ಅಧಿಕಾರ ಬಂದ ಮೇಲೂ ಹಿಂದಿನಂತೆಯೇ ಇರುತ್ತೇನೆ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌

KannadaprabhaNewsNetwork |  
Published : Jan 04, 2024, 01:45 AM IST
 ಶಾಸಕ | Kannada Prabha

ಸಾರಾಂಶ

ಹಾಲಹಳ್ಳಿ ಗ್ರಾಮದಲ್ಲಿ ಮಾಜಿ ಸಚಿವ ಎಚ್.ಎಸ್.ಮಹದೇವಪ್ರಸಾದ್‌ ಅವರ ೭ ನೇ ವರ್ಷದ ಪುಣ್ಯಾರಾಧನೆ ಸಮಾರಂಭದಲ್ಲಿ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಅವರ ಹುಟ್ಟುಹಬ್ಬದ ಹಿನ್ನಲೆ ಸಂಗಮ ಪ್ರತಿಷ್ಠಾನ ಹಾಗೂ ಕರ್ನಾಟಕ ಮಾರ್ವಾಡಿ ಯೂತ್‌ ಫೇಡರೇಷನ್‌ ಹಾಗು ಶಾಸಕ ಎಚ್.‌ಎಂ.ಗಣೇಶ್‌ ಪ್ರಸಾದ್ ಸಹಯೋಗದಲ್ಲಿ ೪೫ ಮಂದಿಗೆ ಉಚಿತ ಕೃತಕ ಕಾಲು ವಿತರಣೆ ಸಮಾರಂಭದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಅಧಿಕಾರ ಸಿಗುವ ಮುಂಚೆ ಹೇಗಿದ್ದೇನೋ ಅಧಿಕಾರ ಬಂದ ಮೇಲೂ ಮುಂಚೆ ರೀತಿಯೇ ಇರುತ್ತೇನೆ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಘೋಷಿಸಿದರು.ತಾಲೂಕಿನ ಹಾಲಹಳ್ಳಿ ಗ್ರಾಮದಲ್ಲಿ ಮಾಜಿ ಸಚಿವ ಎಚ್.ಎಸ್.ಮಹದೇವಪ್ರಸಾದ್‌ ಅವರ ೭ ನೇ ವರ್ಷದ ಪುಣ್ಯಾರಾಧನೆ ಸಮಾರಂಭದಲ್ಲಿ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಅವರ ಹುಟ್ಟುಹಬ್ಬದ ಹಿನ್ನಲೆ ಸಂಗಮ ಪ್ರತಿಷ್ಠಾನ ಹಾಗೂ ಕರ್ನಾಟಕ ಮಾರ್ವಾಡಿ ಯೂತ್‌ ಫೇಡರೇಷನ್‌ ಹಾಗು ಶಾಸಕ ಎಚ್.‌ಎಂ.ಗಣೇಶ್‌ ಪ್ರಸಾದ್ ಸಹಯೋಗದಲ್ಲಿ ೪೫ ಮಂದಿಗೆ ಉಚಿತ ಕೃತಕ ಕಾಲು ವಿತರಣೆ ಸಮಾರಂಭದಲ್ಲಿ ಮಾತನಾಡಿದರು.ನನ್ನ ಹುಟ್ಟು ಹಬ್ಬದ ಅಂಗವಾಗಿ ಉಚಿತ ಕೃತಕ ಕಾಲು ಜೋಡಣೆ ಕಾರ್ಯಕ್ರಮ ಹುಟ್ಟುಹಬ್ಬದ ದಿನ ನಡೆಯಬೇಕಿತ್ತು ಎಚ್.ಎಸ್.ಮಹದೇವಪ್ರಸಾದ್‌ ಅವರ ಪುಣ್ಯಾರಾಧನೆಯಂದು ನೀಡಲು ಯೋಚಿಸಿ ಇಂದು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಸಂಗಮ ಪ್ರತಿಷ್ಠಾನ ಹಾಗು ಎಚ್.ಎಸ್.ಮಹದೇವಪ್ರಸಾದ್‌ ಪೌಂಡೇಶನ್‌ ಕಳೆದ ಏಳು ವರ್ಷಗಳಿಂದ ಉದ್ಯೋಗ, ಆರೋಗ್ಯಮೇಳ, ಸ್ಪಧ್ಮಾತ್ಮಕ ಪರೀಕ್ಷೆ ತರಬೇತಿ ಹಾಗೂ ನೊಂದವರಿಗೆ ಸೇವೆ ಮಾಡುತ್ತ ಬಂದಿದೆ. ಮುಂದೆಯು ಸಾಮಾಜಿಕ ಸೇವೆ ಮುಂದುವರಿಸಿಕೊಂಡು ಹೋಗುತ್ತೇವೆ ಎಂದರು.‌

