ಪಡಿತರ ಚೀಟಿ ರದ್ದುಪಡಿಸಿಲ್ಲ, ಎಪಿಎಲ್‌ಗೆ ಬದಲಿಸಿದ್ದೇವೆ : ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ

KannadaprabhaNewsNetwork |  
Published : Nov 22, 2024, 01:17 AM ISTUpdated : Nov 22, 2024, 10:33 AM IST
3 | Kannada Prabha

ಸಾರಾಂಶ

ವಿಪಕ್ಷ ಸ್ಥಾನಕ್ಕೆ ಧಕ್ಕೆ ತರುವ ಕೆಲಸವನ್ನು ಆರ್. ಅಶೋಕ್ ಮಾಡುತ್ತಿದ್ದಾರೆ. ಪರಿಜ್ಞಾನವಿಲ್ಲದ ವ್ಯಕ್ತಿಯನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮಾಡಲಾಗಿದೆ.

 ಮೈಸೂರು  : ನಮ್ಮ ಸರ್ಕಾರವು ಒಂದೇ ಒಂದು ಬಿಪಿಎಲ್ ಕಾರ್ಡನ್ನು ರದ್ದುಪಡಿಸಿಲ್ಲ. ಬದಲಿಗೆ ಎಪಿಎಲ್ಗೆ ಬದಲಿಸಿದ್ದೇವೆ ಅಷ್ಟೆ. ವಿಪಕ್ಷದವರು ಸುಳ್ಳನ್ನು ನೂರು ಬಾರಿ ಹೇಳಿ ಸತ್ಯ ಮಾಡಲು ಹೋಗುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಪಕ್ಷ ಸ್ಥಾನಕ್ಕೆ ಧಕ್ಕೆ ತರುವ ಕೆಲಸವನ್ನು ಆರ್. ಅಶೋಕ್ ಮಾಡುತ್ತಿದ್ದಾರೆ. ಪರಿಜ್ಞಾನವಿಲ್ಲದ ವ್ಯಕ್ತಿಯನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮಾಡಲಾಗಿದೆ. ಬಿಪಿಎಲ್ ಕಾರ್ಡ್ ವಿಚಾರದಲ್ಲಿ ಬಿಜೆಪಿಗರು ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ 12,80,540 ಬಿಪಿಎಲ್ ಕಾರ್ಡ್ ಗಳನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಆಹಾರ ಇಲಾಖೆಯಿಂದ ರಾಜ್ಯ ಸರ್ಕಾರಕ್ಕೆ ನೋಟಿಸ್ ಬಂದಿದೆ. ಇದು ಬಿಜೆಪಿಯ ಡಬಲ್ ಸ್ಟ್ಯಾಂಡರ್ಡ್. ಬಿಪಿಎಲ್ಕಾರ್ಡ್ ಬದಲಾದರೆ ಅಕ್ಕಿ ಮಾತ್ರ ಸಿಗುವುದಿಲ್ಲ. ಬಿಪಿಎಲ್ ಕಾರ್ಡ್ನಿಂದ ಗೃಹಲಕ್ಷ್ಮಿ ನಿಲ್ಲುವುದಿಲ್ಲ. ತೆರಿಗೆ ಪಾವತಿ ಮಾಡುತ್ತಿದ್ದರೆ ಮಾತ್ರ ಗೃಹಲಕ್ಷ್ಮಿ ಸಿಗುವುದಿಲ್ಲ ಎಂದು ಅವರು ಹೇಳಿದರು.ಸುಳ್ಳು ಹೇಳುವುದರಲ್ಲಿ ಆರ್. ಅಶೋಕ್ಗೆ ಪಿ.ಎಚ್.ಡಿ ನೀಡಬೇಕು. ನೋಟಿಸ್ ಕೊಟ್ಟು ಈಗ ನಾಟಕ ಆಡುತ್ತಿದ್ದೀರಾ? ನಿಮಗೆ ನಾಚಿಕೆ ಆಗುವುದಿಲ್ಲವಾ? ಬಿಪಿಎಲ್ ನಿಂದ ಎಪಿಎಲ್ ಗೆ ವರ್ಗಾಯಿಸಲು ಐದು ಮಾನದಂಡಗಳನ್ನು ಕೇಂದ್ರ ಸರ್ಕಾರ ನೀಡಿದೆ. ಐಟಿ ರಿಟರ್ನ್ ಆಗಿರಬಾರದು, ಎಂಟು ಎಕರೆಗಿಂತ ಹೆಚ್ಚು ಜಮೀನು ಇರಬಾರದು, ಕಾರು ಹೊಂದಿರಬಾರದು, ಕುಟುಂಬದ ವಾರ್ಷಿಕ ವರಮಾನ ಎರಡು ಲಕ್ಷ ಮೀರುವಂತಿಲ್ಲ ಎಂಬ ನಿಯಮವಿದೆ.

