ಚೇಳೂರು ತಾಲೂಕು ಕೇಂದ್ರವಾದರೂ ಗ್ರಾಪಂ ಹಣೆಪಟ್ಟಿ

KannadaprabhaNewsNetwork |  
Published : Feb 02, 2025, 11:48 PM IST
ಚೇಳೂರು ಗ್ರಾಮ ಪಂಚಾಯತಿಯ ಮುಂಬಾಗದ ನೋಟ | Kannada Prabha

ಸಾರಾಂಶ

ತಾಲೂಕಾಗಿ ಘೋಷಣೆಯಾಗಿದ್ದು ಜನಸಂಖ್ಯೆ ಆಧಾರದ ಮೇಲೆ ಚೇಳೂರು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಪರಿವರ್ತಿಸಬೇಕಿತ್ತು. ಆದರೆ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಚೇಳೂರು ಗ್ರಾಪಂ ಅನ್ನು ಪಟ್ಟಣ ಪಂಚಾಯಿತಿ ದರ್ಜೆಗೆ ಹೆಚ್ಚಿಸಿದರೆ ಪಟ್ಟಣದ ಅಭಿವೃದ್ಧಿಗೆ ಅನುದಾನ ದೊರೆಯಲಿದೆ.

ಕನ್ನಡಪ್ರಭ ವಾರ್ತೆ ಚೇಳೂರು ಹೋಬಳಿ ಕೇಂದ್ರವಾಗಿದ್ದ ಚೇಳೂರು ಈಗ ತಾಲೂಕು ಕೇಂದ್ರವಾಗಿ ಬದಲಾಗಿದೆ. ಆದರೆ ಇಲ್ಲಿಯ ಗ್ರಾಮ ಪಂಚಾಯಿತಿಯನ್ನು ಮಾತ್ರ ಇದುವರೆಗೂ ಮೇಲ್ದರ್ಜೆಗೇರಿಸಿಲ್ಲ. ಇಲ್ಲಿಯ ಗ್ರಾಪಂ ಅನ್ನು ಪಟ್ಟಣ ಪಂಚಾಯಿತಿಯಾಗಿ ಮಾಡಬೇಕೆಂಬ ಜನರ ಬೇಡಿಕೆಯನ್ನು ಸರ್ಕಾರ ಮರೆತಿದೆ ಎಂಬುದು ತಾಲೂಕಿನ ಜನತೆಯ ಆರೋಪ. ಚೇಳೂರು ನೂತನ ಗಡಿ ಭಾಗದ ತಾಲೂಕು ಕೇಂದ್ರ ಹಾಗೂ ಅಭಿವೃದ್ಧಿಯಲ್ಲಿ ತೀರ ಹಿಂದುಳಿದ ತಾಲೂಕು ಸಹ ಆಗಿದೆ ಆದರಲ್ಲೂ ತಾಲೂಕು ಎಂಬ ಹಣೆಪಟ್ಟಿ ಹೋತ್ತಿದ್ದರು ಈಗ ಗ್ರಾಮ ಪಂಚಾಯಿತಿ ಕೇಂದ್ರವಾಗಿ ಉಳಿದಿದೆ.

ಪಟ್ಟಣ ಪಂಚಾಯಿತಿ ಮಾಡಲಿ

ತಾಲೂಕಾಗಿ ಘೋಷಣೆಯಾಗಿದ್ದು ಜನಸಂಖ್ಯೆ ಆಧಾರದ ಮೇಲೆ ಚೇಳೂರು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಪರಿವರ್ತಿಸಬೇಕಿತ್ತು. ಆದರೆ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಚೇಳೂರು ಗ್ರಾಪಂ ಅನ್ನು ಪಟ್ಟಣ ಪಂಚಾಯಿತಿ ದರ್ಜೆಗೆ ಹೆಚ್ಚಿಸಿದರೆ ಅನುದಾನ ದೊರೆಯಲಿದೆ. ಇದರಿಂದ ತಾಲೂಕು ಕೇಂದ್ರದಲ್ಲಿ ಮೂಲಭೂಕ ಸೌಲಭ್ಯ ಕಲ್ಪಿಸಲು ಹೆಚ್ಚಿನ ಅನುಕೂಲವಾಗುತ್ತದೆ. ಕೂಗು ಕೇಳಿ ಬರುತ್ತಿದೆ.

ಚೇಳೂರು ಗ್ರಾಮ ಪಂಚಾಯತಿಯನ್ನು ಮೇಲ್ ದರ್ಜೇಗೇರಿಸಿ ಪಟ್ಟಣ ಪಂಚಾಯಿತಿ ಮಾಡಲು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಚೇಳೂರು ಪಂಚಾಯಿತಿ ಪ್ರದೇಶವು ೮ ಚ.ಕಿ.ಮೀ ವಿಸ್ತಿರ್ಣ ಹೊಂದಿದೆ. ತ್ವರಿತ ಗತಿಯಲ್ಲಿ ಬೆಳೆಯುತ್ತಿದ್ದು ೨೦೧೧ರಲ್ಲಿನ ಜನಗಣತಿ ವೇಳೆ ಜನಸಂಖ್ಯೆ ೦೮ ಸಾವಿರ ದಾಟಿತ್ತು. ಆದರೆ, ೨೦೨೪ರ ಅಂದಾಜಿನ ಪ್ರಕಾರ ೧೫ ಸಾವಿರ ಜನಸಂಖ್ಯೆ ದಾಟಿದೆ, ಗ್ರಾಮದಲ್ಲಿ 04 ವಾರ್ಡ್ ಗಳಿಂದ 15 ಜನ ಸದಸ್ಯರಿದ್ದಾರೆ.

