ಮಹಾಯೋಗಿ ವೇಮನ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಬೆಳವಣಿಗೆಗೆ ಎಲ್ಲರ ಸಹಕಾರ ಇದೆ: ಮುನಿರೆಡ್ಡಿ

KannadaprabhaNewsNetwork |  
Published : Aug 26, 2024, 01:34 AM ISTUpdated : Aug 26, 2024, 05:22 AM IST
ಯಲಕಂಕ  | Kannada Prabha

ಸಾರಾಂಶ

ಮಹಾಯೋಗಿ ವೇಮನ ಸೌಹಾರ್ದ ಪತ್ತಿನ ಸಹಕಾರಿ ಸಂಘದ ವತಿಯಿಂದ ಯಲಹಂಕ ಉಪನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ 15ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯು ಹಲವು ನಿರ್ಣಯಗಳ ಮಂಡನೆ- ಅಂಗೀಕಾರದ ಮೂಲಕ ಯಶಸ್ವಿಯಾಗಿ ನೆರವೇರಿತು.

 ಯಲಹಂಕ : ಮಹಾಯೋಗಿ ವೇಮನ ಸೌಹಾರ್ದ ಪತ್ತಿನ ಸಹಕಾರಿ ಸಂಘದ ವತಿಯಿಂದ ಯಲಹಂಕ ಉಪನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ 15ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯು ಹಲವು ನಿರ್ಣಯಗಳ ಮಂಡನೆ- ಅಂಗೀಕಾರದ ಮೂಲಕ ಯಶಸ್ವಿಯಾಗಿ ನೆರವೇರಿತು.

ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಹಕಾರಿ ಸಂಘದ ಅಧ್ಯಕ್ಷ ಎಂ.ಮುನಿರೆಡ್ಡಿ ಮಾತನಾಡಿ ''''''''ಮಹಾಯೋಗಿ ವೇಮನ ಸೌಹಾರ್ದ ಪತ್ತಿನ ಸಹಕಾರಿಯ ಸದಸ್ಯರ ಸಂಖ್ಯೆ ವರ್ಷ ಕಳೆದಂತೆ ಹೆಚ್ಚಾಗುತ್ತಿದ್ದು, ಪ್ರಸಕ್ತವಾಗಿ ಸದಸ್ಯರ ಸಂಖ್ಯೆ 5800ರ ಗಡಿಯನ್ನು ದಾಟಿದೆ. ಆರಂಭದಿಂದಲೂ ಸಹಕಾರ ತತ್ವಗಳಲ್ಲಿ ನಂಬಿಕೆಯಿಟ್ಟು, ಮುಕ್ತ ಸದಸ್ಯತ್ವ ನೀತಿ ಅನುಸರಣೆಯ ಮೂಲಕ 3.72 ಲಕ್ಷ ಷೇರು ಸಂಗ್ರಹಣೆ, 23.18 ಲಕ್ಷ ರು.ಗಳ ಮೀಸಲು ನಿಧಿ ಕ್ರೂಢಿಕರಣೆ, ಮಿತವ್ಯಯ ಮತ್ತು ಉಳಿತಾಯ ಮನೋಭಾವ ಬೆಳೆಸುವ ನಿಟ್ಟಿನಲ್ಲಿ 106.54 ಲಕ್ಷ ರು.ಗಳ ಠೇವಣಿ ಸಂಗ್ರಹಣೆ, ಒಟ್ಟಾರೆ 133.45 ಲಕ್ಷ ದುಡಿಯುವ ಬಂಡವಾಳ ಕ್ರೋಢೀಕರಣೆ, 81.77 ರು.ಗಳ ಲಕ್ಷ ಸಾಲ ಸೌಲಭ್ಯ ನೀಡಿಕೆ 2.88 ಲಕ್ಷ ರು.ಗಳ ನಿವ್ವಳ ಲಾಭ ಗಳಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದು, ಸಹಕಾರಿ ಸಂಘ ಆರಂಭವಾಗಿ 15 ವರ್ಷಗಳ ಈ ಸಂದರ್ಭವರೆಗೆ ಪಾವತಿಯಾದ ಷೇರು ಬಂಡವಾಳ, ನಿಧಿಗಳು, ಠೇವಣಿಗಳು, ಲಾಭ, ಕೈಶುಲ್ಕ, ಬ್ಯಾಂಕಿನ ಶುಲ್ಕ, ಹೂಡಿಕೆಗಳು, ಸಾಲ, ಮುಂಗಡ, ಹೂಡಿಕೆ ಮೇಲೆ ಬರಬೇಕಾದ ಬಡ್ಡಿ, ಇತರೆ ಠೇವಣಿಗಳು, ಸ್ಥಿರಾಸ್ತಿ, ಇತರೆ ಆಸ್ತಿಗಳು ಸೇರಿದಂತೆ ಎಲ್ಲಾ ಮೂಲಗಳಿಂದ ಸಹಕಾರಿ ಸಂಘವು 146.19 ಕೋಟಿ ರು.ಗಳ ಒಟ್ಟು ಬಂಡವಾಳವನ್ನು ಹೊಂದಲು ಸಾಧ್ಯವಾಗಿದೆ. ಈ ಎಲ್ಲಾ ಸಾಧನೆ ಸದಸ್ಯರ ಸಹಕಾರ, ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಸಹಕಾರಿಯ ಸಿಬ್ಬಂದಿಗಳ ನಿಷ್ಠೆಯ ಕಾರ್ಯ ಕೌಶಲ್ಯತೆಯಿಂದ ಸಾಧ್ಯವಾಗಿದೆ ಎಂದರು.

ಮಹಾಯೋಗಿ ವೇಮನ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಎಸ್ ಎನ್ ಸಂಪತ್ ಕುಮಾರ್, ನಿರ್ದೇಶಕರಾದ ಎಸ್.ಜಿ.ನರಸಿಂಹ ಮೂರ್ತಿ, ಮೋಹನ್ ಕುಮಾರ್,ಎಚ್.ರಾಜಣ್ಣ, ಅರುಣಪ್ರಕಾಶ್, ಬಿ.ಎಂ.ಗೀತಾ, ಟಿ.ಎನ್.ಶ್ರೀನಿವಾಸ್, ಕೆ.ಜಿ.ರಾಮಕೃಷ್ಣಯ್ಯ, ಜಿ.ನರಸಿಂಹಮೂರ್ತಿ, ಸಿ.ಶ್ರೀನಿವಾಸ್, ಕೆ.ವಿ.ಸತೀಶ್, ಸಿ.ಆರ್.ಜಯಪ್ಪರೆಡ್ಡಿ, ಸಿಇಒ ನಾಗೇಶ್ ಸಿ.ಆರ್., ಶಾಖಾ ವ್ಯವಸ್ಥಾಪಕ ಚೇತನ್ ಜಿ.ರೆಡ್ಡಿ ಸೇರಿದಂತೆ ಸಹಕಾರಿ ಸಂಘದ ಸಿಬ್ಬಂದಿಯಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