ಉದ್ಘಾಟನೆ ಮುನ್ನವೇ ತಾಪಂ ಮಳಿಗೆಗಳು ಶಿಥಿಲ

KannadaprabhaNewsNetwork |  
Published : Apr 23, 2026, 02:00 AM IST
ಉಪಯೋಗಕ್ಕೆಬಾರದೆ ನಿರುಪಯುಕ್ತವಾಗಿ ಪಾಳು ಬೀಳುತ್ತಿರುವ ಕಟ್ಟಡ | Kannada Prabha

ಸಾರಾಂಶ

ನಿರ್ಮಿಸಲಾಗಿರುವ ಮಳಿಗೆಗಳು ಸದ್ಯ ಪಾಳು ಬೀಳುತ್ತಿವೆ. ಕಟ್ಟಡವು ಅಲ್ಲಲ್ಲಿ ಸೀಮೆಂಟ್‌ ಕಳಚಿಕೊಂಡು, ಕಬ್ಬಣದ ಕಂಬಿಗಳು ತುಕ್ಕು ಹಿಡಿಯುತ್ತಿವೆ.

ಪಾಳುಬೀಳುತ್ತಿರುವ ತಾಪಂ ವಾಣಿಜ್ಯ ಮಳಿಗೆಗಳು । ದಶಕ ಗತಿಸಿದರೂ ಉಪಯೋಗವಿಲ್ಲ

ಅರುಣ್ ಕುಮಾರ್ ಎಸ್ ವಿ

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ತಾಲೂಕು ಪಂಚಾಯಿತಿಯಿಂದ ನಿರ್ಮಿಸಿದ ವ್ಯಾಪಾರ ಮಳಿಗೆಗಳು ಪೂರ್ಣಗೊಂಡು ದಶಕ ಗತಿಸಿದರೂ ಇಂದಿಗೂ ಉದ್ಘಾಟನಾ ಭಾಗ್ಯ ಕಾಣದೆ ಬಳಿಕೆಗೆ ಮುಕ್ತವಾಗದೆ ನಿರುಪಯುಕ್ತವಾಗಿರುವುದು ದುದೈರ್ವ ಸಂಗತಿ.ಸಣ್ಣ ವ್ಯಾಪಾರಸ್ಥರಿಗೆ ಅನುಕೂಲವಾಗಲೆಂದು ನಗರದ ಎಂ.ಜಿ.ರಸ್ತೆಯಲ್ಲಿ 16 ವ್ಯಾಪಾರ ಮಳಿಗೆಗಳು ನಿರ್ಮಾಣಗೊಂಡು 10 ವರ್ಷಗಳು ಗತಿಸಿದ್ದರೂ ಇನ್ನೂ ಅವುಗಳ ಉದ್ಘಾಟನೆ ಭಾಗ್ಯ ಕೂಡಿ ಬಂದಿಲ್ಲ. ಮತ್ತು ಕಳೆದ ವರ್ಷ ಪ್ರಾರಂಭವಾದ 8 ಮಳಿಗೆಗಳು ಇನ್ನೂ ಕಾಮಗಾರಿ ಮುಂದುವರಿಯುತ್ತಿದೆ.ನಿರ್ಮಿಸಲಾಗಿರುವ ಮಳಿಗೆಗಳು ಸದ್ಯ ಪಾಳು ಬೀಳುತ್ತಿವೆ. ಕಟ್ಟಡವು ಅಲ್ಲಲ್ಲಿ ಸೀಮೆಂಟ್‌ ಕಳಚಿಕೊಂಡು, ಕಬ್ಬಣದ ಕಂಬಿಗಳು ತುಕ್ಕು ಹಿಡಿಯುತ್ತಿವೆ. ಇದರಿಂದ ತಾಲೂಕು ಪಂಚಾಯಿತಿಗೆ ಲಾಭ ಇಲ್ಲ. ನಾಗರಿಕರಿಗೂ ಉಪಯೋಗವಿಲ್ಲ. ಸರ್ಕಾರದ ಹಣ ಪೋಲಾದಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು ಮಳಿಗೆಗಳನ್ನು ಉದ್ಘಾಟಿಸಿ ವರ್ತಕರಿಗೆ ಬಾಡಿಗೆಗೆ ಕೊಡಬೇಕು. ಇದರಿಂದ ತಾಲೂಕು ಪಂಚಾಯಿತಿಗೆ ಆದಾಯ ಹೆಚ್ಚುತ್ತದೆ. ಬೀದಿ ವ್ಯಾಪಾರಿಗಳು ಸಣ್ಣ ಅಂಗಡಿ ನಡೆಸುವವರಿಗೆ ಉದ್ಯೋಗ ಕೈಗೊಳ್ಳಲು ಅವಕಾಶ ನೀಡಿದಂತಾಗುತ್ತದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಮಳಿಗೆಗಳು ಬಾಡಿಗೆ ದರ ನಿಗದಿ ವಿಳಂಬ, ತಾಂತ್ರಿಕ ದೋಷಗಳು ಅಥವಾ ಜಿಲ್ಲಾಡಳಿತದ ಅನುಮತಿ ನೀಡಿದ್ದರೂ, ಲೋಕೋಪಯೋಗಿ ಇಲಾಖೆಯಿಂದ ದರ ನಿಗಧಿಯಾಗದೇ ಇರುವುದರಿಂದ ನಾಯಿ, ಹಂದಿಗಳಿಗೆ ಆಶ್ರಯ ತಾಣವಾಗಿ ಹಾಳಾಗುತ್ತಿವೆ. ಇಲ್ಲಿ ರಾತ್ರಿವೇಳೆ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವುದು ಸುತ್ತಲಿನ ನಿವಾಸಿಗರಿಗೆ ತಲೆನೋವಾಗಿ ಪರಿಣಮಿಸಿದೆ.ಈ ಕಟ್ಟಡದ ಅಂಡರ್ ಗ್ರೌಂಡ್‌ನಲ್ಲಂತೂ ರಾಶಿ ರಾಶಿ ತ್ಯಾಜ್ಯ, ಮಳೆ ನೀರು ನಿಂತಿರುವುದರಿಂದ ಸೊಳ್ಳೆಗಳ ಉತ್ಪತ್ತಿಗೆ ಉಗಮಸ್ಥಾನವಾಗಿ ಮಾರ್ಪಟ್ಟಿದೆ. ನಗರದ ಮಧ್ಯದಲ್ಲಲಿ ದಾರಿಹೋಕರಿಗೆ ಮಲ-ಮೂತ್ರ ವಿಸರ್ಜನೆಗೆ ವಿಶೇಷವಾಗಿ ಹೇಳಿ ಮಾಡಿಸಿದ ಕಟ್ಟಡವಾಗಿದೆ.ಇನ್ನು ಮುಂದಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕಾಮಗಾರಿ ವಿಳಂಬವಾಗದ ರೀತಿಯಲ್ಲಿ ಕ್ರಮಜರುಗಿಸಿ ಇತ್ತ ಗಮನ ಹರಿಸಿ ಈ ಮಳಿಗೆಗಳಿಗೆ ಬಾಡಿಗೆ ದರ ನಿಗದಿಗೊಳಿಸಿ ಸ್ಥಳೀಯ ವ್ಯಾಪಾಸ್ಥರಿಗೆ ಅನುಕೂಲ ಮಾಡಿಕೊಡುತ್ತಾರೆಯೆ ಎಂಬುದನ್ನು ಕಾದು ನೋಡಬೇಕು.ಕೋಟ್‌/.....

