ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಈ ವೇಳೆ ಮಾತನಾಡಿದ ಶಾಸಕ ಸಿದ್ದು ಸವದಿ, ೨೦೧೯-೨೦ರಲ್ಲಿ ೪೨೦ ಎಕರೆಯಷ್ಟು ಭೂಮಿಗೆ ೧೧೦ ರೈತರಿಗೆ ವಕ್ಫ್ ಮಂಡಳಿಯಿಂದ ನೋಟಿಸ್ ಬರುತ್ತಿದೆ. ಈ ಆಸ್ತಿ ವಕ್ಫ್‌ಗೆ ಸಂಬಂಧಿಸಿದೆಯೆಂಬ ತಗಾದೆ ನಡೆಯುತ್ತಿದೆ. ಸ್ವಂತ ಭೂಮಿಯಲ್ಲಿ ಹತ್ತಾರು ತಲೆಮಾರುಗಳಿಂದ ಕೃಷಿ ಮಾಡುತ್ತಾ ಬಂದ ಕುಟುಂಬಗಳು ಆಸ್ತಿ ವಿಭಜನೆ ಬಳಿಕ ಇದೀಗ ತುಂಡು ಭೂಮಿ ಹೊಂದಿದ ರೈತರ ಮೇಲೆಯೂ ಕಾಂಗ್ರೆಸ್ ಸರ್ಕಾರ ಗದಾಪ್ರಹಾರ ನಡೆಸುತ್ತಿರುವುದು ನಾಚಿಕೇಗೇಡಿತನದ ಸಂಗತಿ. ರೈತರ ಬೆನ್ನೆಲುಬಾಗಿ ಯಾವುದೇ ಕಾರಣಕ್ಕೂ ಇಲ್ಲಿನ ರೈತರ ಜಮೀನನ್ನು ವಕ್ಫ್‌ಗೆ ನೀಡುವ ಅವಕಾಶ ನೀಡುವುದಿಲ್ಲ. ರಕ್ತ ಹರಿದರೂ ಚಿಂತೆಯಿಲ್ಲ ಈ ಹೋರಾಟದಿಂದ ಹಿಂದೆ ಸರಿಯುವ ಪ್ರಮೇಯವೇ ಇಲ್ಲವೆಂದು ಸವದಿ ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ೧೯೯೦ರ ಅವಧಿಯಲ್ಲಿ ೧.೦೬ ಲಕ್ಷ ಎಕರೆಯಷ್ಟು ಹೊಂದಿದ್ದ ವಕ್ಫ್ ಭೂಮಿಯು ಇದೀಗ ೨೦೨೪ಕ್ಕೆ ೯.೦೬ ಲಕ್ಷ ಎಕರೆಯಷ್ಟು ಭೂಮಿಯನ್ನು ಹೊಂದಿರುವುದು ಕೇವಲ ಮುಸ್ಲಿಂ ಸಮುದಾಯದ ಮತಗಳ ಓಲೈಕೆಗಾಗಿ ಕಾಂಗ್ರೆಸ್ ಎಂಥ ನೀಚ ಕೆಲಸಕ್ಕಿಳಿಯಲೂ ಹೇಸದು ಎಂಬುದಕ್ಕೆ ನಿದರ್ಶನವಾಗಿದೆ. ರೈತರ ನ್ಯಾಯಯುತ ಜಮೀನು ಕಸಿದುಕೊಳ್ಳುವ ಕಾಂಗ್ರೆಸ್‌ನ ಸ್ವಾರ್ಥ ರಾಜಕಾರಣವನ್ನು ವಿರೋಧಿಸುತ್ತೇನೆಂದರು.