ಬುಡಕಟ್ಟು ಸಂಸ್ಕೃತಿಗೆ ಎಲ್ಲರೂ ಮರಳಬೇಕು

KannadaprabhaNewsNetwork |  
Published : Dec 06, 2025, 01:30 AM IST
99999 | Kannada Prabha

ಸಾರಾಂಶ

ಬುಡಕಟ್ಟು ಸಂಪ್ರದಾಯ ಈ ನೆಲದ ಮೂಲ. ನಮ್ಮ ಮೂಲ ಆಚರಣೆಗಳಿಗೆ ನಾವು ಮರಳಬೇಕು. ಬುಡಕಟ್ಟು ಜನಾಂಗದವರು ಕೀಳರಿಮೆ ಬಿಟ್ಟು ಬದುಕನ್ನು ಕಟ್ಟಿಕೊಳ್ಳುವುದರ ಜೊತೆಗೆ ತಮ್ಮ ವೈಶಿಷ್ಟ್ಯ್ಯಗಳನ್ನು ಉಳಿಸಿಕೊಳ್ಳಬೇಕು ಎಂದು ಬೆಂಗಳೂರು ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ಪ್ರಾಧ್ಯಾಪಕಡಾ. ಸಿ.ಜಿ ಲಕ್ಷ್ಮೀಪತಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರುಬುಡಕಟ್ಟು ಸಂಪ್ರದಾಯ ಈ ನೆಲದ ಮೂಲ. ನಮ್ಮ ಮೂಲ ಆಚರಣೆಗಳಿಗೆ ನಾವು ಮರಳಬೇಕು. ಬುಡಕಟ್ಟು ಜನಾಂಗದವರು ಕೀಳರಿಮೆ ಬಿಟ್ಟು ಬದುಕನ್ನು ಕಟ್ಟಿಕೊಳ್ಳುವುದರ ಜೊತೆಗೆ ತಮ್ಮ ವೈಶಿಷ್ಟ್ಯ್ಯಗಳನ್ನು ಉಳಿಸಿಕೊಳ್ಳಬೇಕು ಎಂದು ಬೆಂಗಳೂರು ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ಪ್ರಾಧ್ಯಾಪಕಡಾ. ಸಿ.ಜಿ ಲಕ್ಷ್ಮೀಪತಿ ತಿಳಿಸಿದರು. ತುಮಕೂರು ವಿಶ್ವವಿದ್ಯಾನಿಲಯದ ಜುಂಜಪ್ಪ ಅಧ್ಯಯನ ಪೀಠ ಹಾಗೂ ಕಲಾ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಮಧ್ಯಕರ್ನಾಟಕದ ಬುಡಕಟ್ಟುಗಳ ಸಂಸ್ಕೃತಿಕ ಅನನ್ಯತೆ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಭಾವಿ ಧರ್ಮಗಳು ಬುಡಕಟ್ಟು ಜನಾಂಗಗಳ ಮೇಲೆ ಪ್ರಭಾವ ಬೀರಿ ಸಾಂಪ್ರದಾಯಿಕ ಆಚರಣೆಗಳು ಕ್ಷೀಣಿಸುತ್ತಿವೆ. ನಮ್ಮಆಹಾರ ಪದ್ಧತಿಯನ್ನು, ನಮ್ಮ ದೈವಾರಾಧನೆಯನ್ನು ನಮಗೆ ಗೊತ್ತಿಲ್ಲದ ಸಾಂಸ್ಕೃತಿಕ, ಧಾರ್ಮಿಕ ಪ್ರಭಾವದಿಂದ ನಮ್ಮಜನಾಂಗ ನಶಿಸುವಂತೆ ಮಾಡುತ್ತಿದ್ದಾರೆ ಎಂದರು. ಕರ್ನಾಟಕದಲ್ಲಿ 45 ಬುಡಕಟ್ಟುಗಳಿವೆ. ಸಂವಿಧಾನವು ಯಾವುದೇ ಒಂದು ಧಾರ್ಮಿಕ, ಶೈಕ್ಷಣಿಕ ಆರ್ಥಿಕವಾಗಿ ಕುಗ್ಗಿದ ಜನಾಂಗವನ್ನು ಮಾತ್ರ ಬುಡಕಟ್ಟು ಎಂದು ಪಟ್ಟಿಗೆ ಸೇರಿಸಿದೆ.