ಮರಿಯಮ್ಮನಹಳ್ಳಿ: ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ತದ ಪ್ರತಿ ಗ್ರಾಮಗಳನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಶಾಸಕ ಕೆ. ನೇಮರಾಜ್ ನಾಯ್ಕ ಹೇಳಿದರು.ಸಮೀಪದ ಹಂಪಿನಕಟ್ಟಿ ಗ್ರಾಮದ ಸ.ಹಿ.ಪ್ರಾ. ಶಾಲೆಯ ನೂತನ ಕೊಠಡಿ ಹಾಗೂ ಗ್ರಂಥಾಲಯ ಕೊಠಡಿ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈಗಾಗಲೇ ಕ್ಷೇತ್ರದ ಬಹುತೇಕ ಗ್ರಾಮಗಳಲ್ಲಿ ರಸ್ತೆ ಮತ್ತು ಚರಂಡಿಗಳನ್ನು ನಿರ್ಮಿಸಲಾಗುತ್ತಿದೆ. ಇನ್ನು ಗ್ರಾಮಗಳಲ್ಲಿ ಉಳಿದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.
ಸ್ಥಳೀಯ ಮುಖಂಡರಾದ ಅಂಬ್ರೇಶ್ ಗೌಡ, ಕಡ್ಡಿ ಹನುಮಂತಪ್ಪ, ಮಂಜುನಾಥ, ಲಕ್ಷ್ಮಣ್, ಶ್ರೀರಾಮ, ಫಕ್ಕೀರಪ್ಪ, ತಂಗರಾಜ, ಎಚ್.ಪಾಂಡುರಂಗಶೆಟ್ಟಿ, ವೈ.ಮಲ್ಲಿಕಾರ್ಜುನ, ದುರುಗಪ್ಪ, ನಾಗರಾಜ, ಮಂಜುನಾಥ ಇದ್ದರು.ಮರಿಯಮ್ಮನಹಳ್ಳಿ ಸಮೀಪದ ಹಂಪಿನಕಟ್ಟಿ ಗ್ರಾಮದ ಸ.ಹಿ.ಪ್ರಾ. ಶಾಲೆಯ ನೂತನ ಕೊಠಡಿ ಹಾಗೂ ಗ್ರಂಥಾಲಯ ಕೊಠಡಿ ಭೂಮಿ ಪೂಜೆಯನ್ನು ಶಾಸಕ ಕೆ. ನೇಮರಾಜ್ ನಾಯ್ಕ ನೆರವೇರಿಸಿದರು.