ಕುವೆಂಪು ಅವರ ಒಂದೊಂದು ಹೇಳಿಕೆಯೂ ಮಹಾಕಾವ್ಯ

KannadaprabhaNewsNetwork | Published : Dec 30, 2024 1:00 AM

ಸಾರಾಂಶ

"ಜೈ ಭಾರತ ಜನನಿಯ ತನುಜಾತೆ " ಎನ್ನುವ ಶೀರ್ಷಿಕೆಯ ನಾಡಗೀತೆ ಶ್ರೇಷ್ಟವಾಗಿದ್ದು, ಅದಕ್ಕೆ ಇನ್ನೊಂದು ಶಬ್ಧ ಸೇರಿಸಲು ಯಾರಿಂದಲೂ ಸಾಧ್ಯವಿಲ್ಲ. ಹಾಗೆಯೇ ಆ ಗೀತೆಯಿಂದ ಒಂದು ಶಬ್ಧ ತೆಗೆದು ಹಾಕಲು ಆಗುವುದಿಲ್ಲ. ಅವರ ಒಂದೊಂದು ಹೇಳಿಕೆ ಜಗತ್ತಿಗೆ ಮಹಾಕಾವ್ಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಚ್.ಎಲ್. ಮಲ್ಲೇಶ್ ಗೌಡ ಬಣ್ಣಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

"ಜೈ ಭಾರತ ಜನನಿಯ ತನುಜಾತೆ " ಎನ್ನುವ ಶೀರ್ಷಿಕೆಯ ನಾಡಗೀತೆ ಶ್ರೇಷ್ಟವಾಗಿದ್ದು, ಅದಕ್ಕೆ ಇನ್ನೊಂದು ಶಬ್ಧ ಸೇರಿಸಲು ಯಾರಿಂದಲೂ ಸಾಧ್ಯವಿಲ್ಲ. ಹಾಗೆಯೇ ಆ ಗೀತೆಯಿಂದ ಒಂದು ಶಬ್ಧ ತೆಗೆದು ಹಾಕಲು ಆಗುವುದಿಲ್ಲ. ಅವರ ಒಂದೊಂದು ಹೇಳಿಕೆ ಜಗತ್ತಿಗೆ ಮಹಾಕಾವ್ಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಚ್.ಎಲ್. ಮಲ್ಲೇಶ್ ಗೌಡ ಬಣ್ಣಿಸಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಶ್ರಮ ಸಮಾಜ ವಿಜ್ಞಾನ ಅಧ್ಯಯನ ಹಾಗೂ ಸಂಶೋಧನಾ ಟ್ರಸ್ಟ್, ಹಸಿರುಭೂಮಿ ಪ್ರತಿಷ್ಠಾನ, ಎ.ವಿ.ಕೆ. ಪದವಿಪೂರ್ವ ಕಾಲೇಜು, ಅಚೀವರ್ಸ್ ಪಿ.ಯು. ಕಾಲೇಜು, ಎಂ.ಕೃಷ್ಣ ಕಾನೂನು ಕಾಲೇಜು, ಸರ್ಕಾರಿ ಎಂಜಿನಿಯರಿಂಗ್, ಕಾಲೇಜು, ಸೆಂಟ್ರಲ್ ಕಾಮರ್ಸ್ ಕಾಲೇಜು, ಹಾಗೂ ಮಹೇಶ್ ಪಿ.ಯು ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಕುವೆಂಪು ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿಶ್ವಮಾನವ ದಿನದಲ್ಲಿ ವಿಚಾರ ಕ್ರಾಂತಿಯೆಡೆಗೆ ನಮ್ಮ ನಡಿಗೆ ಜಾಥಾ ಕಾರ್ಯಕ್ರಮಕ್ಕೆ ಮೊದಲು ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿದರು.

