ಪ್ರತಿ ಸಹಕಾರಿ ಸಂಘಗಳು ಕ್ರಿಯಾಶೀಲವಾಗಲಿ: ಸಚಿವ ಎಚ್.ಕೆ. ಪಾಟೀಲ

KannadaprabhaNewsNetwork |  
Published : Feb 02, 2026, 02:15 AM IST
ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸಿದರು. | Kannada Prabha

ಸಾರಾಂಶ

ರಾಜ್ಯ ಕಾಂಗ್ರೆಸ್ ಮಾಧ್ಯಮ ವಕ್ತಾರ ಡಾ. ಸಂಗಮೇಶ್ ಕೊಳ್ಳಿ ಮಾತನಾಡಿ, 1925ರಲ್ಲಿ ಕಣಕಿಕೊಪ್ಪ ಗ್ರಾಮದಲ್ಲಿ ಸಹಕಾರ ಸಂಘ ಸ್ಥಾಪನೆ ಆಗಿದೆ. ಸಂಗಮೇಶ್ವರರ ಗದ್ದುಗೆ ಆಶೀರ್ವಾದದಿಂದ ಸಂಘ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ ಎಂದರು.

ನರಗುಂದ: ಪ್ರತಿಯೊಂದು ಗ್ರಾಮದಲ್ಲಿನ ಸಹಕಾರಿ ಸಂಘಗಳು ಕ್ರಿಯಾಶೀಲವಾಗಿರಬೇಕು. ಅಂದಾಗ ಮಾತ್ರ ಗ್ರಾಮಗಳ ಸಮಗ್ರ ಅಭಿವೃದ್ಧಿಯಾಗಲು ಸಾಧ್ಯ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

ತಾಲೂಕಿನ ಕಣಕಿಕೊಪ್ಪ ಗ್ರಾಮದಲ್ಲಿನ ಶ್ರೀಗುರು ಬಾಲಲೀಲಾ ಸಂಗಮೇಶ್ವರ ಅಜ್ಜನವರ ಜಾತ್ರಾ ಮಹೋತ್ಸವ ಹಾಗೂ ಉಮೇಶ್ವರ ಶಿವಾಚಾರ್ಯ ಸ್ವಾಮಿಗಳ 48ನೇ ವರ್ಧಂತಿ ಉತ್ಸವ, ಕಣಕಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಯಾವುದೇ ಸಹಕಾರಿ ಸಂಘ ಶತಮಾನೋತ್ಸವ, ವಜ್ರ ಮಹೋತ್ಸವ, ಸುವರ್ಣ ಮಹೋತ್ಸವ ಆಚರಿಸುವ ಸುಸಂದರ್ಭದಲ್ಲಿ ಸಹಕಾರಿಗಳ ಪಾತ್ರ ದೊಡ್ಡದಿರುತ್ತದೆ. ಸಂಘಟನೆ ನೂರು ವರ್ಷ ಸೇವೆ ಮಾಡಿದೆ ಎನ್ನುವ ಅಭಿಮಾನ ಅವರಲ್ಲಿ ಮೂಡಿ ಬರುತ್ತದೆ. ಸಹಕಾರ ಸಂಘ ಪ್ರತಿ ಗ್ರಾಮದಲ್ಲಿ ಕ್ರಿಯಾಶೀಲವಾಗಬೇಕು.

ರಾಜ್ಯ ಕಾಂಗ್ರೆಸ್ ಮಾಧ್ಯಮ ವಕ್ತಾರ ಡಾ. ಸಂಗಮೇಶ್ ಕೊಳ್ಳಿ ಮಾತನಾಡಿ, 1925ರಲ್ಲಿ ಕಣಕಿಕೊಪ್ಪ ಗ್ರಾಮದಲ್ಲಿ ಸಹಕಾರ ಸಂಘ ಸ್ಥಾಪನೆ ಆಗಿದೆ. ಸಂಗಮೇಶ್ವರರ ಗದ್ದುಗೆ ಆಶೀರ್ವಾದದಿಂದ ಸಂಘ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ ಎಂದರು.

ನರಗುಂದ ಶಾಸಕ ಸಿ.ಸಿ. ಪಾಟೀಲ ಮುಂತಾದವರು ಮಾತನಾಡಿದರು. ಸಾನ್ನಿಧ್ಯವನ್ನು ಉಮೇಶ್ವರ ಶಿವಾಚಾರ್ಯ ಶ್ರೀಗಳು, ವೀರಭದ್ರ ಶಿವಾಚಾರ್ಯ ಶ್ರೀಗಳು, ಗುರುಸಿದ್ದೇಶ್ವರ ಶಿವಾಚಾರ್ಯ ಶ್ರೀಗಳು, ಶಿವಮಹಾಂತ ಶಿವಾಚಾರ್ಯ ಶ್ರೀಗಳು, ಸಿದ್ಧಲಿಂಗ ಶಿವಾಚಾರ್ಯ ಶ್ರೀಗಳು, ಗುರು ಸಿದ್ಧವೀರ ಶಿವಯೋಗಿ ಶಿವಾಚಾರ್ಯ ಶ್ರೀಗಳು, ಶಿವಕುಮಾರ ಶ್ರೀಗಳು, ಶಾಂತಲಿಂಗ ಶ್ರೀಗಳು, ಶಿವಪುತ್ರಯ್ಯ ಹಿರೇಮಠ ವಹಿಸಿದ್ದರು.

ಈ ವೇಳೆ ಮೋಹನ್ ಲಿಂಬೆಕಾಯಿ, ಮರಿಗೌಡ ಪಾಟೀಲ, ಎಂ.ಎಸ್. ಪಾಟೀಲ, ವಿಜಯ ಕುಲಕರ್ಣಿ, ಎಸ್.ಡಿ.ಕೊಳ್ಳಿ ಯವರ, ಮರಿಗೌಡ ಪಾಟೀಲ, ವಿಠಲರಡ್ಡಿ ಮೂಗನೂರ, ಶಿವಪ್ಪ ಕೊಳ್ಳಿಯವರ, ಬಸಪ್ಪ ಕೊಳ್ಳಿಯವರ, ಡಾ. ಗುರಪ್ಪ ನುಗ್ಗಾನಟ್ಟಿ, ಯಲ್ಲಪ್ಪ ಕೌಜಗೇರಿ, ಶೇಖರಗೌಡ ಮುದ್ದೂರ, ಕಾಶವ್ವ ರಂಗರಡ್ಡಿಯವರ, ಕಸ್ತೂರಿ ಗಂಗನಗೌಡ್ರ, ಉಮೇಶ ಸೊಬರದ, ಬಸನಗೌಡ ಬೇಡಗೌಡ್ರ, ಹನುಮಪ್ಪ ಮಾದರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