ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಆಪರೇಟರ್‌ಗಳ ದಿನಾಚರಣೆ
ಕಂಪ್ಯೂಟರ್ ಆವಿಷ್ಕಾರ ಮಾಡಿದ ವಿಜ್ಞಾನಿ ಚಾರ್ಲ್ಸ್ ಬ್ಯಾಬೇಜ್ ಜನ್ಮಾಚರಣೆಯನ್ನು ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿನ ಡಾಟಾ ಎಂಟ್ರಿ ಆಪರೇಟರುಗಳು ಇನ್ನುಮುಂದೆ ಪ್ರತಿವರ್ಷ ಡಿ.26ರಂದು ಕಂಪ್ಯೂಟರ್ ಆಪರೇಟರ್‌ಗಳ ದಿನವನ್ನಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ನಾವು ಇಂದು ಬಳಸುವ ಎಲ್ಲಾ ಅಗತ್ಯ ಪರಿಕಲ್ಪನೆಗಳನ್ನು ಒಳಗೊಂಡಿರುವ ಮೊದಲ ಡಿಜಿಟಲ್ ಸ್ವಯಂಚಾಲಿತ ಕಂಪ್ಯೂಟರ್ ಅನ್ನು ವಿನ್ಯಾಸಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಲರ್ಕ್-ಕಂ-ಡೇಟಾಎಂಟ್ರಿ ಆಪರೇಟರ್ ಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಈ ಹೆಚ್ಚೆ ಇಟ್ಟಿದೆ. ಡಿ.25ರಂದು ಉತ್ತಮ ಆಡಳಿತ ದಿನ ಆಚರಿಸಲು ಘೋಷಿಸಲಾಗಿದ್ದು, ಆದಿನ ಸಾರ್ವತ್ರಿಕ ರಜೆ ದಿನವಾದ ಕಾರಣ ಡಿ.26ರಂದು ಉತ್ತಮ ಆಡಳಿತ ದಿನದೊಂದಿಗೆ ಚಾರ್ಲ್ಸ್ ಬ್ಯಾಬೇಜ್ ಸ್ಮರಣಾರ್ಥ ʻಕಂಪ್ಯೂಟರ್ ಆಪರೇಟರ್ ದಿನʼ ಆಚರಿಸಲು ತೀರ್ಮಾನಿಸಿ ಆದೇಶ ಹೊರಡಿಸಲಾಗಿದೆ ಎಂದರು.ಕಂಪ್ಯೂಟರ್ ಶಿಕ್ಷಣ ಅಗತ್ಯ
ಇಂದಿನ ಆಧುನಿಕ ಜಗತ್ತಿನತ್ತ ದಾಪುಗಾಲು ಇಡುತ್ತಿರುವ ಇಂದಿನ ಸುಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಕಂಪ್ಯೂಟರ್ ಶಿಕ್ಷಣ ಹಾಗೂ ಜ್ಞಾನ ಅಗತ್ಯವಾಗಿದೆ. ಗ್ರಾಮೀಣ ಜನರ ಅನುಕೂಲಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಕಾರ್ಯಕ್ರಮಗಳು ಹಾಗು ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಸಿಗುವ ಸೌಲಭ್ಯಗಳನ್ನು ಸಾರ್ವಜನಿಕರ ಸನಿಹಕ್ಕೆ ತಗೆದುಕೊಂಡು ಹೋಗುತ್ತಿರುವ ಡಾಟಾ ಎಂಟ್ರಿ ಆಪರೇಟರ್ ಗಳನ್ನು ಗುರುತಿಸಿ ಅವರ ಕಲ್ಯಾಣಕ್ಕಾಗಿ ಕಂಪ್ಯೂಟರ್ ಆಪರೇಟರ್‌ಗಳ ದಿನಾಚರಣೆ ಘೋಷಣೆ ಮಾಡಲಾಗಿದೆ ಎಂದರು. ಈ ಸಂದರ್ಭದಲ್ಲಿ ತಾಪಂ ಇಒ ಜೆ.ಕೆ. ಹೊನ್ನಯ್ಯ ರವರನ್ನು ಸನ್ಮಾನಿಸಿದರು.