ಅನಧಿಕೃತ ಫುಟ್‌ಪಾತ ಅಂಗಡಿಗಳ ತೆರವು: ಪೌರಾಯುಕ್ತ ರುದ್ರೇಶ್‌

KannadaprabhaNewsNetwork | Published : Dec 16, 2023 2:00 AM

ಸಾರಾಂಶ

ನಗರಸಭೆಯ ಸಾಮಾನ್ಯ ಸಭೆಯ ನಿರ್ಣಯದಂತೆ ಶಿರಾ ನಗರದ ಅನಧಿಕೃತ ಫುಟ್‌ಪಾತ್‌ ಅಂಗಡಿಗಳನ್ನು ಗುರುವಾರ ಬೆಳ್ಳಂಬೆಳಿಗ್ಗೆ ತೆರವುಗೊಳಿಸುವ ಮೂಲಕ ನಗರಸಭೆ ಪೌರಾಯುಕ್ತರು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಪೌರಾಯುಕ್ತರು ದಿಟ್ಟ ನಿರ್ಧಾರಕ್ಕೆ ಜನರ ಮೆಚ್ಚುಗೆ । ನ.20ರ ಸಾಮಾನ್ಯ ಸಭೆಯಲ್ಲಿ ತೀರ್ಮಾನ

ಕನ್ನಡಪ್ರಭ ವಾರ್ತೆ ಶಿರಾನಗರಸಭೆಯ ಸಾಮಾನ್ಯ ಸಭೆಯ ನಿರ್ಣಯದಂತೆ ಶಿರಾ ನಗರದ ಅನಧಿಕೃತ ಫುಟ್‌ಪಾತ್‌ ಅಂಗಡಿಗಳನ್ನು ಗುರುವಾರ ಬೆಳ್ಳಂಬೆಳಿಗ್ಗೆ ತೆರವುಗೊಳಿಸುವ ಮೂಲಕ ನಗರಸಭೆ ಪೌರಾಯುಕ್ತರು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಬಹಳ ದಿನಗಳಿಂದ ಅನಧಿಕೃತ ಅಂಗಡಿಗಳ ತೆರವು ಮಾಡುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದರು. ರಸ್ತೆಬದಿಯಲ್ಲಿ ಅಂಗಡಿಗಳನ್ನು ಇಟ್ಟುಕೊಂಡಿರುವುದರಿಂದ ಪಾದಚಾರಿಗಳು, ಸಂಚರಿಸಲು ತೊಂದರೆಯಾಗಿತ್ತು. ದ್ವಿಚಕ್ರ ವಾಹನ ಸವಾರರು ತಮ್ಮ ವಾಹನಗಳನ್ನು ರಸ್ತೆಯ ಪಕ್ಕದಲ್ಲಿಯೇ ಬಿಟ್ಟು ಹೋಗುತ್ತಿದ್ದರು. ಇದರಿಂದ ಅಪಘಾತಗಳು ಸಂಭವಿಸಿದ್ದವು. ಈ ಹಿನ್ನೆಲೆಯಲ್ಲಿ ನ.20 ರಂದು ಶಾಸಕ ಟಿ.ಬಿ. ಜಯಚಂದ್ರ ಅವರ ನೇತೃತ್ವದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಎಲ್ಲಾ ಸದಸ್ಯರು ಸರ್ವಾನುಮತದಿಂದ ನಗರದಲ್ಲಿರುವ ಅನಧಿಕೃತ ಪೆಟ್ಟಿ ಅಂಗಡಿಗಳನ್ನು ತೆರವು ಮಾಡುವಂತೆ ಒತ್ತಾಯಿಸಿದ್ದರು. ಶಾಸಕ ಟಿ.ಬಿ. ಜಯಚಂದ್ರ ಅವರು ನಗರಸಭೆ ಅಧಿಕಾರಿಗಳಿ ಸೂಚನೆ ನೀಡಿ ಶೀಘ್ರದಲ್ಲಿಯೇ ತೆರವು ಕಾರ್ಯ ಮಾಡುವಂತೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೆ ನಗರಸಭೆ ಪೌರಾಯುಕ್ತರಾಗಿ ಅಧಿಕಾರ ವಹಿಸಿಕೊಂಡ ಪೌರಯುಕ್ತ ರುದ್ರೇಶ್ ದಿಟ್ಟ ನಿರ್ಧಾರ ಮಾಡಿ ಯಾರಿಗೂ ಮಣೆ ಹಾಕದೆ, ಪೆಟ್ಟಿಗೆ ಅಂಗಡಿಗಳನ್ನು ತೆರವು ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಸದ್ಯ ನಗರದ ಖಾಸಗಿ ಬಸ್ ನಿಲ್ದಾಣ, ಸಾರ್ವಜನಿಕ ಆಸ್ಪತ್ರೆ ಮುಂಭಾಗ, ಸಂತೆ ಮೈದಾನ, ಪಶು ಇಲಾಖೆಯ ಮುಂಭಾಗ ಹಾಗೂ ಲೋಕೋಪಯೋಗ ಇಲಾಖೆ ಮುಂಭಾಗದಲ್ಲಿರುವ ಅಂಗಡಿಗಳನ್ನು ಹಾಗೂ ಬುಕ್ಕಾಪಟ್ಟಣ ಸರ್ಕಲ್‌ನಲ್ಲಿರುವ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ನಗರಾದ್ಯಂತ ಇರುವ ಅನಧಿಕೃತ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸುವುದಾಗಿ ಭರವಸೆ ನೀಡಿದ್ದಾರೆ.

