ಬಾಯಿ ಮಾರಿಕೊಂಡರೂ ಭಾವನೆಗಳ ಮಾರಿಕೊಳ್ಳದಿರಿ: ಚಿಂತಕ ಪ್ರಕಾಶ

KannadaprabhaNewsNetwork | Published : Nov 11, 2024 1:06 AM

ಸಾರಾಂಶ

ಬೀದರ್‌ನ ಡಾ.ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ಕನ್ನಡ ರಾಜ್ಯೋತ್ಸವ ನಿಮಿತ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ, ಬೀದರ್‌

ನಮ್ಮ ಬಾಯಿ, ಕಣ್ಣು, ಕಿವಿ ಮಾರಿಕೊಂಡರೂ ಸೈ, ಪೆನ್ನಿನ ಶಾಹಿಯ ಮೂಲಕ ವ್ಯಕ್ತಪಡಿಸುವ ನಮ್ಮ ಭಾವನೆಗಳನ್ನು ಮಾರಿಕೊಳ್ಳದಿರಿ ಎಂದು ಯುವ ಚಿಂತಕರು, ಶಿಕ್ಷಕರಾದ ಪ್ರಕಾಶ ದೇಶಮುಖ ಕರೆ ನೀಡಿದರು.

ಇಲ್ಲಿನ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ಕನ್ನಡ ರಾಜ್ಯೋತ್ಸವ ನಿಮಿತ್ತ ಇಲ್ಲಿನ ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನವು ಆಯೋಜಿಸಿದ್ದ ಉಪನ್ಯಾಸ - ಸಾಂಸ್ಕೃತಿಕ ಹಾಗೂ ಸನ್ಮಾನ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಬದುಕು ಬರಹ ಒಂದಾಗದ ಹೊರತು ಭಾಷೆ ಜೀವಂತವಾಗಿರಲು ಅಸಾಧ್ಯ. ಸಾಹಿತಿ ಆತ್ಮಸಂಧಾನದ ನಂತರವೇ ಸಾಹಿತ್ಯವನ್ನು ಬರೆಯಲು ಮುಂದಾಗುವತ್ತ ಸಾಗಬೇಕಿದೆ. ತಾಯಿಯಾದವರು ತಾಯಿ ಭಾಷೆ ಕನ್ನಡವನ್ನು ಉಳಿಸುವ ಕೆಲಸ ಮಾಡಲಿ. ದಿನಕ್ಕೊಂದು ಕನ್ನಡ ಕಥೆಗಳನ್ನು ಹೇಳಿ ಎಂದರು.

ಮಕ್ಕಳು ಭಾಷೆಯನ್ನು ಸರಿಯಾಗಿ ಅರ್ಥೈಸಿಕೊಂಡು ಅಧ್ಯಯನ ನಡೆಸುತ್ತಿಲ್ಲ. ಸಮೃದ್ಧವಾದ ಕನ್ನಡವನ್ನು ಮೈಮನದಲ್ಲಿ ಅಳವಡಿಸಿಕೊಳ್ಳುವಲ್ಲಿ ವಿಫಲವಾಗಿ ದ್ದೇವೆ. ಕನ್ನಡ ಭಾಷೆಯಲ್ಲಿರುವ ಭಾವನಾತ್ಮಕತೆಯನ್ನು ತಿಳಿಹೇಳಿ ಅವರಲ್ಲಿ ಅಳವಡಿಸಲು ಪಾಲಕರು ಮುಂದಾಗಬೇಕು. ಶಿಕ್ಷಕರು ಮಕ್ಕಳು ಕನ್ನಡ ಭಾಷೆಯನ್ನು ಪರಿಪಕ್ವವಾಗಿ ಮಕ್ಕಳಿಗೆ ತಿಳಿಹೇಳುವತ್ತ, ತಿದ್ದಿ ಹೇಳುವತ್ತ ಶ್ರಮವಹಿಸುವದು ಇಂದಿನ ಅಗತ್ಯವಾಗಿದೆ ಕನ್ನಡ ನಾಡಿನಲ್ಲಿರುವ ನಮ್ಮ ಋಣ ತೀರಿಸಬೇಕಿದೆ ಎಂದರು.

ನಮ್ಮಲ್ಲಿ ಅಭಿಮಾನದ ಕೊರತೆ ಕಾಡುತ್ತಿರುವುದು ಹೌದು, ಆದರೆ ಇಂದಿಗೂ ಕನ್ನಡವನ್ನು ತಮ್ಮಲ್ಲಿ ಉಳಿಸಿಕೊಂಡವರು ಹಲವರಿದ್ದಾರೆ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಸುರೇಶ ಚೆನಶೆಟ್ಟಿ ಮಾತನಾಡಿ, ಕನ್ನಡ ಭಾಷೆ ಅಳವಿನಂಚಿನಲ್ಲಿರುವುದು ನಮ್ಮೆಲ್ಲರಿಗೆ ಎಚ್ಚರಿಕೆ ಗಂಟೆಯಾಗಿದೆ. ಕನ್ನಡ ನಮ್ಮ ಭಾಷೆ ಅಷ್ಟೇ ಅಲ್ಲ ಅದು ನಮ್ಮ ಸಂಸ್ಕೃತಿಯಾಗಿದೆ. ನಮ್ಮನ್ನು ನಾವು ಅವಲೋಕನ ಮಾಡಿಕೊಳ್ಳುವ ಮೂಲಕ ದಾಸರು, ಶರಣರು, ಕವಿ, ಸಾಹಿತಿಗಳು ನಮಗೆ ನೀಡಿರುವ ಕನ್ನಡವನ್ನು ಉಳಿಸಿಕೊಳ್ಳಬೇಕು ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಬಿ.ಎಚ್‌.ನಿರಗುಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆಯಲ್ಲಿಯೇ ಮಕ್ಕಳಿಗೆ ಶಿಕ್ಷಣ ಕಲ್ಪಿಸಿಕೊಡಬೇಕು. ಮಾತೃಭಾಷೆಯಲ್ಲಿ ಅಭ್ಯಾಸ ಮಾಡಿದ್ದೆಯಾದಲ್ಲಿ ಭವಿಷ್ಯ ಉಜ್ವಲವಾಗಲಿದೆ ಎಂದರು.

ಬೆಮಳಖೇಡ- ಗೋರಟಾ ಹಿರೇಮಠ ಸಂಸ್ಥಾನದ ಡಾ.ರಾಜೇಶ್ವರ ಶಿವಾಚಾರ್ಯರು, ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಡಾ. ಸಂಜೀವಕುಮಾರ ಅತಿವಾಳೆ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚೆನಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಭಾರತಿ ವಸ್ತ್ರದ್‌, ಕರ್ನಾಟಕ ಜಾನಪದ ಅಕಾಡೆಮಿ ಸಹ ಸದಸ್ಯ ವಿಜಯಕುಮಾರ ಸೋನಾರೆ, ಗುಲಬರ್ಗಾ ವಿವಿಯ ಸಿಂಡಿಕೇಟ್‌ ಸದಸ್ಯ ಸಿದ್ದಪ್ಪ ಮೂಲಗೆ, ನಿವೃತ್ತ ಪ್ರಾಚಾರ್ಯರಾದ ಡಿ. ನಿಜಾಮುದ್ದೀನ್‌, ಜೆಸ್ಕಾಂ ಲೆಕ್ಕಾಧಿಕಾರಿ ಸುಮಂತ ಕಟ್ಟಿಮನಿ, ಕಸಾಪ ತಾಲೂಕು ಅಧ್ಯಕ್ಷ ಎಂಎಸ್‌ ಮನೋಹರ, ಡಯಟ್‌ ಉಪನ್ಯಾಸಕರಾದ ಗೀತಾ ಗಡ್ಡೆ, ನಿವೃತ್ತ ಅಧಿಕಾರಿ ಪಿಎಸ್‌ ಇಟಕಂಪಳ್ಳಿ, ಸುನೀಲ್‌ ಭಾವಿಕಟ್ಟಿ, ಉಮಾಕಾಂತ ಮೀಸೆ, ಶಾಮರಾವ್‌ ನೆಲವಾಡೆ, ಡಾ. ರವೀಂದ್ರ ಲಂಜವಾಡಕರ್‌, ಸಂಗಮೇಶ ಬಿರಾದರ್‌ ಸೇರಿದಂತೆ ಮತ್ತಿತರರು ಇದ್ದರು.