ತೇರದಾಳದಲ್ಲಿನ ೧೧೦ ರೈತರಿಗೆ ಯಾವುದೇ ನೋಟಿಸ್ ನೀಡಿಲ್ಲ ಹಾಗೂ ಸರಿಪಡಿಸಲಾಗಿದೆ ಎಂದು ಹೇಳುತ್ತಿರುವ ಕಂದಾಯ ಇಲಾಖೆ ತೆರೆಮರೆಯಲ್ಲಿ ರೈತರ ವಿರುದ್ಧ ಆಟವಾಡುತ್ತಿದೆ. ಬೆಂಗಳೂರಿನಲ್ಲಿರುವ ವಕ್ಫ್ ನ್ಯಾಯಾಲಯದಲ್ಲಿ ಪ್ರಕರಣ ಕಳೆದ ೬ ವರ್ಷಗಳಿಂದ ನಡೆಯುತ್ತಿದೆ. ಈಗಲೂ ಎರಡ್ಮೂರು ತಿಂಗಳಿಗೊಮ್ಮೆ ಈ ಭಾಗದ ರೈತರು ಪ್ರಕರಣ ವಿರುದ್ಧ ಹೋರಾಟ ನಡೆಸುತ್ತಾ ಇದೀಗ ಆರ್ಥಿಕ ಸಂಕಷ್ಟಕ್ಕಿಡಾಗಿದ್ದಾರೆ. ಇದರ ಹೊರತಾಗಿ ಹೊಸದಾಗಿ ಮತ್ತೇ ರೈತರಿಗೆ ತನ್ನ ಆಸ್ತಿಯೆಂದು ನೋಟಿಸ್ ನೀಡುತ್ತಿರುವ ವಕ್ಫ್ ಬೋರ್ಡ್ ಕ್ರಮ ಅಸಿಂಧುವಾಗಿದೆ. ಇದನ್ನೇ ಲಾಭ ಪಡೆದುಕೊಂಡು ಸರ್ಕಾರ ರೈತರ ಮೇಲೆ ಗದಾಪ್ರಹಾರ ನಡೆಸುವುದನ್ನು ಕೈಬಿಡಬೇಕೆಂದು ಸವದಿ ಆಗ್ರಹಿಸಿದರು.
ಕೇಂದ್ರ ಸರ್ಕಾರ ಮತ್ತು ಸಿದ್ದರಾಮಯ್ಯ ಸರ್ಕಾರ ವಕ್ಫ್ ಬೋರ್ಡನ್ನು ವಿಸರ್ಜಿಸುವ ಮೂಲಕ ದೇಶದಲ್ಲೇ ರಕ್ಷಣಾ, ರೇಲ್ವೇ ಇಲಾಖೆಗಳ ಬಳಿಕ ಅಕ್ರಮಣಕಾರಿ ನೀತಿಯಿಂದ ಭೂಮಿಯನ್ನು ಹೊಂದಿರುವ ವಕ್ಫ್ ಬೋರ್ಡ್ ರದ್ದುಗೊಳಿಸಿಬೇಕು. ನಮ್ಮ ರೈತರ ಮತ್ತು ನಾಗರಿಕ ಪ್ರದೇಶಗಳ ತಂಟೆಗೆ ಬಂದಲ್ಲಿ ಎಂಥದೇ ರಕ್ತಪಾತವಾದರೂ ಸರಿ ನಾವು ಎದುರಿಸಿ ತಕ್ಕ ಉತ್ತರ ನೀಡುತ್ತೇವೆಂದು ಶಾಸಕ ಸವದಿ ಗುಡುಗಿದರು.
--------
ಕಳೆದ ೬ ವರ್ಷಗಳಿಂದ ನ್ಯಾಯಾಲಯಕ್ಕೆ ಅಲೆದು ಸುಸ್ತಾಗಿದ್ದೇವೆ. ನಮ್ಮ ಮುತ್ತಜ್ಜನ ಕಾಲದಿಂದಲೂ ಉಳುಮೆ ಮಾಡುತ್ತ ಬಂದಿರುವ ಜಮೀನಿನ ಮೇಲೆ ಸರ್ಕಾರ ವಿನಾಕಾರಣ ಕ್ಯಾತೇ ನಡೆಸುತ್ತಿರುವದು ಸರಿಯಲ್ಲ.
----
- ಹುಸೇನಸಾಬ ಇನಾಮದಾರ, ರೈತ, ತೇರದಾಳ
ಫೋಟೊ-೨೯ಆರ್‌ಬಿಕೆ೨/ಬನಹಟ್ಟಿಯಲ್ಲಿ ಶಾಸಕ ಸಿದ್ದು ಸವದಿ ನೇತೃತ್ವದಲ್ಲಿ ತೇರದಾಳದ ನೂರಾರು ರೈತರು ೪೨೦ ಎಕರೆಯಷ್ಟು ಭೂಮಿ ವಕ್ಫ್ ಆಸ್ತಿಯೆಂದು ನೀಡಿದ ನೋಟಿಸ್ ಪ್ರದರ್ಶಿಸಿ ವಿರೋಧ ವ್ಯಕ್ತಪಡಿಸುತ್ತಿರುವುದು.---------