ಕನ್ನಡಪ್ರಭ ವಾರ್ತೆ ಇಳಕಲ್ಲ
ಇಂದು ನಾವುಗಳು ಊಟ ಮಾಡುವ ಆಹಾರದ ಬಗ್ಗೆ ಅತ್ಯವಶ್ಯವಾಗಿ ತಿಳಿದುಕೊಳ್ಳಬೇಕಾಗಿದೆ. ಕಾರಣ ಹೋಲದಲ್ಲಿ ಬೇವರು ಸುರಿಸಿ ರೈತ ಬೆಳೆದ ಆಹಾರವನ್ನು ಪೋಲು ಮಾಡುತ್ತಿದ್ದೇವೆ. ಎಲ್ಲರಿಗೂ ಆಹಾರದ ಅರಿವು ಆಗಬೇಕಾಗಿದೆ ಎಂದು ಇಳಕಲ್ಲ ವಿಜಯ ಮಹಾಂತೇಶ್ವರ ಶ್ರೀಮಠದ ಗುರುಮಹಾಂತ ಶ್ರೀಗಳು ನುಡಿದರು.ನಗರದ ಲಿಂ.ವಿಜಯ ಮಹಾಂತ ಶಿವಯೋಗಿಗಳ ಕರ್ತು ಗದ್ದುಗೆಯಲ್ಲಿ ದಿಪೋತ್ಸವ ಮಾಸದ ಮಂಗಲ ಕಾರ್ಯದ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಇಂದು ಭಾರತ ದೇಶದ ಜನ ಸಂಖ್ಯೆ ಹೆಚ್ಚಾಗುತ್ತದೆ. ಆದರೆ, ಅದಕ್ಕೆ ತಕ್ಕಂತ್ತೆ ಆಹಾರ ಉತ್ಪಾದನೆ ಆಗುತಿಲ್ಲ. ಇದರಿಂದ ಮುಂದೆ ನಮ್ಮ ದೇಶ ಆಹಾರದ ಕೊರತೆ ಅನುಭವಿಸಬಹುದು. ಇದಕ್ಕಾಗಿ ಹಿಂದಿನ ಡಾ.ಮಹಾಂತಪ್ಪನವರು ಕಾರ್ತಿಕ ಮಾಸದ ನೇಪದಲ್ಲಿ ಊಟ ಮಾಡುವ ಅಡುಗೆ ಎಣ್ಣೆಯನ್ನು ಹಾಳು ಮಾಡದೇ ಅದನ್ನು ಬಡ ಜನರಿಗೆ ಊಟ ಮಾಡಲು ಕೊಡಿ. ಅದುವೇ ನಿಮ್ಮ ಕಾರ್ತಿಕ ಹಚ್ಚಿದಂತೆ ಎಂದು ತಿಳಿಸಿದ್ದನ್ನು ನೆನಪಿಸಿದರು.
ಶಿರೂರಿನ ಡಾ.ಬಸವಲಿಂಗ ಶ್ರೀಗಳು ಹಾಗೂ ಲಿಂಗಸೂರಿನ ಮಹಾಂತ ಶ್ರೀಗಳು ಸಮಾರಂಭ ಸಾನ್ನಿಧ್ಯ ವಹಿಸಿ ಮಾತನಾಡಿದರು. ಸಮಾರಂಭ ಉದ್ದೇಶಿಸಿ ಲಿಂಗವಂತ ಬ್ಯಾಂಕಿನ ಚೇರಮನ್ ವಿಶ್ವನಾಥ ಪಾಟೀಲ, ಸತ್ಕಾರ ಪಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹಾದೇವ ಕಂಬಾಗಿ ಹಾಗೂ ಸಾಹಿತಿ ಸಿತಿಮಾ ವಜ್ಜಲ, ಇತರರು ಮಾತನಾಡಿದರು. ಇದೇ ವೇಳೆಯಲ್ಲಿ ಸಾಧನೆ ಮಾಡಿದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹನುಮಾನದಾಸ ಪವಾರ, ಮಹಾದೇವ ಕಂಬಾಗಿ, ಗಂಗಮ್ಮ ಆರೇರ, ಸುನಂದಾ ಕಂದಗಲ್ಲ, ಸಿದ್ದಪ್ಪ ಮಾದರ, ನೀಲಕಂಠ ಕಾಳಗಿ, ಗಿರಿಜಾ ಶಿವಬಲ್ಲ, ಅರವಿಂದ ಮಂಗಳೂರ ಹಾಗೂ ಇತರರನ್ನು ಗೌರವಿಸಿ, ಸತ್ಕರಿಸಿದರು. ಈ ಸಂದರ್ಭದಲ್ಲಿ ಗುರಣ್ಣ ಮರಟದ, ಸಣ್ಣದುರಗಪ್ಪ ಬಂಡಿ, ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ, ಲತಾ ಚಂದ್ರಹಾಸ ಹೇರೂರ, ತರುಣ ಸಂಘದ ಅಧ್ಯಕ್ಷ ಶರಣಗೌಡ ಪಾಟೀಲ ಹಾಗೂ ಇತರರು ಉಪಸ್ಥಿತರಿದ್ದರು. ಮಂಜುನಾಥ ಬೇಳವಣಕಿ ಸ್ವಾಗತಿಸಿದರು. ಚನ್ನು ಮುದಗಲ್ಲ ಕಾರ್ಯಕ್ರಮ ನಿರೂಪಿಸಿದರು. ಸಮಾಜದಲ್ಲಿ ಸಾಧನೆ ಮಾಡಿದ ಮಹನೀಯರ ಸತ್ಕಾರ ಮಾಡಿದ್ದೇವೆ. ಅವರು ಮಾಡಿದ ಸಾಧನೆಗೆ ನಾವು ಏನು ಕೊಟ್ಟರೂ ಕಡಿಮೆ. ಇಂಥ ಸಾಧಕರು ನಮ್ಮ ಭಾಗದಲ್ಲಿ ಇರುವುದು ನಮಗೆ ಸಂತಸ ತಂದಿದೆ. ಇದಕ್ಕೆಲ್ಲ ಕಾರಣ ಸಚಿವ ಶಿವರಾಜ ತಂಗಡಗಿಯವರು ಎಂದರು ತಪ್ಪಲ್ಲ. ಅವರು ಯಾರು ಮಾಡದಂತ ಕಾರ್ಯ ಮಾಡುತಿದ್ದಾರೆ. ಉತ್ತರ ಕರ್ನಾಟಕದಲ್ಲಿರುವ ಸಾಧಕರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ಕೊಡುತಿದ್ದಾರೆ.-ಗುರುಮಹಾಂತ ಶ್ರೀಗಳು,
ಇಳಕಲ್ಲ ವಿಜಯ ಮಹಾಂತೇಶ್ವರ ಶ್ರೀಮಠ.ಮಹಾಂತ ತೇರು ಎಳೆದ ಮಹಿಳೆಯರು
ಇಳಕಲ್ಲ: ನಗರದ ಲಿಂ.ವಿಜಯ ಮಹಾಂತ ಶಿವಯೋಗಿಗಳ ಕರ್ತು ಗದ್ದುಗೆಯಲ್ಲಿ ದಿಪೋತ್ಸವ ಮಾಸದ ಮಂಗಲ ಕಾರ್ಯದ ಅಂಗವಾಗಿ ನಡೆದ ರಥೋತ್ಸವ ಸಮಾರಂಭದಲ್ಲಿ ಲಿಂ.ಡಾ.ಮಹಾಂತಪ್ಪಗಳ ಆದೇಶದಂತೆ ಮಹಾಂತರ ತೇರನ್ನು ಮಹಿಳೆಯರು ಎಳೆದು ಸಂಭ್ರಮಪಟ್ಟರು. ಗುರುಮಹಾಂತ ಶ್ರೀಗಳು ತೇರಿಗೆ ಪೂಜೆ ಸಲ್ಲಿಸಿದ ಬಳಿಕ ಅಕ್ಕನ ಬಳಗ, ಕದಳಿ ವೇದಿಕೆ ಹಾಗೂ ನಗರದ ಮಹಿಳೆಯರು ಕೂಡಿಕೊಂಡು ಲಿಂ.ವಿಜಯ ಮಹಾಂತ ಶಿವಯೋಗಿಗಳ ಕರ್ತು ಗದ್ದುಗೆಯ ಸುತ್ತ ಐದು ಸುತ್ತು ಹಾಕುವುದರ ಮೂಲಕ ಮಹಾಂತರ ತೇರನ್ನು ಶಾಂತ ರೀತಿಯಿಂದ ಎಳೆದು ಸಂತಸಪಟ್ಟರು. ಶಿರಬಡಗಿಯ ಭಜನಾ ಮಂಡಳಿ ಮತ್ತು ಮಹಾಂತಪ್ಪ ಶೆಟ್ಟರ ಮನೆಯಿಂದ ಪಾಲಕಿ ಆಗಮಿಸಿ ರಥೋತ್ಸವಕ್ಕೆ ಚಾಲನೆ ಕೊಟ್ಟರು. ಕುಂಬಾರರ ಸಿಂಗಾರಗೊಂಡ ಕುದರೆಯ ಕುಣಿತ ಜನರ ಮನಸ್ಸಿಗೆ ಸಂತಸ ಕೊಟ್ಟರೆ, ಕರ್ತು ಗದ್ದುಗೆಯಲ್ಲಿ ಮೈಸೂರಿನ ಕಾರಂಜಿ ತರಣ ಸಂಗೀತದೊಂದಿಗೆ ಕಾರಂಜಿ ನೀರು ನೃತ್ಯ ಜನರ ಮನ ಗೆದ್ದಿತು. ನಂತರ ರುಚಿ ರುಚಿಯಾದ ಪ್ರಸಾದ ಸೇವೆಯನ್ನು ಅರವಿಂದ ಮಂಗಳೂರ ಕುಟುಂಬದವರು ಬಂದ ಭಕ್ತರಿಗೆ ಮಾಡಿದ್ದರು.