ಫರ್ನಿಚರ್ ಸೇರಿ ಎಲ್ಲ ವಸ್ತುಗಳು ಒಂದೇ ಕಡೆ ಲಭ್ಯ: ಲೈಫ್ ಸ್ಟೈಲ್ ಎಕ್ಸ್ ಪೋ

KannadaprabhaNewsNetwork | Published : Jun 16, 2024 1:48 AM

ಸಾರಾಂಶ

ನಗರದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭ ದಿನಪತ್ರಿಕೆಯ ಸಹಯೋಗದಲ್ಲಿ ನಡೆಯುತ್ತಿರುವ ಫರ್ನೀಚರ್ -ಲೈಫ್ ಸ್ಟೈಲ್ ಎಕ್ಸ್ ಪೋ ಗೆ ಜನಸಾಗರವೇ ಹರಿದು ಬರುತ್ತಿದೆ.

ಕನ್ನಡಪ್ರಭ ವಾರ್ತೆ ತುಮಕೂರು

ನಗರದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭ ದಿನಪತ್ರಿಕೆಯ ಸಹಯೋಗದಲ್ಲಿ ನಡೆಯುತ್ತಿರುವ ಫರ್ನೀಚರ್ -ಲೈಫ್ ಸ್ಟೈಲ್ ಎಕ್ಸ್ ಪೋ ಗೆ ಜನಸಾಗರವೇ ಹರಿದು ಬರುತ್ತಿದೆ.

ನಗರದ ಗಾಜಿನ ಮನೆ ಆವರಣದಲ್ಲಿ ನಡೆಯುತ್ತಿರುವ ಎಕ್ಸ್ ಪೋದಲ್ಲಿ ಸುಮಾರು 70 ಕ್ಕೂ ಹೆಚ್ಚು ಸ್ಟಾಲ್‌ಗಳು ಇವೆ. ಪ್ರತಿ ದಿನ ಸಹಸ್ರಾರು ಮಂದಿ ಎಕ್ಸ್ ಪೋಕ್ಕೆ ಆಗಮಿಸಿ‌ ತಮಗೆ ಬೇಕಾದ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುತ್ತಿದ್ದಾರೆ.

ಬೆಳಿಗ್ಗೆ 11 ರಿಂದ ರಾತ್ರಿಯವರೆಗೆ ಈ ಎಕ್ಸ್ ಪೋ ದತ್ತ ತುಮಕೂರಿನ ಜನ ಎಡತಾಕುತ್ತಿದ್ದಾರೆ‌. ಇನ್ನು ಎರಡು ದಿವಸ ಮಾತ್ರ ಈ ಎಕ್ಸ್ ಪೋ ಮೇಳ ನಡೆಯಲಿದೆ. ಸೋಮವಾರ ರಾತ್ರಿ ಎಕ್ಸ್ ಪೋಗೆ ತೆರೆ ಬೀಳಲಿದೆ.

ಏಷ್ಯಾನೆಟ್ ಸುವರ್ಣ ನ್ಯೂಸ್, ಕನ್ನಡಪ್ರಭ ಸಹಯೋಗ: ಎಕ್ಸ್ ಪೋದಲ್ಲಿ ಆಂಟಿಕ್ ಫರ್ನಿಚರ್, ರಾಯಲ್ ಸೋಫಾ, ಹೋಮ್ ಇಂಟಿರಿಯರ್, ಡ್ರೆಸ್ ಮೆರಿಯಲ್ ಹಾಗೂ ಫ್ಯಾಷನ್ ಪ್ರಾಡೆಕ್ಟಸ್ ಸೇರಿದಂತೆ ಎಲ್ಲಾ ವಸ್ತುಗಳು ಒಂದೇ ಸೂರಿನಡಿಯಲ್ಲಿ ಸಿಗಲಿವೆ. ಜೊತೆಗೆ ಶೇ.70 ರಿಯಾಯಿತಿಯಲ್ಲಿ ಎಲ್ಲಾ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ.‌ ಟೀಕ್, ರೋಜ್ ವುಡ್, ಸೋಫಾ, ಲೇದರ್ ಸೋಫಾಗಳು ಸಿಗಲಿದ್ದು, ಕೇರಳ ತಮಿಳುನಾಡು, ರಾಜಸ್ತಾನ್, ಪಶ್ಚಿಮ ಬಂಗಾಳ,ಉತ್ತರ ಪ್ರದೇಶ ಬೆಂಗಳೂರು ಸೇರಿದಂತೆ ದೇಶದ ಮೂಲೆ ಮೂಲೆಯಿಂದ ಮಳಿಗೆಗಳು ಬಂದಿವೆ.