ಮಳಿಗೆಗಳಲ್ಲಿ ರಾತ್ರಿ ಕಾನೂನು ಬಾಹಿರ ಚಟುವಟಿಕೆ ನಡೆಸುವವರಿಗೆ ಸಾರ್ವಜನಿಕರು ಪ್ರಶ್ನಿಸಿದರೆ ಇದೇನು ನಿಮ್ಮ ಅಪ್ಪನ ಜಾಗವೇ ಎಂದು ಪ್ರಶ್ನಿಸುತ್ತಾರೆ. ಹೀಗಾಗಿ ಯಾರೂ ಪ್ರಶ್ನೆ ಮಾಡುವ ಗೋಜಿಗೆ ಹೋಗುತ್ತಿಲ್ಲ.

ಹೆಸರು ಹೇಳಲು ಇಚ್ಚಿಸದ ನಿವಾಸಿಬಾಕ್ಸ್

1ನೇ ಆವೃತ್ತಿಯಲ್ಲಿ 16 ಮಳಿಗೆಗಳ ಕಾಮಗಾರಿ ಪೂರ್ಣಗೊಂಡಿದೆ. 2ನೇ ಆವೃತ್ತಿಯಲ್ಲಿ 8 ಮಳಿಗೆಗಳು ಮತ್ತು ಶೌಚಾಲಯ ಒಟ್ಟು 1 ಕೋಟಿ 83 ಲಕ್ಷ ರು.ಗಳ ಕಾಮಗಾರಿ ನಡೆಯುತ್ತಿದ್ದು, ಇನ್ನು 1 ತಿಂಗಳೊಳಗೆ ಕಟ್ಟಡದ ಪೂರ್ಣ ಕಾಮಗಾರಿಯು ಪೂರ್ಣಗೊಳ್ಳಲಿದೆ.

-ಮುನಿಸ್ವಾಮಿಗೌಡ, ಸಹಾಯಕ ಅಭಿಯಂತರರು, ನಿರ್ಮಿತಿ ಕೇಂದ್ರ,

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಕಾಶವಾಣಿ ಪ್ರಾದೇಶಿಕ ಸುದ್ದಿ ವಿಭಾಗ ಸ್ಥಳಾಂತರ ರದ್ದು
ಮಜೇಥಿಯಾ, ಫ್ರೊ.ಅಚ್ಯುತ್‌, ಸಂಗ್ರೇಶಿಗೆ ಕವಿವಿ ಗೌಡಾ