ಕಾನೂನು ತಿಳಿದುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ

KannadaprabhaNewsNetwork |  
Published : Jan 18, 2024, 02:00 AM IST
ಗದಗ ತಾಲೂಕಿನ ಅಂತೂರು-ಬೆಂತೂರ ಗ್ರಾಮದಲ್ಲಿ ನಡೆದ ಜನಸಾಮಾನ್ಯರಿಗಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಹಿರಿಯ ವಕೀಲ ವೈ.ಡಿ. ತಳವಾರ ಮಾತನಾಡಿದರು. | Kannada Prabha

ಸಾರಾಂಶ

ಗದಗ ತಾಲೂಕಿನ ಅಂತೂರು-ಬೆಂತೂರ ಗ್ರಾಮದಲ್ಲಿ ಗದುಗಿನ ವಿ.ಆರ್. ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್‌ ಕಾಲೇಜಿನಿಂದ ಆಯೋಜಿಸಿದ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದಲ್ಲಿ ಜನಸಾಮಾನ್ಯರಿಗೆ ಕಾನೂನು ಅರಿವು ನೆರವು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಗದಗ: ಮಾತು ಬಲ್ಲವನಿಗೆ ಜಗಳವಿಲ್ಲ, ಕಾನೂನು ಬಲ್ಲವನಿಗೆ ವ್ಯಾಜ್ಯವಿಲ್ಲ ಎಂಬ ಮಾತಿದೆ. ದೇಶದ ಕಾನೂನು ತಿಳಿದುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಹಿರಿಯ ವಕೀಲ ವೈ.ಡಿ. ತಳವಾರ ಹೇಳಿದರು.

ತಾಲೂಕಿನ ಅಂತೂರು-ಬೆಂತೂರ ಗ್ರಾಮದಲ್ಲಿ ಗದುಗಿನ ವಿ.ಆರ್. ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್‌ ಕಾಲೇಜಿನಿಂದ ಆಯೋಜಿಸಿದ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದಲ್ಲಿ ನಡೆದ ಜನಸಾಮಾನ್ಯರಿಗೆ ಕಾನೂನು ಅರಿವು ನೆರವು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾನೂನಿನ ವಿಷಯವೆಂದರೆ ಸಮುದ್ರವಿದ್ದ ಹಾಗೆ. ಆದರೂ ನಿತ್ಯದ ಜೀವನ ಸರಳವಾಗಿ ನಡೆಯಲು ಅಗತ್ಯವಾಗಿರುವ ಕಾನೂನಿನ ಅರಿಯಬೇಕು ಎಂದು ಹೇಳಿದರು.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಜನಸಾಮಾನ್ಯರಿಗಾಗಿ ಕಾನೂನು ಮಾಹಿತಿ ಪುಸ್ತಕ ಪ್ರಕಟಿಸಿದೆ. ಅತ್ಯಂತ ಕಡಿಮೆ ಬೆಲೆಗೆ ಮಾರಾಟಕ್ಕೆ ಇದು ಲಭ್ಯವಿದೆ. ಪ್ರತಿಯೊಬ್ಬರೂ ಇದನ್ನು ಖರೀದಿಸಿ ಕಾನೂನಿನ ಸಂಕ್ಷಿಪ್ತ ಜ್ಞಾನ ಪಡೆದುಕೊಂಡು, ಇತರರಿಗೂ ತಿಳಿಸಬೇಕು. ಕಾನೂನು ತಿಳಿವಳಿಕೆ ಪ್ರತಿಯೊಬ್ಬರಿಗೂ ಇರಬೇಕಾದದು ಆವಶ್ಯಕ. ಅದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ ಲಭಿಸುತ್ತದೆ. ಕಾನೂನು ಅರಿವಿಲ್ಲದಿದ್ದರೆ ಜನಸಾಮಾನ್ಯರು ತೊಂದರೆ ಸಿಲುಕಬೇಕಾಗುತ್ತದೆ ಎಂದು ಹೇಳಿದರು. ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ರಾಜಿ ಸಂಧಾನ ಹಾಗೂ ಮಧ್ಯಸ್ಥಿಕೆ ಮೂಲಕ ಪರಿಹರಿಸಿಕೊಂಡರೆ ಕಕ್ಷಿದಾರರರಿಗೆ ಹಣ, ಸಮಯ ಉಳಿಯುತ್ತದೆ ಎಂದರು.

ಈ ವೇಳೆ ವಕೀಲ ಯಲ್ಲಪ್ಪ ಕುರಹಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಶಾಲಾಭಿವೃದ್ಧಿ ಹಾಗೂ ವ್ಯವಸ್ಥಾಪನೆ ಸಮಿತಿ ಸದಸ್ಯರು, ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾರ್ಯಕ್ರಮ ಅಧಿಕಾರಿ ಪ್ರೊ. ಬಾಹುಬಲಿ ಪಿ. ಜೈನರ, ದೈಹಿಕ ಶಿಕ್ಷಣ ಶಿಕ್ಷಕ ಅಂಗಡಿ, ವಿದ್ಯಾರ್ಥಿ ಮುಖಂಡ ಮನೋಜ್ ದಲಬಂಜನ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸ್ವಯಂಸೇವಕ ಸೇವಕರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