ಭಂಡಿಗಡಿಯ ಮಾತಾನುಗ್ರಹ ಧ್ಯಾನ ಕೇಂದ್ರದಲ್ಲಿ ಆಯೋಜಿಸಿದ್ದ ಮನೆ ಮದ್ದು ಮಾಹಿತಿ
ಕನ್ನಡಪ್ರಭ ವಾರ್ತೆ, ಕೊಪ್ಪಸಾವಿರಾರು ವರ್ಷಗಳ ಇತಿಹಾಸ ಇರುವ ಪಾರಂಪರಿಕ ವೈದ್ಯ ಪದ್ಧತಿ ಋುಷಿಮುನಿಗಳ ಕಾಲದಿಂದ ಬಳುವಳಿಯಾಗಿ ಬಂದಿದೆ ಎಂದು ಚಿಕ್ಕಮಗಳೂರು ಪಾರಂಪರಿಕ ವೈದ್ಯ ಪದ್ಧತಿ ಜಿಲ್ಲಾ ಸಂಚಾಲಕ ಹಾಗೂ ಕಸಾಪ ಹರಿಹರಪುರ ಹೋಬಳಿ ಘಟಕ ಅಧ್ಯಕ್ಷ ವೈದ್ಯ ಬಿ.ಆರ್.ಅಂಬರೀಶ ಭಂಡಿಗಡಿ ಹೇಳಿದರು.
ಭಂಡಿಗಡಿಯ ಮಾತಾನುಗ್ರಹ ಧ್ಯಾನ ಕೇಂದ್ರದಲ್ಲಿ ಆಯೋಜಿಸಿದ್ದ ಮನೆ ಮದ್ದು ಮಾಹಿತಿ, ಉಪನ್ಯಾಸ ಹಾಗೂ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಈ ಪಾರಂಪರಿಕ ವೈದ್ಯ ಪದ್ಧತಿ ಗಿಡಗಳು ಮತ್ತು ಪ್ರಕೃತಿಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ತಕ್ಷಣಕ್ಕೆ ಔಷಧಿ ಸಿದ್ಧಪಡಿಸುವ ವಿದ್ಯೆ.ಈ ವಿದ್ಯೆ ಪಾರಂಪರಿಕ ವೈದ್ಯರು, ಹಳ್ಳಿಗಳಲ್ಲಿ ಇಂದಿಗೂ ಇದೆ. ವಿಷ ಜಂತುಗಳ ಕಡಿತ, ಸರ್ಪಸುತ್ತಿಗೆ ಇನ್ನಿತರ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಯಶಸ್ವಿಯಾಗಿ ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ಔಷಧಿ ನೀಡಿ ಯಶಸ್ಸನ್ನ ಪಡೆದಿರುವ ಹೆಮ್ಮೆ ನಮ್ಮ ಪಾರಂಪರಿಕ ವೈದ್ಯರದ್ದು. ನಮ್ಮ ಮುಂದಿನ ಪೀಳಿಗೆಗೆ ಪಾರಂಪರಿಕ ವೈದ್ಯವನ್ನು, ಔಷಧಿ ಗಿಡಗಳ ಸಂರಕ್ಷಣೆ ಮಹತ್ವ ತಿಳಿಸುವ ಹಾಗೂ ಹಿರಿಯ ಪಾರಂಪರಿಕ ವೈದ್ಯರನ್ನು ಗೌರವಿಸುವ ಕಾರ್ಯವನ್ನು ಹಲವಾರು ವರ್ಷಗಳಿಂದ ನಿರಂತರವಾಗಿ ಹಮ್ಮಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ಭಂಡಿಗಡಿ ಗ್ರಾಪಂ ಸದಸ್ಯೆ ಮಮತಾ ಸುರೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮನೆ ಮದ್ದು ನಮ್ಮೆಲ್ಲರ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ನಾವು ಗಿಡಮೂಲಿಕೆ ಮಹತ್ವ ತಿಳಿದು ಕೊಂಡು ಗಿಡಮೂಲಿಕೆಗಳು ನಾಶವಾಗದಂತೆ ಸಂರಕ್ಷಿಸಿ, ನಮ್ಮ ಆಹಾರ ಪದ್ಧತಿಗಳಲ್ಲಿ ಮನೆಮದ್ದನ್ನು ಮಾಡಿಕೊಂಡಲ್ಲಿ ನಮ್ಮ ಆರೋಗ್ಯ ರಕ್ಷಣೆ ಸಾಧ್ಯ. ಹಳ್ಳಿಗಳಲ್ಲಿರುವ ಪಾರಂಪರಿಕ ವೈದ್ಯರ ಗುರುತಿಸುವಿಕೆ ಅಗತ್ಯವಿದೆ ಎಂದರು.