ಎಕ್ಸ್ ಪೋದಲ್ಲಿ ಉಚಿತ ಪ್ರವೇಶ ಹಾಗೂ ಉಚಿತ ಪಾರ್ಕಿಂಗ್ ವ್ಯವಸ್ಥೆಯಿದ್ದು, ತುಮಕೂರಿನ‌ ಗ್ರಾಹಕರಿಗೆ ಆಕರ್ಷಕ ದರದಲ್ಲಿ ವಸ್ತುಗಳನ್ನ ಮಾರಾಟ ಮಾಡಲಾಗುತ್ತಿದೆ. ಟೀ ಕುಡ್, ರಬ್ಬರ್ ಹುಡ್, ರೋಸ್ ಹುಡ್ಡ, ಕಾರ್ವಿಂಗ್ ಸೋಫಾ, ಲೆದರ್ ಸೋಫ್, ರಿಯಾಯಿತಿ ದರದಲ್ಲಿ. ಮನೆಗೆ ಬೇಕಾಗಿರುವ ಎಲ್ಲಾ ಗೃಹೋಪಯೋಗಿ ವಸ್ತುಗಳು ಸಿಗಲಿವೆ.ಮನೆಯ ಒಳಾಂಗಣ ಹಾಗೂ ಗಾರ್ಡನ್ ಗಳಲ್ಲಿ ಬಳಸುವ ಜೂಲಾ ಮಾದರಿಯ ತೂಗುಯ್ಯಾಲೆಗಳು ಕೂಡ ನಿಮ್ಮ ಕೈಗೆಟಕುವ ದರದಲ್ಲಿ ಸಿಗಲಿದೆ. 4 ಜನ, 6 ಹಾಗೂ 8 ಮಂದಿ ಕುಳಿತು ಒಟ್ಟಿಗೆ ಆಹಾರ ಸೇವಿಸುವಂತಹ ಡೈನಿಂಗ್ ಟೇಬಲ್ ಗಳು ಸಹ ಇಲ್ಲಿ ಸಿಗಲಿದೆ. ಇದರ ಜೊತೆಗೆ ಪಿಂಗಾಣಿ ಸಾಮಗ್ರಿ, ಕರ್ಟಿನ್ಸ್, ಬೆಡ್ ಶೀಟ್ಸ್, ಅಂಟಿಕ್ ಆಭರಣಗಳು, ಖಾದಿ ಉಡುಪುಗಳು, ಉತ್ತರ ಭಾರತ ಶೈಲಿ ಡ್ರೆಸ್ ಗಳು ಕೂಡ ಅಮಾನಿಕೆರೆಯಲ್ಲಿ ನಡೆಯುತ್ತಿರುವ ಈ ಲೈಫ್ ಸ್ಟೈಲ್ ಎಕ್ಸ್ ಫೋದಲ್ಲಿ ಲಭ್ಯವಾಗಲಿದೆ.

ಸೋಫಾ ಸೆಟ್, ಕುಷನ್, ಟೀಪಾಯಿ, ಕುರ್ಚಿ, ಗೋಡೆ ಗಡಿಯಾರ, ನೈಟ್ ಸೆಟ್ಸ್, ಬಾಗಿಲು, ಕಿಟಕಿಗಳಿಗೆ ಬಳಸಬಹುದಾದ ಅಲಂಕಾರಿಕ ಹ್ಯಾಂಗಿಂಗ್ಸ್, ದೀಪದ ಗುಚ್ಛಗಳು, ಪಿಂಗಾಣಿ ಸಾಮಗ್ರಿಗಳು, ಕೈ ಮಗ್ಗದ ಬಟ್ಟೆಗಳು, ಕರಕುಶಲ ವಸ್ತುಗಳು, ಮಡಿಕೆಯಿಂದ ತಯಾರಿಸಿರುವ ಕಲಾಕೃತಿಗಳು, ಸಿರಾಮಿಕ್ ವಸ್ತುಗಳು, ಕಾಶ್ಮೀರಿ ಶಾಲುಗಳು, ನೆಲಹಾಸು, ಬಣ್ಣದ ಚಿತ್ರಪಟಗಳು, ಆಟಿಕೆಗಳು ಕೂಡ ಇಲ್ಲಿ ಲಭ್ಯವಿದೆ. ಈಗಾಗಲೇ ತುಮಕೂರಿನ ಜನತೆ ಉತ್ಸುಕತೆಯಿಂದ ಲೈಫ್ ಸ್ಟೈಲ್ ಎಕ್ಸ್ ಫೋ ದಲ್ಲಿ ಪಾಲ್ಗೊಳ್ಳುತ್ತಿದ್ದು ಎಲ್ಲಾ ವರ್ಗದವರಿಗೂ ಇಷ್ಟವಾಗುವ ಉತ್ಪನ್ನಗಳು ಸಿಗಲಿದೆ. ಈ ಕೂಡಲೇ ತುಮಕೂರಿನ ಜನರು ಎಕ್ಸ್ ಫೋ ಗೆ ಆಗಮಿಸಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿ ತಮ್ಮ ಮನೆಗಳನ್ನು ಮತ್ತಷ್ಟು ಸೌಂದರ್ಯಗೊಳಿಸಿಕೊಳ್ಳಬಹುದು. ಕಣ್ಮನ ಸೆಳೆಯುವ ಈ ಗೃಹೋಪಯೋಗಿ ವಸ್ತುಗಳನ್ನು ಕೈಗೆಟಕುವ ದರದಲ್ಲಿ ಸಿಗುತ್ತಿದ್ದು ತುಮಕೂರಿನ‌ ಜನತೆ ಇದರ ಉಪಯೋಗ ಪಡೆಯಬಹುದು. ಎಕ್ಸ್ ಫೋ ಇಂಡಿಯಾ ನಿರ್ದೇಶಕ ಶೇಕ್ ಜಾಕೀರ್ ತಿಳಿಸಿದ್ದಾರೆ.

Share this article