ ಉದ್ಯಮಿ ತುಳಸಿದಾಸ ಕಾಮತ ಮಾತನಾಡಿ, ಮಕ್ಕಳ ಪ್ರತಿಭೆಗೆ ಜಾತಿ, ಧರ್ಮ, ಬಡವ- ಶ್ರೀಮಂತ ಎಂಬ ಭೇದವಿಲ್ಲ. ಅವಕಾಶ ಸಿಕ್ಕಾಗ ಸಾಮಾನ್ಯ ಕುಟುಂಬದ ಮಗುವೂ ಅಸಾಮಾನ್ಯ ಸಾಧನೆ ಮಾಡಬಲ್ಲದು ಎಂದರು.

ಅಂಕೋಲಾ: ಪ್ರತಿಭಾ ಕಾರಂಜಿ ಎನ್ನುವುದು ಕೇವಲ ಒಂದು ಸ್ಪರ್ಧೆಯಲ್ಲ. ಇದು ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸುವ, ಅದಕ್ಕೆ ಸೂಕ್ತ ವೇದಿಕೆ ಕಲ್ಪಿಸುವ ಮತ್ತು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಅದ್ಭುತ ವೇದಿಕೆಯಾಗಿದೆ ಎಂದು ಖಜಾನಾಧಿಕಾರಿ ರವಿಕುಮಾರ ಕೋಟೆಬಾವಿ ಹೇಳಿದರು.

ಅವರ್ಸಾ ದಂಡೇಭಾಗದ ಶಾಲೆಯಲ್ಲಿ ಅವರ್ಸಾ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉದ್ಯಮಿ ತುಳಸಿದಾಸ ಕಾಮತ ಮಾತನಾಡಿ, ಮಕ್ಕಳ ಪ್ರತಿಭೆಗೆ ಜಾತಿ, ಧರ್ಮ, ಬಡವ- ಶ್ರೀಮಂತ ಎಂಬ ಭೇದವಿಲ್ಲ. ಅವಕಾಶ ಸಿಕ್ಕಾಗ ಸಾಮಾನ್ಯ ಕುಟುಂಬದ ಮಗುವೂ ಅಸಾಮಾನ್ಯ ಸಾಧನೆ ಮಾಡಬಲ್ಲದು ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಮಂಜುನಾಥ ನಾಯಕ, ಹಾರವಾಡ ಸರ್ಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಪುಷ್ಪಲತಾ ನಾಯಕ, ಶಿಕ್ಷಣ ಸಂಯೋಜಕ ನದೀಮ್ ಶೇಖ, ಕ್ಷೇತ್ರ ಸಮನ್ವಯಾಧಿಕಾರಿ ದೇವರಾಯ ನಾಯಕ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ರಾಘು ಕಾಕರಮಠ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಉಮಾಮಹೇಶ್ವರ ಕ್ರೀಡಾ ಹಾಗೂ ಸಾಂಸ್ಕೃತಿಕ ಯುವಕ ಸಂಘದ ಅಧ್ಯಕ್ಷ ರೋಹಿದಾಸ ಮಹಾದೇವ ನಾಯ್ಕ, ದೈಹಿಕ ಶಿಕ್ಷಣ ಪರಿವೀಕ್ಷಕ ಮಂಜುನಾಥ ನಾಯಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಾಮ ನಿರ್ದೇಶಿತ ಸದಸ್ಯ ಜಯಶೀಲ ಆಗೇರ, ಎಸ್‌ಡಿಎಂಸಿ ಅಧ್ಯಕ್ಷೆ ರೇಷ್ಮಾ ಖಾರ್ವಿ ಉಪಸ್ಥಿತರಿದ್ದರು. ಸಿಆರ್‌ಪಿ ಶ್ಯಾಮಲಾ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಅವರ್ಸಾ ದಂಡೇಭಾಗ ಶಾಲೆಯ ಮುಖ್ಯಾಧ್ಯಾಪಕ ಮಂಜುನಾಥ ನಾಯಕ ಸ್ವಾಗತಿದರು. ಶಿಕ್ಷಕಿಯರಾದ ಮಮತಾ ಪಾಟಕರ, ಅಮಿತಾ ನಾಯ್ಕ ಕಾರ್ಯಕ್ರಮ ನಿರೂಪಿದರು. ಶಿಕ್ಷಕ ಸಂತೋಷ ನಾಯ್ಕ ವಂದಿಸಿದರು. ಸಾಮಾಜಿಕ ಕಾರ್ಯಕರ್ತ ಗಣಪತಿ ನಾಯ್ಕ, ದಂಡೇಭಾಗ, ಹಳೆ ವಿದ್ಯಾರ್ಥಿ ಸಂಘದ ಹೊನ್ನಪ್ಪ ನಾಯಕ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಿ
ವಿಶ್ವಮಟ್ಟದ ಶ್ರೇಷ್ಠ ವಾಸ್ತುಶಿಲ್ಪಗಳ ತಾಣ ವಿಜಯಪುರ