ಯಾವುದೇ ಸರ್ಕಾರಿ ಉನ್ನತ ಹುದ್ದೆಯಲ್ಲಿ ಬುಡಕಟ್ಟು ಜನಾಂಗದವರು ಇಲ್ಲ ಎಂದರು.ದಶಕಗಳಿಂದ ಬುಡಕಟ್ಟು ಜನಾಂಗದವರು ತಮ್ಮದೇ ಪೂಜಾರಿಯನ್ನು ಹೊಂದಿದ್ದರು. ಆಧ್ಯಾತ್ಮಿಕತೆಯನ್ನು ಒಪ್ಪುತ್ತಿರಲಿಲ್ಲ. ಭಾರತದಲ್ಲಿ ಬುಡಕಟ್ಟುಗಳಿಗೆ ಯಾವುದೇ ಒಂದು ಧರ್ಮವನ್ನು ಪಾಲಿಸುವುದು ವಿರುದ್ಧವಾಗಿದೆ. ಬುಡಕಟ್ಟು ವರ್ಗದ ಜಾನಪದ ಕಲೆ ಆಚರಣೆಗಳು ಭಾರತೀಯ ಕಲೆ ಸಂಸ್ಕೃತಿಯ ಮೇಲೆ ಹೆಚ್ಚಿನ ಪ್ರಭಾವವನ್ನ ಬೀರುತ್ತವೆ. ಹಾಗಾಗಿ ನಾವು ನಮ್ಮಸಂಸ್ಕೃತಿಗೆ ಮರಳಬೇಕು ಎಂದರು. ಕನ್ನಡ ಪ್ರಾಧ್ಯಾಪಕ ಪ್ರೊ. ಬಿ. ಕರಿಯಣ್ಣ ಮಾತನಾಡಿ, ಸುಧಾರಣೆಯ ಹೆಸರಲ್ಲಿನಮ್ಮ ಸಂಸ್ಕೃತಿಯನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ ಎಂದರು. ಜಾತಿಗಣತಿಯಲ್ಲಿ ಬುಡಕಟ್ಟು ಜನಾಂಗವನ್ನು ಬೇರೊಂದು ಜಾತಿಗೆ ಸೇರಿಸಿ ತಮ್ಮ ಮೂಲವನ್ನು ಹುಡುಕಿಕೊಂಡು ಹೋಗುವ ವಾತಾವರಣವನ್ನು ಸೃಷ್ಟಿ ಮಾಡಿದ್ದಾರೆ. ತಾಯಿನಾಡು ಸಂಸ್ಕೃತಿ ಉಳಿದಿದೆ ಎಂದರೆ ಅದು ಬುಡಕಟ್ಟು ಸಮುದಾಯದಿಂದ ಮಾತ್ರ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ. ದಾಕ್ಷಾಯಣಿ ಮಾತನಾಡಿ ಆಧುನಿಕ ಯುಗದಲ್ಲಿ ಕನ್ನಡ ಅಳಿಸಿ ಹೋಗುತ್ತಿದೆ. ಆದರೆ ಕನ್ನಡ ಉಳಿಸಿ ಬೆಳೆಸುತ್ತಿರುವುದರಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವವರು ಬುಡಕಟ್ಟು ಜನಾಂಗದವರಾಗಿದ್ದಾರೆ ಎಂದರು. ಜುಂಜಪ್ಪ ಅಧ್ಯಯನ ಪೀಠದ ಸಂಯೋಜಕ ಡಾ.ಎಸ್. ಶಿವಣ್ಣ ಬೆಳವಾಡಿ, ಕನ್ನಡ ವಿಭಾಗದ ಮುಖ್ಯಸ್ಥರಾದಡಾ.ರೇಣುಕಾ ಹೆಚ್.ಆರ್. ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮಗಳ ಪ್ರಗತಿಯಿಂದ ದೇಶದ ಅಭಿವೃದ್ಧಿ ಸಾಧ್ಯ
ಅಯೋಧ್ಯೆಂತೆ ದತ್ತಪೀಠದಲ್ಲೂ ಧರ್ಮಧ್ವಜ ಹಾರಾಡಲಿ