ಹಾಗೆ ನೋಡಿದಾಗ 12.80 ಲಕ್ಷ ಬಿಪಿಎಲ್ ಕಾರ್ಡ್ ರದ್ದು ಮಾಡುವಂತೆ ಕೇಂದ್ರ ಸೂಚಿಸಿದೆ. ರಾಜ್ಯ ಸರ್ಕಾರ ಇದನ್ನು ಧಿಕ್ಕರಿಸಿದೆ. ಬದಲಿಗೆ 80 ಸಾವಿರ ಬಿಪಿಎಲ್ ಕಾರ್ಡ್ ಗಳನ್ನು ಎಪಿಎಲ್ ಗೆ ಪರಿವರ್ತಿಸಿದ್ದೇವೆ. ಆದರೆ ಬಿಜೆಪಿ ನಾಯಕರು ದಿನನಿತ್ಯ ಸುಳ್ಳು ಹೇಳುತ್ತಾ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಕಟುವಾಗಿ ಟೀಕಿಸಿದರು. 

ಬಿಜೆಪಿಯ ಮೂಲ ಸ್ಥಾಪಕರು ಯಾವ ದೇಶದವರುಮಂತ್ರಾಲಯದ ಗುರು ರಾಘವೇಂದ್ರಸ್ವಾಮಿಗಳ ಮಠಕ್ಕೆ ಮುಸ್ಲಿಮರು ಭೂಮಿ ನೀಡಿದ್ದಾರೆ ಎಂಬ ಸಿಎಂ ಇಬ್ರಾಹಿಂ ಹೇಳಿಕೆಗೆ ಮಾಜಿ ಸಂಸದ ಪ್ರತಾಪ್ ಸಿಂಹ ಆಕ್ಷೇಪ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯಿಸಿದ ಲಕ್ಷ್ಮಣ್, ಬಿಜೆಪಿಯ ಮೂಲ ಸಂಸ್ಥಾಪಕರು, ವಂಶಸ್ಥರು ಯಾರು? ಯಾವ ದೇಶದವರು ಎಂಬುದನ್ನು ಪ್ರತಾಪ್ ಸಿಂಹ ಹೇಳಲಿ. 

ವಕ್ಫ್ ಬೋರ್ಡ್ ವಿಚಾರದಲ್ಲಿ ಪ್ರತಾಪ್ ಸಿಂಹ ಚರ್ಚೆಗೆ ಬರಲಿ. ಸಂಸದರಾಗಿದ್ದಾಗ ಕರೆದರೂ ಬಹಿರಂಗ ಚರ್ಚೆಗೆ ಬರಲಿಲ್ಲ.ಈಗ ಅವರನ್ನು ದೂರ ತಳ್ಳಿದ್ದಾರೆ. ಈಗಲಾದರೂ ಅವರು ಚರ್ಚೆಗೆ ಬರಲಿ. ಫ್ರೆಂಡ್ಲಿ ಫೈಟ್ ಮಾಡ್ತೇನೆ ಎಂದು ಪಂಥಾಹ್ವಾನ ನೀಡಿದರು. ದಾಖಲೆ ಕೊಡಿಪ್ರತಾಪ್ ಸಿಂಹ ಸರ್ಕಾರಿ ಆಸ್ತಿಗಳನ್ನು ಕಬಳಿಸಿದ್ದಾರೆ ಎಂದು ಹೇಳುತ್ತಾರೆ. 