ಇದೇ ವೇಳೆ ಮಾತನಾಡಿದ ಅವರು, ವಿಶ್ವಮಾನವನ ಕುರಿತು ಸಂದೇಶ ನೀಡಿದ ಅವರು, ವಿಚಾರ ಕ್ರಾಂತಿಗೆ ಆಹ್ವಾನ ಎನ್ನುವ ಒಂದು ಮಾತು ಸಾಕು. ಕುವೆಂಪು ಅವರ ಚಿಂತನೆ ಜಾಗತಿಕ ಮಟ್ಟದಲ್ಲಿ ಶ್ರೇಷ್ಠ ನೆಲೆಗೆ ಅವರನ್ನು ಕೊಂಡೊಯ್ಯುತ್ತದೆ. ಅವರನ್ನು ಅನುಸಿರಿಸಿದರೇ ಜಗತ್ತಿನಲ್ಲಿ ಒಂದೂ ತಾಪತ್ರೆ ಇರುವುದಿಲ್ಲ. ಅವರು ಘಟಿಕೋತ್ಸವದಲ್ಲಿ ಮಾಡಿದಂತಹ ಭಾಷಣವು ಈ ದೇಶವಷ್ಟೆಯಲ್ಲ, ವಿಶ್ವದ ಎಲ್ಲಾ ಪದವೀಧರರು ಅರ್ಥೈಸಿಕೊಂಡರೇ ಅವರ ಪದವಿ ಸಾರ್ಥಕ ಜೊತೆಗೆ ಅಳವಡಿಸಿಕೊಂಡರೇ ಅವರ ಬದುಕು ಸಾರ್ಥಕವಾಗುತ್ತದೆ. ಸಂಸಾರದ ಸಂಬಂಧ ಕಳೆದುಕೊಂಡ ಕುವೆಂಪು ಅಂತಹ ಮಹರ್ಷಿ ಆದರು. ಅವರ ಒಂದೊಂದು ಹೇಳಿಕೆ ಜಗತ್ತಿನ ಮಹಾ ಕಾವ್ಯ. ಕುವೆಂಪು ಬಗ್ಗೆ ತಿಳಿದುಕೊಳ್ಳುವುದು ಇನ್ನಷ್ಟು ಇದೆ ಎಂದು ಕಿವಿಮಾತು ಹೇಳಿದರು.

ನಾವು ಹಾಡುವಂತಹ ನಾಡಗೀತೆ ಜಯಭಾರತ ಜನನಿಯ ತನುಜಾತೆ ರಚನೆ ಆಗಿರುವುದು ೧೯೨೪ರಲ್ಲಿ. ರಚನೆಯಾದಗ ಶೀರ್ಷಿಕೆಗೆ "ಕರ್ನಾಟಕ ರಾಷ್ಟ್ರಗೀತೆ " ಎಂದು ಕೊಡಲಾಗಿತ್ತು. ೧೯೨೮ರಲ್ಲಿ ಜಯಭಾರತ ಜನನಿಯ ತನುಜಾತೆ ಎನ್ನುವ ಶೀರ್ಷಿಕೆ ಪ್ರಕಟವಾಗುತ್ತದೆ ಎಂದರು. ನಾಡಗೀತೆ ಶ್ರೇಷ್ಠವಾಗಿದ್ದು, ಅದಕ್ಕೆ ಇನ್ನೊಂದು ಶಬ್ಧ ಸೇರಿಸಲು ಯಾರಿಂದಲೂ ಸಾಧ್ಯವಿಲ್ಲ. ಆಗೆ ಆ ಗೀತೆಯಿಂದ ಒಂದು ಶಬ್ಧ ತೆಗೆಯುವುದಕ್ಕೆ ಆಗುವುದಿಲ್ಲ. ಅಂತಹ ಮಹತ್ವವಾದ ಗೀತೆಯನ್ನು ವಿದ್ಯಾರ್ಥಿ ದೆಸೆಯಲ್ಲಿ ಕಟ್ಟಿಕೊಟ್ಟಂತಹ ಪುಣ್ಯಾತ್ಮ ಎಂದು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಜಾಥಕ್ಕೆ ಬಿಜಿಎಸ್ ಗೌರವಾಧ್ಯಕ್ಷೆ ಮತ್ತು ಸ್ತ್ರೀರೋಗ ತಜ್ಞೆ ಡಾ. ಸಾವಿತ್ರಿ ಬಾವುಟ ಪ್ರದರ್ಶಿಸಿ ಚಾಲನೆ ಕೊಟ್ಟರು. ನಂತರ ಮೆರವಣಿಗೆ ಜಾಥವು ನಗರದ ಪ್ರಮುಖ ರಸ್ತೆ ಮೇಲೆ ಸಂಚರಿಸಿತು. ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಎಚ್.ಬಿ. ಮದನ್ ಗೌಡ, ಎವಿಕೆ ಕಾಲೇಜು ಪ್ರಾಂಶುಪಾಲ ಚಂದ್ರಶೇಖರ್‌, ಜಾನಪದ ಕಲಾವಿದ ಗ್ಯಾರಂಟಿ ರಾಮಣ್ಣ, ಹಿರಿಯ ಪತ್ರಕರ್ತರ ಜೆ.ಆರ್‌. ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಕಾರ್ಯದರ್ಶಿ ಅಹಮದ್ ಹಗರೆ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.

Share this article