ಕನ್ನಡಪ್ರಭ ವಾರ್ತೆ ಹೊನ್ನಾಳಿ
ಶುಕ್ರವಾರ ಪೇಟೆ ಶ್ರೀ ವೀರಭದ್ರೇಶ್ವರ ಸ್ವಾಮಿ ನೂತನ ಶಿಲಾಮಂದಿರ ಉದ್ಘಾಟನೆ, ಮೂರ್ತಿ ಪ್ರಾಣಪ್ರತಿಷ್ಠಾಪನೆ, ಮತ್ತು ಗೋಪುರ ಕಳಸಾರೋಹಣ ಕಾರ್ಯಕ್ರಮಗಳನ್ನು ನೆರವೇರಿಸಿ ನಂತರ ವೇದಿಕೆಯಲ್ಲಿ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ವ್ಯಕ್ತಿ ಶಕುನಿಯಾದರೆ ಸಮಾಜ ಛಿದ್ರಗೊಳ್ಳುತ್ತದೆ ವ್ಯಕ್ತಿ ವೀರಭದ್ರನಂತಾದರೆ ಸಮಾಜ ಭದ್ರಗೊಳ್ಳುತ್ತದೆ. ಸುಂದರವಾದ ದೇವಾಲಯ, ದೇವ ಮೂರ್ತಿಗಳನ್ನು ನೋಡಿದಾಗ ನಾಸ್ತಿಕನೂ ಆಸ್ತಿಕನಾಗುತ್ತಾನೆ. ಮಕ್ಕಳನ್ನು ಜ್ಞಾನವಂತರನ್ನಾಗಿಸಬೇಕು. ಸಾತ್ವಿಕವಾದ ಸಂಸ್ಕಾರ, ಸದ್ವಿಚಾರಗಳನ್ನು ಬಾಲ್ಯದಲ್ಲಿ ಮಕ್ಕಳಿಗೆ ಕಲಿಸಬೇಕು ಎಂದರು.ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪಟ್ಟಣಶೆಟ್ಟಿ ಪರಮೇಶ್ ಕುಟುಂಬವರು ಹಿಂದೆ ಮಠಕ್ಕೆ ಈ ಜಾಗವನ್ನು ದಾನ ಮಾಡಿದ್ದು, ಇದೀಗ ಇಲ್ಲಿ ನಮ್ಮ ಸಂಸ್ಥೆಯ ಶಾಲೆ, ಹಾಗೂ ವೀರಭದ್ರೇಶ್ವರ ಸ್ವಾಮಿ ದೇಗುಲವಾಗಿರುವುದು ಸಂತಸದ ಸಂಗತಿ. ದೇವಾಲಯದಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದರು.
ಎಚ್.ಆರ್. ಗಂಗಾಧರ್ ಕಾರ್ಯಕ್ರಮ ನಿರೂಪಿಸಿದರು. ದೇವಸ್ಥಾನ ಉದ್ಘಾಟನೆ ನಿಮಿತ್ತ ಶುಕ್ರವಾರ ಬೆಳಗ್ಗೆ ರಂಭಾಪುರಿ ಜಗದ್ಗುರು ಅವರನ್ನು ಅದ್ಧೂರಿಯಾಗಿ ಅಲಂಕರಿಸಿದ ಸಾರೋಟ್‌ನಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತದಿಂದ ವಿವಿಧ ಕಲಾ ಮೇಳಗೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಅನಂತರ ವೀರಭದ್ರೇಶ್ವರ ಮೂರ್ತಿಗೆ ಶ್ರೀಗಳು ಪ್ರಾಣಪ್ರತಿಷ್ಠಾಪನೆ, ಕಳಸಾರೋಹಣ ನೆರವೇರಿಸಿದರು. ಸಾಮೂಹಿಕ ಅನ್ನಸಂತರ್ಪಣೆ ನಡೆಯಿತು. ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.
- - - -31ಎಚ್.ಎಲ್.ಐ1:ಪೇಟೆ ಶ್ರೀ ವೀರಭದ್ರೇಶ್ವರ ಸ್ವಾಮಿ ನೂತನ ಶಿಲಾಮಂದಿರ ಉದ್ಘಾಟನೆ, ಮೂರ್ತಿ ಪ್ರಾಣಪ್ರತಿಷ್ಠಾಪನೆ, ಮತ್ತು ಗೋಪುರ ಕಳಸಾರೋಹಣ ಕಾರ್ಯಕ್ರಮಗಳನ್ನು ರಂಭಾಪುರಿ ಶ್ರೀ ನೆರವೇರಿಸಿದರು. ಹಿರೇಕಲ್ಮಠ ಶ್ರೀ, ಶಾಸಕರು, ಮಾಜಿ ಸಚಿವರು ಇದ್ದರು.