ಇದಕ್ಕೆ ಸೂಕ್ತ ದಾಖಲೆ ಕೊಡಬೇಕು ತಾನೇ, ಸ್ಮಶಾನದ ಜಾಗವನ್ನು ವಕ್ಫ್ ಬೋರ್ಡ್ ಆಸ್ತಿ ಎಂದು ಹೇಳ್ತಿದ್ದೀರಲ್ಲ. ಹಾಗಾದರೆ ಮಡಿಕೇರಿಯಲ್ಲಿ ಕಾಫಿ ತೋಟ ಇದೆಯಲ್ಲಾ ಅಲ್ಲಿ ಹೂಳಬೇಕಾ? ಎಂದು ಪ್ರಶ್ನಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು 14 ನಿವೇಶನ ಹಿಂದಿರುಗಿಸುವ ತನಕ ಕೆ.ಆರ್. ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಅವರು ರಸ್ತೆಯಲ್ಲಿ ಬಿದ್ದು ಬಟ್ಟೆ ಬಿಚ್ಚಿಕೊಂಡು ಓಡಾಡುತ್ತಿದ್ದರು. ಪಾಪ ಸ್ನೇಹಮಯಿ ಕೃಷ್ಣ ಹುಚ್ಚರಾಗಿದ್ದಾರೆ. ರಾತ್ರಿ ವೇಳೆಯಲ್ಲೂ ಲೋಕಾಯುಕ್ತ ಕಚೇರಿ ಸುತ್ತಮುತ್ತ ಸುತ್ತುತಿರುತ್ತಾರೆ. ಅವರ ಇನ್ನೊಂದು ಆಡಿಯೋ ನನಗೆ ಸಿಕ್ಕಿದೆ. ಈ ಬಗ್ಗೆ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ. ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಿಸುತ್ತೇವೆ ಎಂದು ಅವರು ಹೇಳಿದರು.

 ವಕ್ಫ್‌ ಬೋರ್ಡ್‌ ಕುರಿತು ಚರ್ಚೆಗೆ ಬನ್ನಿ: ಬಿ.ಜೆ. ವಿಜಯಕುಮಾರ್

ವಕ್ಫ್‌ ಬೋರ್ಡ್‌ ವಿವಾದ ಬಿಪಿಎಲ್‌ ಕಾರ್ಡ್‌ ಕುರಿತು ಬಿಜೆಪಿ ನಾಯಕರೊಡನೆ ಚರ್ಚೆಗೆ ನಾವು ಸಿದ್ಧರಿದ್ದೇವೆ. ಡಿ. 1 ರಂದು ಮಧ್ಯಾಹ್ನ 12 ಗಂಟೆಗೆ ನಾವು ಮಲ್ಲೇಶ್ವರಂನ ಬಿಜೆಪಿ ಕಚೇರಿಗೆ ಬರುತ್ತೇವೆ. ಈ ಚರ್ಚೆಗೆ ನೀವು ಒಪ್ಪಿಕೊಳ್ಳಿ. ಇಲ್ಲವಾದರೆ ನಿಮ್ಮ ಹೇಳಿಕೆ ಸುಳ್ಳು ಎಂದು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ಒತ್ತಾಯಿಸಿದರು.ಬಿಜೆಪಿಯಲ್ಲಿ ವೀಕೆಸ್ಟ್ ವಿರೋಧ ಪಕ್ಷದ ನಾಯಕ ಆರ್. ಅಶೋಕ್. ಮೈಸೂರು ಜಿಲ್ಲಾ ಕಾಂಗ್ರೆಸ್ ನಿಂದ ಬೆಂಗಳೂರು ಬಿಜೆಪಿ ಕಚೇರಿಗೆ ಬರುತ್ತೇವೆ. ದಾಖಲೆಗಳ ಸಮೇತ ಬಂದು ಮೈಸೂರು ಜಿಲ್ಲಾ ಕಾಂಗ್ರೆಸ್ ನಿಂದ ಚರ್ಚಿಸುತ್ತೇವೆ. ನೀವು ಬಿಜೆಪಿ ರಾಜ್ಯಾಧ್ಯಕ್ಷರು ಸೇರಿದಂತೆ ಎಲ್ಲರೂ ಬನ್ನಿ. ಈ ಬಗ್ಗೆ ಮೈಸೂರು ಜಿಲ್ಲಾ ಕಾಂಗ್ರೆಸ್‌ ಬಿಜೆಪಿ ವಿರೋಧ ಪಕ್ಷದ ನಾಯಕರಿಗೆ ಪತ್ರ ಬರೆಯುತ್ತೇವೆ. ಈ ಸವಾಲನ್ನು ಸ್ವೀಕರಿಸಬೇಕು, ಚರ್ಚೆಗೆ ಬರಬೇಕು. ಇಲ್ಲ ನಿಮ್ಮ ಆಪಾದನೆ ಸುಳ್ಳು ಎಂದು ಒಪ್ಪಿಕೊಳ್ಳಬೇಕು ಎಂದು ಅವರು ಸವಾಲು ಹಾಕಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