ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪಟ್ಟಣದ ಪುರಸಭೆ ಸಭಾಭವನದಲ್ಲಿ ಜಿಲ್ಲಾಡಳಿತ, ನಗರಾಭಿವೃದ್ಧಿ ಕೋಶ ಹಾಗೂ ಪುರಸಭೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎಷ್ಟೇ ದುಡ್ಡು ಕೊಟ್ಟರೂ ಮಾಡದೆ ಇರುವ ಕನಿಷ್ಠ ಕೆಲಸವನ್ನು ಪೌರಕಾರ್ಮಿಕರು ಮಾಡುತ್ತಾರೆ. ಈ ಮೂಲಕ ಪಟ್ಟಣವನ್ನು ಸ್ವಚ್ಛವಾಗಿಡುತ್ತಾರೆ. ಇವರ ಪಾತ್ರವನ್ನು ಯಾರೂ ಮರೆಯುವಂತಿಲ್ಲ ಎಂದರು.ಭೀಕರ ಕೋವಿಡ್-19 ಸಂದಿಗ್ಧ ಸಮಯದಲ್ಲಿ ನಮ್ಮ ಬಂಧುಗಳ ಮೃತ ದೇಹಗಳನ್ನು ನಾವು ಸಾಗಿಸಲು ಸಾಧ್ಯವಾಗದಂತಹ ಸಂದರ್ಭದಲ್ಲಿ ಪೌರ ಕಾರ್ಮಿಕರು ಯಾವುದನ್ನು ಲೆಕ್ಕಿಸದೆ ಸಾಗಿಸಿದ್ದಾರೆ. ಅಂತಹ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸದೇ ಇರುವುದು ವಿಷಾದಕರ ಸಂಗತಿ ಎಂದರು.
ಭಾರತೀಯ ಸ್ಟೇಟ್ ಬ್ಯಾಂಕ್‌ನ ಅಧಿಕಾರಿ ಈರಣ್ಣ ಚಿಮ್ಮಲಗಿ ಮಾತನಾಡಿ, ಪೌರಕಾರ್ಮಿಕರು ಆರ್ಥಿಕ ಸಂಪತ್ತು ಹೊಂದಲು ಭಾರತ ಸರ್ಕಾರದ ಸಾಮಾಜಿಕ ಸುರಕ್ಷಾ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.ನ್ಯಾಯವಾದಿ ಪ್ರತಾಪಸಿಂಗ್ ರಾಠೋಡ, ಆರೋಗ್ಯ ಶಿಕ್ಷಣಾಧಿಕಾರಿ ಶಶಿಕಾಂತ ಮೇಟಿ, ಡಾ.ಅಮರೇಶ ಮಿಣಜಗಿ, ಸದಸ್ಯ ನೀಲಪ್ಪ ನಾಯಕ ಮಾತನಾಡಿದರು. ಪುರಸಭೆ ವ್ಯವಸ್ಥಾಪಕ ಸುರೇಶ ಬಾಗೇವಾಡಿ ಅಧಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ರವಿ ಪಟ್ಟಣಶೆಟ್ಟಿ, ಪ್ರವೀಣ ಪೂಜಾರಿ, ಅಶೋಕ ಸಂಪನ್ನವರ, ದೇವೇಂದ್ರ ಚವ್ಹಾಣ, ಪ್ರವೀಣ ಪವಾರ, ಪುರಸಭೆ ಮಾಜಿ ಅಧ್ಯಕ್ಷ ಸಂಜೀವ ಕಲ್ಯಾಣಿ, ಮುಖಂಡರಾದ ಶರಣಪ್ಪ ಬೆಲ್ಲದ, ಎಸ್‌ಬಿಐ ವ್ಯವಸ್ಥಾಪಕ ರಾಘವೇಂದ್ರ ಕಟ್ಟಿ ಇತರರು ಇದ್ದರು.
ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ವಿಜಯಕುಮಾರ ವಂದಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿರಿಯ ನಿರೀಕ್ಷರ ಮಹೇಶ ಹಿರೇಮಠ ನಿರೂಪಿಸಿದರು. ಪೌರ ಕಾರ್ಮಿಕರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾಗಿ ಸೇವೆ ದೊರುಕುತ್ತಿಲ್ಲ. ಪೌರ ಕಾರ್ಮಿಕರು ಸರ್ಕಾರಿ ಆಸ್ಪತ್ರೆಗೆ ಹೋದರೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ ಎಂದು ಪೌರ ಕಾರ್ಮಿಕರು ಕಾರ್ಯಕ್ರಮದಲ್ಲಿ ಆಕ್ರೋಶ ಹೊರ ಹಾಕಿದರು.ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಆರೋಗ್ಯ ತಪಾಸಣೆ, ಸಮವಸ್ತ್ರ ,ಸುರಕ್ಷಾ ಉಡುಪು ವಿತರಣೆ, ಕಾಯಂ 37 ಪೌರಕಾರ್ಮಿಕರಿಗೆ ತಲಾ ₹ 7 ಸಾವಿರದಂತೆ ವಿಶೇಷ ಭತ್ಯೆ, ಸಹಾಯಧನ ವಿತರಿಸಲಾಯಿತು.