ಎಲ್ಲರೂ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಸಹಕರಿಸಿ

KannadaprabhaNewsNetwork | Published : Mar 3, 2025 1:48 AM

ಸಾರಾಂಶ

ಪಟ್ಟಣದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಎಲ್ಲರೂ ಪಪಂಯೊಂದಿಗೆ ಸಹಕರಿಸಬೇಕು ಎಂದು ಪಪಂ ಮುಖ್ಯಾಧಿಕಾರಿ ಎಂ.ಪಿ. ಮಹೇಶ್‌ಕುಮಾರ್ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಯಳಂದೂರುಪಟ್ಟಣದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಎಲ್ಲರೂ ಪಪಂಯೊಂದಿಗೆ ಸಹಕರಿಸಬೇಕು ಎಂದು ಪಪಂ ಮುಖ್ಯಾಧಿಕಾರಿ ಎಂ.ಪಿ. ಮಹೇಶ್‌ಕುಮಾರ್ ಕರೆ ನೀಡಿದರು.ಪಪಂ ಸಭಾಂಗಣದಲ್ಲಿ ನಡೆದ ಪಂಚಾಯಿತಿಯ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ನಮ್ಮ ಪಂಚಾಯಿತಿ ಚಿಕ್ಕದಾಗಿದೆ. ಇಲ್ಲಿಗೆ ಆದಾಯದ ಮೂಲಗಳು ಕಡಿಮೆ ಇದೆ. ಇದನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸದಸ್ಯರು, ಸಾರ್ವಜನಿಕರು ಸೂಕ್ತ ಸಲಹೆ, ಸೂಚನೆಗಳನ್ನು ನೀಡಬೇಕು, ಪಟ್ಟಣದಲ್ಲಿರುವ ಹಳೆಯ ಕಚೇರಿಯ ಕಟ್ಟಡದಲ್ಲಿ ಮಳಿಗೆಗಳ ನಿರ್ಮಾಣ, ಓವರ್ ಹೆಡ್ ಟ್ಯಾಂಕ್ ಇದ್ದ ಕಡೆ ಮಳಿಗೆ ನಿರ್ಮಾಣ, ಮಾರುಕಟ್ಟೆ ಅಭಿವೃದ್ಧಿ, ಸೂಕ್ತ ವಾಹನ ನಿಲುಗಡೆಗೆ ಸ್ಥಳಾವಕಾಶ, ದ್ವಿಪಥ ರಸ್ತೆಯಲ್ಲಿ ವಿದ್ಯುತ್ ಬಲ್ಪ್‌ಗಳ ಅಳವಡಿಕೆ, ಪಾರ್ಕ್ ನಿರ್ಮಾಣ, ಇ-ಸ್ವತ್ತು ಯೋಜನೆ ಖಾತೆ ಮಾಡಿಸಿಕೊಳ್ಳಲು ಸರ್ಕಾರ ತಂದಿರುವ ಹೊಸ ಮಾರ್ಗಸೂಚಿಗಳನ್ನು ಮನೆಮನೆಗಳಿಗೆ ತಲುಪಿಸಿ ಇಲ್ಲಿಂದ ಆದಾಯ ಕ್ರೂಢೀಕರಿಸುವುದು, ಪಟ್ಟಣ ಪಂಚಾಯಿತಿ ವತಿಯಿಂದ ಸುಸಜ್ಜಿತ ನೂತನ ಹೋಟೆಲ್ ಕಟ್ಟಡ ನಿರ್ಮಾಣ ಮಾಡುವುದು, ಸೇರಿದಂತೆ ಎಲ್ಲರೂ ಸಲಹೆ ಸೂಚನೆಗಳನ್ನು ನೀಡಿದ್ದಾರೆ.

ಇವೆಲ್ಲವನ್ನೂ ಪರಿಗಣಿಸಿ ಸರ್ಕಾರದಿಂದ ನಮಗೆ ಲಭಿಸುವ ಅನುದಾನಗಳ ಲಭ್ಯತೆ, ಅವುಗಳ ವಿನಿಯೋಗ ಹೊಸ ಯೋಜನೆಗಳಿಗೆ ಬೇಕಾಗುವ ಅನುದಾನಗಳ ಅಂದಾಜು ಪಟ್ಟಿ ತಯಾರಿಕೆ, ಪಂಚಾಯಿತಿಗೆ ಬರುವ ಆದಾಯ, ಹೊಸದಾಗಿ ಬರಬಹುದಾದ ಆದಾಯದ ಮೂಲಗಳನ್ನು ಪಟ್ಟಿ ಮಾಡಿ ಬಜೆಟ್ ತಯಾರಿಸಿ ಪಟ್ಟಣದ ಅಭಿವೃದ್ಧಿಗೆ ಪೂಕರವಾಗಿರುವ ಬಜೆಟ್ ಮಂಡಿಸಲಾಗುವುದು ಎಂದರು.

ಪಪಂ ಅಧ್ಯಕ್ಷೆ ಲಕ್ಷ್ಮೀಮಲ್ಲು ಉಪಾಧ್ಯಕ್ಷೆ ಶಾಂತಮ್ಮ ನಿಂಗರಾಜು ಸದಸ್ಯರಾದ ಮಹೇಶ್, ವೈ.ಜಿ. ರಂಗನಾಥ, ಸವಿತಾ ಬಸವರಾಜು, ಮಂಜು, ಬಿ. ರವಿ, ನಾಮ ನಿರ್ದೇಶಿತ ಸದಸ್ಯರಾದ ಲಿಂಗರಾಜಮೂರ್ತಿ, ಮುನವ್ವರ್ ಬೇಗ್, ಶ್ರೀಕಂಠಸ್ವಾಮಿ ಮುಖಂಡರಾದ ನಿರಂಜನಸ್ವಾಮಿ, ಪ್ರಕಾಶ್, ನಾರಾಯಣಸ್ವಾಮಿ, ಸಿದ್ದರಾಜು, ನಾಗರಾಜು ಪಪಂನ ಸಿಬ್ಬಂಧಿಗಳಾದ ದೊಡ್ಡ ಬಸವಣ್ಣ, ಜಯಲಕ್ಷ್ಮೀ, ಲಕ್ಷ್ಮೀ, ಭಾಗ್ಯ, ವಿಜಯ, ಮಲ್ಲಿಕಾರ್ಜುನ ಇದ್ದರು.

Share this article