ಫುಟ್‌ಪಾತ್‌ ವ್ಯಾಪಾರಿಗಳ ಆಕ್ರೋಶ: ರಸ್ತೆಬದಿ ವ್ಯಾಪಾರ ಮಾಡುತ್ತಿದ್ದ ಫುಟ್‌ಪಾತ್‌ ವ್ಯಾಪಾರಿಗಳು ನಾವು ಜೀವನ ಸಾಗಿಸಲು ಫುಟ್‌ಪಾತ್‌ ವ್ಯಾಪಾರವನ್ನೇ ನಂಬಿಕೊಂಡಿದ್ದು, ನಗರಸಭೆಯವರು ಏಕಾಏಕಿ ಬಂದು ಅಂಗಡಿಗಳನ್ನು ತೆರವುಗೊಳಿಸುತ್ತಿದ್ದಾರೆ. ನಮಗೆ ಬೇರೆ ಕಡೆ ವ್ಯಾಪಾರ ಮಾಡಲು ಜಾಗ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೋಟ್‌....................

ನ.20 ರಂದು ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಶಾಸಕರಾದ ಟಿ.ಬಿ. ಜಯಚಂದ್ರ ಹಾಗೂ ನಗರಸಭೆ ಅಧ್ಯಕ್ಷೆ ಪೂಜಾ ಅವರ ಅಧ್ಯಕ್ಷತೆಯಲ್ಲಿ ಆದ ತೀರ್ಮಾನದಂತೆ ಫುಟ್‌ಪಾತ ಅಂಗಡಿಗಳನ್ನು ತೆರವುಗೊಳಿಸಲಾಗುತ್ತಿದೆ. ಫುಟ್‌ಪಾತ ಅಂಗಡಿಯವರಿಗೆ ಒಂದು ವಾರದ ಹಿಂದೆಯೇ ಅಂಗಡಿಗಳನ್ನು ತೆರವುಗೊಳಿಸುವಂತೆ ನೋಟಿಸ್ ನೀಡಲಾಗಿತ್ತು. ನೋಟಿಸ್ ನೀಡಿದ್ದರೂ ಅಂಗಡಿಯವರು ತೆರವು ಮಾಡಿರಲಿಲ್ಲ. ಆದ್ದರಿಂದ ಇಂದು ನಗರಸಭೆಯಿಂದ ತೆರವು ಮಾಡಲಾಗುತ್ತಿದೆ ಎಂದ ಅವರು ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ ಯೋಜನೆಯಡಿ ಫುಟ್‌ಪಾತ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು. ಇದಕ್ಕಾಗಿ ಈಗಾಗಲೇ ಟೆಂಡರ್ ಕರೆದು ಕಾರ್ಯಾದೇಶ ನೀಡಲಾಗಿದೆ. ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭವಾಗುವುದು.

ರುದ್ರೇಶ್ ಪೌರಾಯುಕ್ತ

--------

ಕೋಟ್‌....................

ನಗರದಲ್ಲಿ ಪೌರಾಯುಕ್ತರಾದ ರುದ್ರೇಶ್ ಅವರು ಅನಧಿಕೃತ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸುತ್ತಿರುವುದು ಉತ್ತಮ ಕಾರ್ಯ. ಅದೇ ರೀತಿ ನಗರದಲ್ಲಿ ನಗರಸಭೆಯ ಅನುಮತಿ ಪಡೆಯದೆ ಹಾಕುವ ಎಲ್ಲಾ ರೀತಿಯ ಫ್ಲೇಕ್ಸ್ ಬ್ಯಾನರ್‌ಗಳನ್ನೂ ಸಹ ತೆರವುಗೊಳಿಸಬೇಕು. ಅನುಮತಿ ಪಡೆಯದೆ ಫ್ಲೇಕ್ಸ್ ಮತ್ತು ಬ್ಯಾನರ್‌ಗಳನ್ನು ಹಾಕುವವರ ಮೇಲೆ ಕ್ರಮ ಕೈಗೊಳ್ಳಬೇಕು.

ಆರ್.ಕೆ. ರಂಗನಾಥ್ಸಾ, ಮಾಜಿಕ ಕಾರ್ಯಕರ್ತರ 15ಶಿರಾ1:

ನಗರದಲ್ಲಿ ಅನಧಿಕೃತ ಫುಟ್‌ಪಾತ್‌ ಅಂಗಡಿಗಳನ್ನು ಪೌರಾಯುಕ್ತ ರುದ್ರೇಶ್ ಅವರ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.

Share this article