ಮಧ್ಯ ಕರ್ನಾಟಕ ಹರಿಹರದಲ್ಲಿ ನಡೆಯುವ ದಸರಾ ಹಬ್ಬದ ಶೋಭಾಯಾತ್ರೆಯು ಮೈಸೂರು ನಾಡಹಬ್ಬದ ಮೆರವಣಿಗೆಯಂತೆ ಬಿಂಬಿತವಾಗುತ್ತದೆ ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದರು.
ಹರಿಹರ: ಮಧ್ಯ ಕರ್ನಾಟಕ ಹರಿಹರದಲ್ಲಿ ನಡೆಯುವ ದಸರಾ ಹಬ್ಬದ ಶೋಭಾಯಾತ್ರೆಯು ಮೈಸೂರು ನಾಡಹಬ್ಬದ ಮೆರವಣಿಗೆಯಂತೆ ಬಿಂಬಿತವಾಗುತ್ತದೆ ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದರು.
ನಗರದ ಓಂಕಾರ ಮಠದಲ್ಲಿ ದಸರಾ ಮಹೋತ್ಸವ ಸಮಿತಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ದಸರಾ ಹಬ್ಬದ ಆಚರಣೆಯ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ೨೧ ವರ್ಷಗಳಿಂದ ಸಾಮೂಹಿಕ ದಸರಾ ಸಮಿತಿಯ ಹೆಸರಿನಲ್ಲಿ ಆಚರಣೆ ಮಾಡುತ್ತಿರುವುದು ಹರಿಹರ ಸೇರಿದಂತೆ ಸುತ್ತಮುತ್ತಲಿನ ಭಕ್ತರು ಇಲ್ಲಿನ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸ ತಂದಿದೆ ಎಂದರು.
ದಸರಾ ಮೆರವಣಿಗೆಯಲ್ಲಿ ಬಹುತೇಕ ಭಕ್ತರು ರಸ್ತೆಯ ಬದಿಯಲ್ಲಿ ನಿಂತು ಮೆರವಣಿಗೆಯನ್ನು ನೋಡುವ ಬದಲು ತಾವು ಕೂಡ ಮೆರವಣಿಗೆಯಲ್ಲಿ ಪಾಲ್ಗೊಂಡರೆ ಶೋಭಾಯಾತ್ರೆ ಅರ್ಥಪೂರ್ಣವಾಗಿ ಆಚರಿಸಿದಂತಾಗುತ್ತದೆ ಎಂದು ಸಲಹೆ ನೀಡಿದರು.
ನಾರಯಣ ಜೋಯಿಸ್ ಮಾತನಾಡಿ, ಸೂರ್ಯಸ್ತದೊಳಗೆ ಬನ್ನಿ ಮುಡಿಯುವುದು ಸಂಪ್ರದಾಯವಾಗಿದೆ. ಆಯೋಜಕರು ಸಮಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಅಲ್ಲದೆ ಮೆರವಣಿಗೆಯನ್ನು ಆದಷ್ಟು ಬೇಗ ಪ್ರಾರಂಭಿಸುವುದು ಸೂಕ್ತ ಎಂದರು.
ಜಿಪಂ ಮಾಜಿ ಅಧ್ಯಕ್ಷ ಎಸ್.ಎಂ.ವಿರೇಶ್ ಹನಗವಾಡಿ ಮಾತನಾಡಿ, ದಸರಾ ಸಮಿತಿಯ ಅಧ್ಯಕ್ಷರು ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರಿದ್ದು, ನಗರದಲ್ಲಿ ನಡೆಯುವ ದಸರಾ ಮಹೋತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಒತ್ತಡಹಾಕಿ ರಾಜ್ಯ ಸರ್ಕಾರದಿಂದ ಅನುದಾನ ತರಲು ಶ್ರಮಿಸುವಂತೆ ಸಲಹೆ ನೀಡಿದರು.
ಸಮಿತಿಯ ಅಧ್ಯಕ್ಷ ಶಂಕರ್ ಕಟಾವ್ಕರ್ ಮಾತನಾಡಿ, ಸೆ.೨೨ರಿಂದ ಅ.೨ರವರೆಗೆ ಶರನ್ನವರಾತ್ರಿಯ ಉತ್ಸವ ನಡೆಯಲಿದ್ದು, ಅ.೨ರಂದು ಸಾಮೂಹಿಕ ಬನ್ನಿ ಹಾಗೂ ಅದ್ಧೂರಿ ಅಂಬಾರಿ ಮೆರವಣಿಗೆಗೆ ಜರುಗಲಿದೆ. ನಗರದ ಎಲ್ಲಾ ಸಮಾಜ ಬಾಂಧವರು ಪಾಲ್ಗೊಳ್ಳುವಂತೆ ಕೋರಿಕೊಂಡರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.