ಕನ್ನಡ ಗೀತ ಗಾಯನ, ನೃತ್ಯ ಹಾಗೂ ಸನ್ಮಾನ

ಸವಿಗಾನ ಸಂಗೀತ ಅಕಾಡೆಮಿಯ ಭಾನುಪ್ರಿಯಾ ಅರಳಿ ಹಾಗೂ ತಂಡದವರಿಂದ ಕನ್ನಡ ಗೀತೆಗಳ ಗಾಯನ ನಡೆದರೆ ನಾಟ್ಯಶ್ರೀ ನೃತ್ಯಾಲಯದ ರಾಣಿ ಸತ್ಯಮೂರ್ತಿ ಅವರ ತಂಡದಿಂದ ನೃತ್ಯೋತ್ಸವ ನಡೆಯಿತು. ದಿಲೀಪಕುಮಾರ ಮೋಘ ನಿರೂಪಿಸಿ ಲಕ್ಷ್ಮಣ ಮೇತ್ರೆ ಸ್ವಾಗತಿಸಿ ಅಜಿತ್‌ ಎನ್‌ ವಂದಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಲವಾರು ಸಾಧಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್‌.ನಿರಗುಡೆ ಮಾತನಾಡಿ, ಕನ್ನಡ ನವೆಂಬರ್‌ ತಿಂಗಳಿಗೆ ಸೀಮಿತವಾಗದೇ ನಿತ್ಯ ನಮ್ಮ ಬದುಕಿನ ಭಾಗವಾಗಬೇಕು. ನಮ್ಮ ಮಾತೃ ಭಾಷೆಯನ್ನು ಬಳಸಿದಲ್ಲಿ ಮಾತ್ರ ಕನ್ನಡ ಉಳಿಯಲು ಸಾಧ್ಯ. ಪರ ಭಾಷೆಗಳನ್ನು ಬಳಸುವುದನ್ನು ಕಡಿಮೆ ಮಾಡಿ. ಕನ್ನಡ ಹೆಚ್ಚಾಗಿ ಬಳಸಿ, ಈಗಾಗಲೇ ಕನ್ನಡದ ಅನೇಕ ಸಾಹಿತಿಗಳು ಕನ್ನಡವನ್ನು ಉಳಿಸಿಕೊಟ್ಟಿ ದ್ದಾರೆ ಅದನ್ನು ಬೆಳೆಸಿಕೊಂಡು ಹೋಗಬೇಕು ಎಂದರು.

ಬೆಮಳಖೇಡ- ಗೋರಟಾ ಹಿರೇಮಠ ಸಂಸ್ಥಾನದ ಡಾ. ರಾಜೇಶ್ವರ ಶಿವಾಚಾರ್ಯರು, ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಡಾ. ಸಂಜೀವಕುಮಾರ ಅತಿವಾಳೆ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಭಾರತಿ ವಸ್ತ್ರದ್‌, ಕರ್ನಾಟಕ ಜಾನಪದ ಅಕಾಡೆಮಿ ಸಹ ಸದಸ್ಯ ವಿಜಯಕುಮಾರ ಸೋನಾರೆ, ಗುಲಬರ್ಗಾ ವಿವಿಯ ಸಿಂಡಿಕೇಟ್‌ ಸದಸ್ಯ ಸಿದ್ದಪ್ಪ ಮೂಲಗೆ, ನಿವೃತ್ತ ಪ್ರಾಚಾರ್ಯರಾದ ಡಿ. ನಿಜಾಮುದ್ದೀನ್‌, ಜೆಸ್ಕಾಂ ಲೆಕ್ಕಾಧಿಕಾರಿ ಸುಮಂತ ಕಟ್ಟಿಮನಿ, ಕಸಾಪ ತಾಲೂಕು ಅಧ್ಯಕ್ಷ ಎಂಎಸ್‌ ಮನೋಹರ, ಡಯಟ್‌ ಉಪನ್ಯಾಸಕರಾದ ಗೀತಾ ಗಡ್ಡೆ, ನಿವೃತ್ತ ಅಧಿಕಾರಿ ಪಿಎಸ್‌ ಇಟಕಂಪಳ್ಳಿ, ಸುನೀಲ್‌ ಭಾವಿಕಟ್ಟಿ, ಉಮಾಕಾಂತ ಮೀಸೆ, ಶಾಮರಾವ್‌ ನೆಲವಾಡೆ, ಡಾ. ರವೀಂದ್ರ ಲಂಜವಾಡಕರ್‌, ಸಂಗಮೇಶ ಬಿರಾದರ್‌ ಸೇರಿದಂತೆ ಮತ್ತಿತರರು ಇದ್ದರು.

ಕನ್ನಡ ಗೀತ ಗಾಯನ, ನೃತ್ಯ ಹಾಗೂ ಸನ್ಮಾನ :

ಸವಿಗಾನ ಸಂಗೀತ ಅಕಾಡೆಮಿಯ ಭಾನುಪ್ರಿಯಾ ಅರಳಿ ಹಾಗೂ ತಂಡದವರಿಂದ ಕನ್ನಡ ಗೀತೆಗಳ ಗಾಯನ ನಡೆದರೆ ನಾಟ್ಯಶ್ರೀ ನೃತ್ಯಾಲಯದ ರಾಣಿ ಸತ್ಯಮೂರ್ತಿ ಅವರ ತಂಡದಿಂದ ನೃತ್ಯೋತ್ಸವ ನಡೆಯಿತು. ದಿಲೀಪಕುಮಾರ ಮೋಘ ನಿರೂಪಿಸಿ ಲಕ್ಷ್ಮಣ ಮೇತ್ರೆ ಸ್ವಾಗತಿಸಿ ಅಜಿತ್‌ ಎನ್‌ ವಂದಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾದನೆಗೈದ ಹಲವಾರು ಸಾಧಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

Share this article