ಪಟ್ಟಣದಲ್ಲಿ ಜನಸಂಖ್ಯೆ ಹೆಚ್ಚಳ

ಜನಸಂಖ್ಯೆಗೆ ಅನುಗುಣವಾಗಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಪರಿವರ್ತಿಸಲು ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯವೂ ಇದೆ. ಹಾಗೂ ಪ್ರಸ್ತುತ ಮೂಲಸೌಕರ್ಯ ಒದಗಿಸಲು ಈಗಿನ ಪಂಚಾಯಿತಿಗೆ ನೀಡುವ ಅನುದಾನ ಸಾಕಾಗುತ್ತಿಲ್ಲ. ಸ್ಥಳೀಯವಾಗಿ ವಸತಿ ಸೌಲಭ್ಯದ ಕೊರತೆಯೂ ಕೂಡ ಇದೆ.

೧೫ ಸಾವಿರ ಜನಸಂಖ್ಯೆ ಹೊಂದಿದ ಗ್ರಾಮವನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೇಗೇರಿಸುವ ನಿಯಮವಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಇಲ್ಲಿಯವರೆಗೆ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೇಗೇರಿಲ್ಲ. ಇದರಿಂದ ಚೇಳೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿ ಯಿಂದ ಬಗೆಹರಿಸಲಾಗದ ಮೂಲಸೌಕರ್ಯ ಸಮಸ್ಯೆಗಳನ್ನು ಪಟ್ಟಣ ಪಂಚಾಯಿತಿ ಮೂಲಕ ಬಗೆಹರಿಸಬಹುದಾಗಿದೆ. ಪಟ್ಟಣ ಪಂಚಾಯತಿಗೆ ಹೆಚ್ಚಿನ ಅನುದಾನ ದೊರೆಯಲಿದ್ದು ಜನತೆಗೆ ಅಗತ್ಯ ಸೌಲಭ್ಯ ಕಲ್ಪಿಸಬಹುದಾಗಿದೆ.

ನಕಾಶೆ ತಂದುಕೊಡಲಿ

ಚೇಳೂರು ಹೋಬಳಿಯನ್ನು ತಾಲೂಕು ಮಾಡುವ ಸಂದರ್ಭದಲ್ಲಿ ಒಂದು ನಕಾಶೆ ಮಾಡಲಾಗಿದೆ, ಅದು ಚೇಳೂರು ತಾಲೂಕು ಕಚೇರಿಯ ಆರ್ ಐ ಬಳಿ ಇದೆ ಅದನ್ನು ಗ್ರಾ.ಪ. ಪಿಡಿಒ ನಮಗೆ ತಂದುಕೊಟ್ಟು ಚೇಳೂರು ಗ್ರಾಮ ಪಂಚಾಯತಿಗೆ ಯಾವ ಯಾವ ಗ್ರಾಮಗಳು ಸೇರುತ್ತವೆ ಎಂದು ತಿಳಿಸಿದರೆ, ನಾವು ಅದನ್ನು ಗುರುತಿಸಿಕೊಡುತ್ತೇವೆ ಎಂದು ಬಾಗೇಪಲ್ಲಿ ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.ಬಾಕ್ಸ್‌............ಡೀಸಿಗೆ ಪ್ರಸ್ತಾವನೆ

ಚೇಳೂರು ಗ್ರಾಮ ಪಂಚಾಯತಿ ಯನ್ನು ಮೇಲ್ ದರ್ಜೆಗೇರಿಸಿ ಪಟ್ಟಣ ಪಂಚಾಯತಿ ಮಾಡಲು ಈಗಾಗಲೇ ಗ್ರಾಂ ಪಂಚಾಯತಿಯ ಸಾಮಾನ್ಯ ಸಭೆಯಲ್ಲಿ ತಿರ್ಮಾಣ ಮಾಡಲಾಗಿದೆ,ಭೂ ದಾಖಲೆಗಳ ಸಹಾಯಕ ನಿರ್ದೆಶಕರಿಗೆ ಪ್ರಸ್ತಾಪಿತ ಪಟ್ಟಣದ ಕುರಿತು ನಕಾಶೆಯನ್ನು ನೀಡಲು ಮನವಿ ಸಲ್ಲಿಸಲಾಗಿದ್ದು, ನಕಾಶೆಯನ್ನು ಸಿದ್ಧಪಡಿಸಿದ ನಂತರ ತಾಲೂಕು ಇಓ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಚೇಳೂರು ಗ್ರಾಪಂ ಪಿಡಿಒ ಕೆ ವೆಂಕಟಾಚಲಪತಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎನ್‌ಡಿಎ ಮೈತ್ರಿ ಕೂಟದಿಂದ ಕೇಂದ್ರ ಸಚಿವ ಕುಮಾರಸ್ವಾಮಿ ಹುಟ್ಟುಹಬ್ಬ ಆಚರಣೆ
ಪತ್ರಕರ್ತರಿಗೆ ಸ್ಪಂದಿಸುತ್ತಿದ್ದ ಶಾಮನೂರು ಸದಾ ಸ್ಮರಣೀಯ