ಹೊಸಪೇಟೆ: ಮನುಕುಲದ ಒಳಿತಿಗಾಗಿ ಜಗದ್ಗುರು ರೇಣುಕಾಚಾರ್ಯರು ಸಾರಿದ ವಿಶ್ವಶಾಂತಿ ಸಂದೇಶವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ಸುಸ್ಥಿರ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿದರು.
ವಿಜಯನಗರ ಜಿಲ್ಲಾ ಬೇಡ ಜಂಗಮ ಸಮಾಜದ ಹಿರಿಯ ಚಿಂತಕ ರಾಜಶೇಖರ್ ಮಾತನಾಡಿ, ವಿಶ್ವದ ಶ್ರೇಷ್ಠ ತತ್ವಜ್ಞಾನಿಗಳಲ್ಲಿ ರೇಣುಕಾಚಾರ್ಯರರು ಮೊದಲಿಗರು, ನೇಪಾಳದಿಂದ ಶ್ರೀಲಂಕಾದವರೆಗೆ ಸಂಚರಿಸಿ ಧರ್ಮ ಪ್ರಚಾರ ನಡೆಸಿದರು. ಸಿದ್ಧಾಂತ ಶಿಖಾಮಣಿ ಹಾಗೂ ಇತ್ತೀಚಿನ ಹಲವು ಕಾವ್ಯಗಳಲ್ಲಿ ಅವರ ಬಗ್ಗೆ ಅಲ್ಪಸ್ವಲ್ಪ ತಿಳಿದು ಬಂದಿದೆ. ಅವರ ಬಗ್ಗೆ ಆಳವಾದ ಅಧ್ಯಯನ ನಡೆಸಿ ಜೀವನ ಚರಿತ್ರೆಯನ್ನು ರೂಪಿಸಿ ಮುಂದಿನ ಪೀಳಿಗೆಗೆ ಪಸರಿಸುವುದು ಅತಿ ಅಗತ್ಯವಿದೆ, ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು ಮುಂದಾಗಬೇಕಿದೆ ಎಂದು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಬೇಡ ಜಂಗಮ ಸಮಾಜದ ಮುಖಂಡರಾದ ಗೊಗ್ಗ ಬಸವರಾಜ್, ವಿಶ್ವನಾಥ ಕಂಬಾಳಿ ಮಠ, ಸಾಲಿಸಿದ್ದಯ್ಯ ಸ್ವಾಮಿ, ಶರಣುಸ್ವಾಮಿ, ಎ.ಎಂ. ಬಸವರಾಜ್, ಮೃತ್ಯುಂಜಯ ರುಮಾಲೆ, ಚನ್ನವೀರಯ್ಯ ಚಿಕ್ಮಠ್, ಎ.ಎಂ.ಶಿವಮೂರ್ತಿಸ್ವಾಮಿ, ಶೀಲಾ ಕುಮಾರಸ್ವಾಮಿ, ಕೀರ್ತಿ ಕಂಬಾಳಿ ಮಠ, ವೀಣಾ ಹಿರೇಮಠ್, ಪ್ರೀತಿ ಹಿರೇಮಠ್ ಇದ್ದರು.