ಜೀವನದಲ್ಲಿ ಗುರಿ ಇಟ್ಟು ಮುಂದೆ ಸಾಗಿದರೆ ಎಲ್ಲವೂ ಸಾಧ್ಯ: ಡಾ.ಇಂದ್ರೇಶ್

KannadaprabhaNewsNetwork |  
Published : Jan 27, 2026, 03:15 AM IST
25ಕೆಕೆಡಿಯು1. | Kannada Prabha

ಸಾರಾಂಶ

ಕಡೂರುಹಿಂದೆ ಗುರು ಮುಂದೆ ಗುರಿ ಇಟ್ಟುಕೊಂಡು ಪ್ರಯತ್ನಿಸಿದರೆ ಜೀವನದಲ್ಲಿ ಮುಂದೆ ಬರಲು ಸಾಧ್ಯ ಎಂದು ವಿಶ್ರಾಂತ ಕುಲಪತಿ ಡಾ.ಇಂದ್ರೇಶ್ ಹೇಳಿದರು.

- ದೇವನೂರಿನ ಶ್ರೀ ಲಕ್ಷೀಶ ವಿದ್ಯಾ ಸಂಸ್ಥೆ ಸುವರ್ಣ ಸಂಭ್ರಮ, ಸ್ನೇಹ ಸಮ್ಮಿಲನ ಕಾರ್ಯಕ್ರಮಕನ್ನಡಪ್ರಭ ವಾರ್ತೆ, ಕಡೂರು

