ಮಹಾತ್ಮರ ಆದರ್ಶ ಜೀವನ ಪ್ರತಿಯೊಬ್ಬರೂ ಪಾಲಿಸಬೇಕು-ಎಸ್‌.ಆರ್‌. ಕಾರಗಿ

KannadaprabhaNewsNetwork |  
Published : Oct 04, 2026, 02:15 AM IST
ಶಿಗ್ಗಾಂವಿ ತಾಲೂಕಿನ ಬಂಕಾಪುರ ಪಟ್ಟಣದ ಕೀರ್ತಿ ಪದವಿ ಪೂರ್ವ ಕಾಲೇಜಿನಲ್ಲಿ ಮಹಾತ್ಮಾ ಗಾಂಧೀಜಿ ಜಯಂತಿ ಕಾರ್ಯಕ್ರಮವನ್ನು ಪ್ರಾಚಾರ್ಯ ಎಸ್.ಅರ್.ಕಾರಗಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಮಹಾತ್ಮಾ ಗಾಂಧೀಜಿ ಅವರು ಸತ್ಯ, ಅಹಿಂಸೆ ಮತ್ತು ತಾಳ್ಮೆಯಿಂದ ಹೋರಾಡುವ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತರುವುದರಲ್ಲಿ ಯಶಸ್ವಿಯಾದರು. ಅಂತಹ ಮಹಾತ್ಮರ ಆದರ್ಶ ಜೀವನ ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಕರ್ನಾಟಕ ಕೀರ್ತಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ಆರ್. ಕಾರಗಿ ಹೇಳಿದರು.

ಶಿಗ್ಗಾಂವಿ: ಮಹಾತ್ಮಾ ಗಾಂಧೀಜಿ ಅವರು ಸತ್ಯ, ಅಹಿಂಸೆ ಮತ್ತು ತಾಳ್ಮೆಯಿಂದ ಹೋರಾಡುವ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತರುವುದರಲ್ಲಿ ಯಶಸ್ವಿಯಾದರು. ಅಂತಹ ಮಹಾತ್ಮರ ಆದರ್ಶ ಜೀವನ ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಕರ್ನಾಟಕ ಕೀರ್ತಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ಆರ್. ಕಾರಗಿ ಹೇಳಿದರು.

ತಾಲೂಕಿನ ಬಂಕಾಪುರ ಪಟ್ಟಣದ ಕೀರ್ತಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶುಕ್ರವಾರ ಕೀರ್ತಿ ಪ್ರೌಢಶಾಲೆ, ಕೀರ್ತಿ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ನಡೆದ ಮಹಾತ್ಮಾ ಗಾಂಧೀಜಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೀರ್ತಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಎಂ.ಬಿ.ಉಂಕಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಸರ್ವಾಂಗೀಣ ಏಳ್ಗೆಗಾಗಿ ಮಹಾತ್ಮರ, ಶರಣರ ತ್ಯಾಗ ಬಲಿದಾನವಿದೆ. ಅಂತಹವರ ಬದುಕಿನ ಚರಿತ್ರೆ ಇತಿಹಾಸದ ಪುಟದಲ್ಲಿ ಶಾಶ್ವತವಾಗಿದೆ. ಮಕ್ಕಳಿಗೆ ಅವರ ಆದರ್ಶಗಳನ್ನು ತುಂಬುವ ಜತೆಗೆ ದೇಶದ ಉತ್ತಮ ಪ್ರಜೆಗಳಾಗಿ ಬೆಳೆಯಬೇಕು. ಮಹಾತ್ಮರ ಸ್ಮರಣೆ ಅರ್ಥಪೂರ್ಣವಾಗಿದೆ ಎಂದರು.

ಉಪನ್ಯಾಸಕರಾದ ಜಗದೀಶ ಪುರದ, ಗಿರೀಶ ಕುರಂದವಾಡ, ಎಂ.ಎಸ್. ಕನ್ನಕನವರ, ಎಸ್.ಬಿ. ಗೌಡರ, ಪ್ರೌಢಶಾಲೆ ಶಿಕ್ಷಕ ಎಂ.ಎನ್. ಚಿನಿವಾರ, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಈರಣ್ಣ ಕುಲಕರ್ಣಿ, ಅನ್ನಪ್ಪ ಮಾಳಗಿ ಸೇರಿದಂತೆ ಕಾಲೇಜಿನ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಇರಲಿ: ಡಿಸಿ ಶ್ರೀಧರ್
ಪಂಚಪೀಠಗಳು ಜ್ಞಾನ, ಸಂಸ್ಕಾರ ನೀಡುವ ಕೇಂದ್ರ; ರಂಭಾಪುರಿ ಶ್ರೀ