ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ 2023ರಲ್ಲಿ ವಿಧಾನಸಭಾ ಚುನಾವಣೆ ಗೆದ್ದಾಗ ಚುನಾವಣಾ ಆಯೋಗ ಸರಿ ಇತ್ತು. 2024ರ ಲೋಕಸಭಾ ಚುನಾವಣೆಯಲ್ಲಿ ನಾವು ಗೆದ್ದೆವು. ಆಗ ಅಲ್ಲಿ ಗೋಲ್ಮಾಲ್ ಆಗಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಮೂರ್ಖತನಕ್ಕೂ ಒಂದು ಮಿತಿ ಇರುತ್ತದೆ. ಗೆದ್ದಾಗ ಒಂದು ರೀತಿ, ಸೋತಾಗ ಒಂದು ರೀತಿ ಆರೋಪ ಮಾಡುವ ರಾಹುಲ್ ಗಾಂಧಿಯವರೇ, ನಿಮಗೆ ನಾಚಿಕೆ ಆಗಲ್ವಾ ಎಂದು ತಿವಿದರು.
ಬೆಂಗಳೂರಲ್ಲಿ ಇದೀಗ ಹೋರಾಟ ಹಮ್ಮಿಕೊಂಡಿದ್ದಾರೆ. ಅವರು ಸೋತಿರುವುದರಿಂದ ಅವರಿಗೆ ಉದ್ಯೋಗ ಏನಿಲ್ಲ. ಹೀಗಾಗಿ, ಈ ರೀತಿ ಆರೋಪ ಮಾಡುತ್ತಾರೆ. ಕೋರ್ಟ್ ಬಗ್ಗೆನೂ ಮಾತನಾಡುತ್ತಾರೆ. ಅವರ ಪರವಾಗಿ ತೀರ್ಪು ಕೊಟ್ಟರೆ ಸರಿ. ಇಲ್ಲದಿದ್ದರೆ ತಪ್ಪು ಎನ್ನುತ್ತಾರೆ. ಮತಪಟ್ಟಿಯಲ್ಲಿ ತಪ್ಪಾಗಿದ್ದರೆ ಚುನಾವಣಾ ಆಯೋಗಕ್ಕೆ ದೂರು ಕೊಡಲಿ. ಇಷ್ಟು ದಿನ ಏನಾಗಿತ್ತು?, ಟ್ಯೂಬ್ ಲೈಟ್ ಹತ್ತಿರಲಿಲ್ವಾ?. ಸೋತ ತಕ್ಷಣ ಗೊಳೋ ಅಂತ ಅಳುತ್ತಿದ್ದಾರೆ ಎಂದರು.ಇದೀಗ ಚುನಾವಣಾ ಆಯೋಗ ಸತ್ತಿದೆ ಎಂದು ಹೇಳುತ್ತಾರೆ. ಇವರ ಹೇಳಿಕೆ ನೋಡಿದರೆ ರಾಹುಲ್ ಬಾಬಾನ ಬ್ಯಾಲೆನ್ಸ್ ತಪ್ಪಿದೆ ಎಂದೆನ್ನಿಸುತ್ತದೆ. ಎಲೆಕ್ಷನ್ ಕಮಿಷನ್ ಅನ್ನು ನೀವು ಹಿಂದೆ ಹೇಗೆ ನಡೆಸಿಕೊಂಡಿದ್ದೀರಿ? ರಾಜೀವ್ ಗಾಂಧಿ ಹತ್ಯೆ ದುರ್ದೈವದ ಸಂಗತಿ. ಆದರೆ, ಒಬ್ಬ ವ್ಯಕ್ತಿಯ ಮರಣದ ನಂತರ ಚುನಾವಣೆ ಮುಂದಕ್ಕೆ ಹಾಕಿದಿರಿ ಯಾಕೆ? ಓಟ್ ಕೇಳುವುದಕ್ಕೂ ಅವರ ಚಿತಾಭಸ್ಮ ಮೆರವಣಿಗೆ ನಡೆಸಲಾಯಿತು ಎಂದು ಟೀಕಿಸಿದರು.
ಪಾಕ್ ರಕ್ಷಿಸಲು ಕೈ ಯತ್ನ
ಆಗ ಅಧಿಕಾರದಲ್ಲಿದ್ದ ಶರದ್ ಪವಾರರ ಪಕ್ಷ ಹಿಂದೂ ಟೆರರ್ ಎಂದು ಹೇಳುವ ಪ್ರಯತ್ನವನ್ನು ಮಾಡಿತ್ತು. ಜತೆಗೆ ತನಿಖೆಯನ್ನೂ ಬಂದ್ ಮಾಡಿತ್ತು. ಸಂಜೋತಾ ಹಾಗೂ ಮಾಲೇಗಾಂವ್ ಲಿಂಕ್ ಮಾಡಿದ್ದರು. ಮಾಲೇಗಾಂವ್‌ನಲ್ಲಿ ಮುಸ್ಲಿಮರು ಯಾಕೆ ಬಾಂಬ್ ಸ್ಫೋಟ ಮಾಡುತ್ತಾರೆ ಎಂದಿದ್ದರು. ಅಲ್ಲದೆ, ಹಿಂದೂ ಟೆರರ್ ಎಂದು ಹೇಳಿ ಪಾಕಿಸ್ತಾನವನ್ನು ರಕ್ಷಿಸುವ ಕೆಲಸ ಮಾಡಿದರು. ದಿಗ್ವಿಜಯ ಸಿಂಗ್ ಅವರು ಮುಂಬೈನಲ್ಲಿ ಆರ್‌ಎಸ್‌ಎಸ್‌ನವರು ಬ್ಲಾಸ್ಟ್ ಮಾಡಿದ್ದಾರೆ ಎಂದಿದ್ದರು. ಇವರೆಲ್ಲ ದೇಶದಲ್ಲಿ ಹೀರೋ ಆಗುವುದನ್ನು ಬಿಟ್ಟು ಪಾಕಿಸ್ತಾನದಲ್ಲಿ ಹೀರೋ ಆಗುವುದಕ್ಕೆ ಹೊರಟಿದ್ದಾರೆ ಎಂದು ಆರೋಪಿಸಿದರು.(ಬಾಕ್ಸ್)...
ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ
ಹಾಲಿ ಅಧ್ಯಕ್ಷರಾಗಿರುವ ವಿಜಯೇಂದ್ರ ಹಾಗೂ ಕೇಂದ್ರ ಸಚಿವ ವಿ.ಸೋಮಣ್ಣ ಅವರು ಈ ಬಾರಿ ನಾನೇ ರಾಜ್ಯಾಧ್ಯಕ್ಷನಾಗುವೆ ಎಂದು ಹೇಳಿಕೊಂಡಿಲ್ಲ. ಹೀಗಾಗಿ, ರಾಷ್ಟ್ರೀಯ ಅಧ್ಯಕ್ಷರು ಅರ್ಹರನ್ನು ಆಯ್ಕೆ ಮಾಡಲಿದ್ದಾರೆ ಎಂದರು.