ನವಚೇತನ ವೇದಿಕೆ ಸಂಚಾಲಕ ಬಿ.ಎಚ್.ದಿವಾಕರ್ ಭಟ್ ಮಾತನಾಡಿ ಪಾರಂಪರಿಕ ವೈದ್ಯ ಪದ್ಧತಿ ಉಳಿವಿಗೆ ರೋಗಿ ಮತ್ತು ವೈದ್ಯರ ನಡುವೆ ನಂಬಿಕೆ ಅತಿ ಮುಖ್ಯ. ಇಂದಿನ ದಿನ ಪಾರಂಪರಿಕ ಪದ್ಧತಿ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸಬೇಕಿದೆ. ಸಾಧ್ಯವಾದಷ್ಟು ಮನೆಮದ್ದು ಪಾರಂಪರಿಕ ವೈದ್ಯ ಪದ್ಧತಿ ಉಪಯೋಗಿದುವ ನಿಟ್ಟಿನಲ್ಲಿ ಹಳ್ಳಿ ಹಳ್ಳಿಗಳಲ್ಲಿ ಔಷಧಿ ವನ ಸಸ್ಯ ಸಂರಕ್ಷಣೆ ಕಾರ್ಯಗಳು ನಡೆಯಬೇಕಿದೆ ಎಂದರು. ಹಿರಿಯ ಪಾರಂಪರಿಕ ವೈದ್ಯ ನಾಗಭೂಷಣಯ್ಯ ಹೊರಕೂಡಿಗೆ, ರತ್ನಮ್ಮ ಇಳಿಮನೆ ನಾಲೂರು, ಅಬೂಬ ಕರ್ ದುರ್ಗಾದೇವಸ್ಥಾನ ಶೃಂಗೇರಿ ಇವರಿಗೆ ಮಲೆನಾಡ ಪಾರಂಪರಿಕ ವೈದ್ಯ ಸಿರಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಪಾರಂಪರಿಕ ವೈದ್ಯರಾದ ಕೃಷ್ಣಪ್ಪ ನಾಯ್ಕ್ ಚಂಡೆಗುಡ್ಡೆ, ಎ.ಎಂ. ಸುಬ್ರಹ್ಮಣ್ಯ ಭಂಡಿಗಡಿ, ದೇವರಾಜ ಆಚಾರ್ ಅಜ್ಜಂಪುರ ಇವರನ್ನು ಅಭಿನಂದಿಸಲಾಯಿತು.ಹಿರಿಯ ಪಾರಂಪರಿಕ ವೈದ್ಯರಾದ ಶಂಕರಪ್ಪ ಗೌಡ, ಗೋಪಾಲಗೌಡ, ರತ್ನಮ್ಮ ಮನೆ ಮದ್ದು ಮಾಹಿತಿ ನೀಡಿದರು.ಶ್ರೀಸೂರ್ಯನಾರಾಯಣ ಪಾರಂಪರಿಕ ವೈದ್ಯ ಪ್ರತಿಷ್ಠಾನದ ಅಧ್ಯಕ್ಷ ಬಿ.ಎಚ್.ರಾಮಚಂದ್ರ ಭಂಡಿಗಡಿ, ಅಜ್ಜಂಪುರ ತಾಲೂಕು ಪಾ.ವೈ.ಪ ಕಾರ್ಯದರ್ಶಿ ದೇವರಾಜ ಆಚಾರ್ ಕಸಾಪ ಹರಿಹರಪುರ ಹೋಬಳಿ ಘಟಕ ಪ್ರಧಾನ ಸಂಚಾಲಕ ಶುಕುರ್ ಅಹಮದ್, ಪಾ.ವೈ.ಪ ಕೊಪ್ಪ ತಾಲೂಕು ಘಟಕ ಅಧ್ಯಕ್ಷ ವೈದ್ಯ ಎ.ಎಂ. ಸುಬ್ರಮಣ್ಯ, ಕಸಾಪ ಹರಿಹರಪುರ ಹೋಬಳಿ ಮಹಿಳಾ ಘಟಕ ಅಧ್ಯಕ್ಷೆ ಸುಮಿತ್ರಾ ನಾರಾಯಣ್, ಶಫಾ, ನಿಜಾಮುದ್ದೀನ್, ವಿಶ್ವನಾಥ ಅಂಬಳಿಕೆ ಬಿ.ಎಚ್.ಚಂದ್ರಮೌಳಿ, ನಿರಂಜನ, ಪನ್ನಗ, ಹುಸೇನ್ ದುರ್ಗಾದೇವಸ್ಥಾನ, ನಿರ್ಮಲಾ, ಮಧುರ, ಮಹಿಮ, ಮನ್ವಿತ್ ಹಿರಣ್ಯ, ಜಾಹಿದ್, ಬಿ.ಆರ್. ರವಿಪ್ರಸಾದ್ ಉಪಸ್ಥಿತರಿದ್ದರು.