ಬೌದ್ಧ ಸಮ್ಮೇಳನಕ್ಕೆ ಎಲ್ಲರೂ ಭಾಗವಹಿಸಿ: ಜೆ. ಯೋಗೇಶ್

KannadaprabhaNewsNetwork |  
Published : Oct 23, 2026, 01:30 AM IST
22ಸಿಎಚ್‌ಎನ್‌52ಯಳಂದೂರು ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದ ಮುಂಭಾಗ ಗುರುವಾರ ಬೌದ್ಧ ಧಮ್ಮ ಪ್ರಚಾರ ರಥಯಾತ್ರೆಗೆ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಜೆ. ಯೋಗೇಶ್ ಶುಭ ಕೋರಿ ಮಾತನಾಡಿದರು. | Kannada Prabha

ಸಾರಾಂಶ

ಇದೊಂದು ಜಿಲ್ಲೆಯ ಐತಿಹಾಸಿಕ ಕಾರ್ಯಕ್ರಮವಾಗಲಿದೆ. ದೇಶ ವಿದೇಶಗಳಿಂದ ಲಕ್ಷಾಂತರ ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಯಳಂದೂರು: ಚಾಮರಾಜನಗರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅ.24 ಮತ್ತು 25ರಂದು ನಡೆಯಲಿರುವ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನಕ್ಕೆ ತಾಲೂಕಿನ ಎಲ್ಲರೂ ಭಾಗವಹಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಜೆ. ಯೋಗೇಶ್ ಕರೆ ನೀಡಿದರು.

ಅವರು ಗುರುವಾರ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನಕ್ಕೆ ಬಂದ ಬೌದ್ಧ ಧಮ್ಮ ಪ್ರಚಾರ ರಥಕ್ಕೆ ಶುಭಕೋರಿ ಮಾತನಾಡಿದರು. ಇದೊಂದು ಜಿಲ್ಲೆಯ ಐತಿಹಾಸಿಕ ಕಾರ್ಯಕ್ರಮವಾಗಲಿದೆ. ದೇಶ ವಿದೇಶಗಳಿಂದ ಲಕ್ಷಾಂತರ ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಇದಕ್ಕಾಗಿ ಈಗಾಗಲೇ ಶಾಸಕ ಎ.ಆರ್.ಕೃಷ್ಣಮೂರ್ತಿ ನೇತೃತ್ವದಲ್ಲಿ ಭರದಿಂದ ಸಿದ್ಧತೆಗಳು ನಡೆಯುತ್ತಿದೆ. ಇದಕ್ಕಾಗಿ ಬೃಹತ್ ಜರ್ಮನ್ ಟೆಂಟ್‌ಗಳನ್ನು ಹಾಕಲಾಗುತ್ತಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಿದ್ಧರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ವಿವಿಧ ದೇಶ ವಿದೇಶಗಳ ಬೌದ್ಧ ಭಿಕ್ಕುಗಳು, ಅನೇಕ ವಿಚಾರ ಗೋಷ್ಠಿಗಳು, ಸಂವಾದ, ಕವಿಗೋಷ್ಠಿಗಳು, ಸರ್ವಧರ್ಮ ವಿಚಾರ ಗೋಷ್ಠಿಗಳು ಸೇರಿ ವಿಭಿನ್ನ ಕಾರ್ಯಕ್ರಮಗಳು ನಡೆಯಲಿವೆ. ಇಷ್ಟೊಂದು ಬೃಹತ್ ಕಾರ್ಯಕ್ರಮ ನಮ್ಮ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿದೆ. ಇದು ಎಲ್ಲಾ ಜಾತಿ, ಧರ್ಮದ ವ್ಯಕ್ತಿಗಳಿಗೂ ಸೇರಿರುವ ಕಾರ್ಯಕ್ರಮವಾಗಿದೆ. ಹಾಗಾಗಿ ಪ್ರತಿಯೊಬ್ಬರೂ ತಪ್ಪದೆ ಇವೆರಡು ದಿನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದನ್ನು ಯಶಸ್ವಿಗೊಳಿಸಿಕೊಡಬೇಕೆಂದು ಮನವಿ ಮಾಡಿದರು.

ಚೇತವನದ ಮನೋರಖ್ಖಿತ ಬಂತೇಜಿ, ಮಹಾವನ ಬುದ್ಧ ವಿಹಾರದ ಪೂಜ್ಯ ಬುದ್ಧರತ್ನ ಬಂತೇಜಿ, ಸದಸ್ಯ ಬಾಲರಾಜು, ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಸಿದ್ಧರಾಜು, ಪಪಂ ಮಾಜಿ ನಾಮ ನಿರ್ದೇಶಿತ ಸದಸ್ಯ ಲಿಂಗರಾಜಮೂರ್ತಿ, ಜೆ. ಶ್ರೀನಿವಾಸ್, ವೆಂಕಟೇಶ್, ವೈ.ಕೆ.ಮೋಳೆ ನಾಗರಾಜು, ಗುರುಲಿಂಗಯ್ಯ, ನಂಜುಂಡಸ್ವಾಮಿ, ಯರಿಯೂರು ಜಯಣ್ಣ ಸೇರಿ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯರು ದೃಢ ಮನಸ್ಸಿನಿಂದ ಹೆಜ್ಜೆ ಇಟ್ಟರೆ ಅಸಾಧ್ಯವಾದದ್ದು ಯಾವುದೂ ಇಲ್ಲ
ಗಣ್ಯರ ಅನುಕೂಲಕ್ಕಾಗಿ ನೂತನ ಪ್ರವಾಸಿ ಮಂದಿರ ನಿರ್ಮಾಣ: ಕೆ.ಎಂ.ಉದಯ್