ಹಿಂದೆ ಗುರು ಮುಂದೆ ಗುರಿ ಇಟ್ಟುಕೊಂಡು ಪ್ರಯತ್ನಿಸಿದರೆ ಜೀವನದಲ್ಲಿ ಮುಂದೆ ಬರಲು ಸಾಧ್ಯ ಎಂದು ವಿಶ್ರಾಂತ ಕುಲಪತಿ ಡಾ.ಇಂದ್ರೇಶ್ ಹೇಳಿದರು.ತಾಲೂಕಿನ ಸಖರಾಯಪಟ್ಟಣ ಸಮೀಪದ ದೇವನೂರಿನ ಶ್ರೀ ಲಕ್ಷೀಶ ವಿದ್ಯಾ ಸಂಸ್ಥೆ ಹಮ್ಮಿಕೊಂಡಿದ್ದ ಸುವರ್ಣ ಸಂಭ್ರಮ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾವು ಹುಟ್ಟಿದ ಊರು ಓದಿದ ಶಾಲೆ ಸ್ವರ್ಗಕ್ಕೆ ಸಮಾನ. ಅವುಗಳನ್ನು ಎಂದಿಗೂ ಮರೆಯಬಾರದು. ನಾನು ಈ ಶಾಲೆಯಲ್ಲಿ 1973-73 ನೇ ಸಾಲಿನ ವಿದ್ಯಾರ್ಥಿಯಾಗಿದ್ದೆ. ನನ್ನ ಗುರುಗಳು ಎಲ್ಲರೂ ಹೋಗುವ ಹಾದಿಯಲ್ಲಿ ಹೋಗಬೇಡ. ವಿನೂತನ ಹಾದಿಯಲ್ಲಿ ಸಾಗು ಎಂದು ಅಂದು ಹೇಳಿದ್ದು ಇಂದು ಹೇಳಿದಂತಿದೆ. ಅದರಂತೆ ನಾವು ಹಿರಿಯ ವಿದ್ಯಾರ್ಥಿಗಳು ಸೇರಿಕೊಂಡು ಈ ಶಾಲೆಯ 59 ರ ಸಂಭ್ರಮವನ್ನು ಆಚರಿಸುತ್ತಿದ್ದೇವೆ. ಎಲ್ಲರೂ ಸೇರಿ ಶಾಲೆ ನವೀಕರಣ ಮಾಡಿ ನಾವು ಓದಿದ ಶಾಲೆಗೆ ಕೃತಜ್ಞತೆ ಅರ್ಪಿಸಿದ್ದೇವೆ ಎಂದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ಎನ್. ಸಿ. ಗುರುಮೂರ್ತಿ ಮಾತನಾಡಿ, ಈ ಶಾಲೆ ಪ್ರಾರಂಭವಾಗಿದ್ದು 1967 ರಲ್ಲಿ ಇಂದಿಗೆ 59 ವರ್ಷಸಂದಿವೆ. ನಾನೂ ಸಹ ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ. ಹಿರಿಯ ವಿದ್ಯಾರ್ಥಿಗಳು ಸೇರಿ ಸುಮಾರು ₹40 ಲಕ್ಷ ವೆಚ್ಚದಲ್ಲಿ ಶಾಲೆ ನವೀಕರಣ ಮಾಡಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತಾ ಯಾವಾಗಲೂ ಚಿಂತೆ ಬಿಟ್ಟು ಚಿಂತನೆಯ ಕಡೆಗೆ ಗಮನ ಹರಿಸೋಣ ಎಂದರು. ಸಾಹಿತಿ ಚಟ್ನಹಳ್ಳಿ ಮಹೇಶ್ ಉಪನ್ಯಾಸ ನೀಡಿ ಹಳೆಯ ನೆನಪುಗಳನ್ನು ರಸಗಳಿಗೆ ಮಾಡಿ ಮೆಲುಕು ಹಾಕುವುದು ಉತ್ತಮ ವ್ಯಕ್ತಿತ್ವದ ಲಕ್ಷಣ. ಸಮಾಜ ಕಟ್ಟಬೇಕಾದರೆ ಶಿಸ್ತಿನ ಜೀವನ ಮುಖ್ಯ. ಪ್ರೀತಿ ಜೀವ ಸೂತ್ರವಾಗಬೇಕು. ಯಾವಾಗಲೂ ಜೀವನ ಸ್ಪೂರ್ತಿ ಬತ್ತಬಾರದು. ಗುರುಗಳು ಯಾವಾಗಲೂ ಜೀವನದಿಯಾಗಿರಬೇಕು. ಇತ್ತೀಚೆಗೆ ಮಕ್ಕಳು ಆಡಿ ಆಡಿ ದಣಿಯುತ್ತಿಲ್ಲ. ನೋಡಿ ನೋಡಿ ದಣಿಯುತ್ತಿದ್ದಾರೆ. ಇದು ತಪ್ಪಬೇಕು. ಹಿರಿಯ ವಿದ್ಯಾರ್ಥಿಗಳು ತಮ್ಮ ಧಾರಾಳ ಮನಸ್ಸಿನಿಂದ ಶಾಲೆಯನ್ನು ಅತ್ಯುತ್ತಮ ರೀತಿಯಲ್ಲಿ ನವೀಕರಣ ಮಾಡಿ ಈ ಭಾಗಕ್ಕೆ ಮಾದರಿಯಾಗಿದ್ದಾರೆ. ನಮ್ಮ ಪೋಷಕರು ಇಂತಹ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಕು ಎಂದರು. ಕಾರ್ಯಕ್ರಮದಲ್ಲಿ ದೇವನೂರು ಗ್ರಾಪಂ ಅಧ್ಯಕ್ಷೆ ದೀಪಾ ದಕ್ಷಿಣಮೂರ್ತಿ, ವಿದ್ಯಾಸಂಸ್ಥೆ ಉಪಾಧ್ಯಕ್ಷ ಎಸ್ ಬಿ ಬಸವ ರಾಜು, ಜಿಪಂ ಮಾಜಿ ಸದಸ್ಯ ವಿಜಯಕುಮಾರ್, ನಿವೃತ್ತ ಡಿಡಿಪಿಐ ದೊಡ್ಡಮಲ್ಲಪ್ಪ, ಸರ್ಕಲ್ ಇನ್ಸ್ ಪೆಕ್ಟರ್ ಶಂಕರ್‌ನಾಯಕ್ ಮಾತನಾಡಿದರು.ಸಮಾರಂಭದ ಅಧ್ಯಕ್ಷತೆಯನ್ನು ಲಕ್ಷೀಶ ವಿದ್ಯಾಸಂಸ್ಥೆ ಎಸ್. ಲಕ್ಷ್ಣಣ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಥೆಯ ಪಾರ್ಥಸಾರಥಿ, ನಿಜಗುಣ, ರಾಮಚಂದ್ರಪ್ಪ, ರವಿಕುಮಾರ್, ಶ್ರೀನಿವಾಸ ರಾಘವನ್, ಕುಮಾರ್‌ಗೌಡ, ರಜನಿಕಾಂತ್, ಲೋಕೇಶ್, ಚಂದ್ರಪ್ಪ, ಸಂಸ್ಥೆಯ ಕಾರ್ಯದರ್ಶಿ ಎಸ್ .ಯತೀಶ್, ಶಿಕ್ಷಕಿ ಪ್ರಮೀಳಾ , ಪ್ರಾಂಶುಪಾಲ ಪುಟ್ಟಸ್ವಾಮಿನಾಯ್ಕ ಹಾಗೂ ಗ್ರಾಮದ ಮುಖಂಡರು ಇದ್ದರು.25ಕೆಕೆಡಿಯು1.

ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ದೇವನೂರಿನ ಶ್ರೀ ಲಕ್ಷೀಶ ವಿದ್ಯಾಸಂಸ್ಥೆ ಹಮ್ಮಿಕೊಂಡಿದ್ದ ಸುವರ್ಣ ಸಂಭ್ರಮ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಉಪಕುಲಪತಿ ಡಾ.ಇಂದ್ರೇಶ್ ,ಸಾಹಿತಿ ಚಟ್ನಹಳ್ಳಿ ಮಹೇಶ್ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಸೇರಿ ರಾಜ್ಯದ 9 ಜಿಲ್ಲೆಗಳಲ್ಲಿ ಮಳೆ
ಪೌರಾಯುಕ್ತೆಗೆ ಬೆಂಕಿ ಧಮ್ಕಿ ಹಾಕಿದ್ದ ರಾಜೀವ್‌ ಅರೆಸ್ಟ್‌