ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಬಾರಿಯ ಜಾತ್ರೆ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಲಕ್ಷಾಂತರ ಭಕ್ತರು ಯಾವ ತೊಂದರೆಯಿಲ್ಲದೆ ದರ್ಶನ ಪಡೆದರು. ದೀಪಲಂಕಾರ ಈ ಬಾರಿಯ ವೈಶಿಷ್ಟ್ಯತೆ ಆಗಿತ್ತು. ಜೊತೆಗೆ ದೇವಸ್ಥಾನದಲ್ಲಿ ಹೂವಿನ ಅಲಂಕಾರ ಗಮನ ಸೆಳೆಯಿತು. ಸುಮಾರು 46 ಅಡಿ ಎತ್ತರದ ಚಾಮುಂಡಿ ದೇವಿಯ ಪ್ರತಿಮೆ ಆಕರ್ಷಕವಾಗಿತ್ತು. ಎಲ್ಲ ವ್ಯವಸ್ಥೆಗಳು ಸಮರ್ಪಕವಾಗಿ ನಡೆಯಿತು. ಯಾವ ಅಹಿತರ ಘಟನೆಯೂ ನಡೆಯದೇ ಜಾತ್ರೆ ಯಶಸ್ವಿಯಾಗಿ ನಡೆದಿದೆ. ಇದಕ್ಕೆ ಅರಣ್ಯ ಇಲಾಖೆ, ಪೊಲಿಸ್ ಇಲಾಖೆ, ಮಹಾನಗರ ಪಾಲಿಕೆ ಸೇರಿದಂತೆ ಎಲ್ಲ ಇಲಾಖೆಗಳ ಸಹಕಾರವಿದೆ ಎಂದು ತಿಳಿಸಿದರು.
ಈ ಬಾರಿ ಜಾತ್ರೆಯ ಅಲಂಕಾರ ಎಲ್ಲರ ಗಮನ ಸೆಳೆದಿದೆ. ಇದರ ರೂವಾರಿ ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್ ಅವರು. ಪ್ರಥಮ ಬಾರಿಗೆ ದೇವಸ್ಥಾನದ ಆವರಣದಲ್ಲಿ ಅವರು ಲಕ್ಷಾಂತರ ರು. ವೆಚ್ಚದಲ್ಲಿ ಹೂವಿನ ಅಲಂಕಾರ ಮಾಡಿಸಿದ್ದರು. ಮುಂದಿನ ವರ್ಷಗಳಲ್ಲಿ ದೇವಸ್ಥಾನ ಸಮಿತಿಯಿಂದಲೇ ಈ ರೀತಿಯ ಅಲಂಕಾರವನ್ನು ಮಾಡುತ್ತೇವೆ. ಇದು ನಮಗೆ ಪ್ರೇರಣೆಯಾಗಿದೆ ಎಂದರು.ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಅಗ್ನಿಶಾಮಕ ದಳ, ಅರಣ್ಯ ಇಲಾಖೆ, ಶಾಸಕರು ಸ್ಥಳೀಯ ಮಾಜಿ ಕಾಪೋರೇಟರ್‌ಗಳು, ಮಾಧ್ಯಮ ಹೀಗೆ ಎಲ್ಲಾ ಇಲಾಖೆಗಳು ಈ ಬಾರಿ ನಮಗೆ ಸಹಕಾರ ನೀಡಿವೆ. ಜೊತೆಗೆ ಜಾತ್ರೆಯ ಯಶಸ್ಸಿಗಾಗಿ ನಾವು ಹಲವು ಉಪಸಮಿತಿಗಳನ್ನು ಮಾಡಿದ್ದೆವು. ಸಮಿತಿಗಳು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವೆ ಎಂದು ಹೇಳಿದರು.
ಸಮಿತಿ ಉಪಾಧ್ಯಕ್ಷ ಎನ್.ಉಮಾಪತಿ ಮಾತನಾಡಿ, ಈ ಬಾರಿ ರಾಜ್ಯಮಟ್ಟದ ಬಯಲು ಕುಸ್ತಿಪಂದ್ಯಾವಳಿ ಅತ್ಯಂತ ಆಕರ್ಷಕವಾಗಿತ್ತು. ಇದೇ ಮೊದಲ ಬಾರಿಗೆ ಮಹಿಳೆಯರಿಗೆ ನಾವು ಕುಸ್ತಿ ಪಂದ್ಯಾವಳಿ ನಡೆಸಿದ್ದೆವು. ಇದು ನಮಗೆ ಪ್ರೇರಣೆ ನೀಡಿದೆ. ಮುಂದಿನ ದಿನಗಳಲ್ಲಿ ಮಹಿಳೆಯರಿಗಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸುವ ಉದ್ದೇಶವಿದೆ ಎಂದರು.
ಪುರುಷರ ಕುಸ್ತಿ ಪಂದ್ಯಾವಳಿ ಕೂಡ ಗಮನಸೆಳೆಯಿತು. ಹರಿಯಾಣ, ಮಹಾರಾಷ್ಟ್ರ, ದೆಹಲಿ ಮುಂತಾದ ಕಡೆಗಳಿಂದ ಕುಸ್ತಿಪಟುಗಳು ಆಗಮಿಸಿದ್ದರು. ಈ ಬಾರಿ ಗ್ಯಾಲರಿಯನ್ನು ನಿರ್ಮಿಸಲಾಗಿತ್ತು. ಇದು ಮಣ್ಣಿನ ಕುಸ್ತಿಯಾಗಿದೆ. ರಾಷ್ಟ್ರಮಟ್ಟದಲ್ಲಿ ಮ್ಯಾಟ್ ಕುಸ್ತಿ ಚಾಲ್ತಿಯಲ್ಲಿದೆ. ಮುಂದಿನ ಬಾರಿ ಮಣ್ಣಿನ ಕುಸ್ತಿಯ ಜೊತೆಗೆ ಮ್ಯಾಟ್ ಕುಸ್ತಿಯನ್ನು ಕೂಡ ನಡೆಸಲಾಗುವುದು ಎಂದರು.ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಡಿ.ಎಂ.ರಾಮಯ್ಯ, ವಿ.ರಾಜು, ಪ್ರಕಾಶ್, ಸುನೀಲ್, ಎಸ್.ಸಿ.ಲೋಕೇಶ್ ಮತ್ತಿತರರು ಇದ್ದರು.
- - - -20ಎಸ್‌ಎಂಜಿಕೆಪಿ02: ಎಸ್.ಕೆ.ಮರಿಯಪ್ಪ