ಅಭಿವೃದ್ಧಿ ಹರಿಕಾರ ಮಾಜಿ ಸಂಸದ ಎಂ.ಶಿವಣ್ಣ ಮಾತನಾಡಿ, ಎಚ್.ಎಸ್. ಮಹದೇವಪ್ರಸಾದ್‌ ಅಭಿವೃದ್ಧಿ ಹರಿಕಾರರು ಜಿಲ್ಲೆಯ ಜನರ ಹೃದಯದಲ್ಲಿ ಅಚ್ಚಳಿಯದೆ ಉಳಿದ ನಾಯಕ. ನಾನಂತು ಮಹದೇವಪ್ರಸಾದ್‌ರನ್ನು ಉಸಿರು ಇರುವ ತನಕ ನೆನಪಿಸಿಕೊಳ್ಳುತ್ತೇನೆ ಎಂದರು.‌ನಾನು ಎಂಪಿ ಚುನಾವಣೆಯಲ್ಲಿ ನಿಲ್ಲುವಾಗ ದುಡ್ಡು ಇರಲಿಲ್ಲ. ನನತ್ರ ದುಡ್ಡಿಲ್ಲ ಅಂದ್ರು ಚುನಾವಣೆಗೆ ನಿಲ್ಲಲು ಹೇಳಿ ಚುನಾವಣೆಗೂ ಸಹಾಯ ಮಾಡಿದ್ರು ಅಲ್ಲದೆ ಎಂಪಿ ಮತ್ತು ಎಂಎಲ್‌ಎ ಚುನಾವಣೆ ಜೊತೆ ಜೊತೆಯಾಗಿ ಬಂದಾಗ ಓಟು ಕೇಳುವ ಸಮಯದಲ್ಲಿ ಮಹದೇವಪ್ರಸಾದ್‌ ನನಗೊಂದು ಓಟು ಕಡಿಮೆಯಾದ್ರು ಪರವಾಗಿಲ್ಲ ಶಿವಣ್ಣಗೆ ಓಟು ಕಡಿಮೆಯಾಗಬಾರದು ಎಂದು ಹೇಳಿದ್ದು ಮರೆಯಲು ಸಾಧ್ಯವಿಲ್ಲ ಎಂದರು.ನಂಜನಗೂಡು ಕ್ಷೇತ್ರದ ಶಾಸಕ ದರ್ಶನ್‌, ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ಮುನಿರಾಜು, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್‌, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್ ಮಾತನಾಡಿದರು.ಸಮಾರಂಭದಲ್ಲಿ ಮಾಜಿ ಸಚಿವೆ ಡಾ.ಗೀತಾ ಮಹದೇವಪ್ರಸಾದ್‌,ಕರ್ನಾಟಕ ಮಾರ್ವಾಡಿ ಯೂತ್‌ ಫೇಡರೇಷನ್‌ನ ಪದಾಧಿಕಾರಿಗಳು,ಮಾಜಿ ಶಾಸಕ ಕಳಲೆ ಕೇಶವಮೂರ್ತಿ,ಉದ್ಯಮಿ ಆರ್.ಮಧುಕುಮಾರ್, ಎನ್.ನಂದಕುಮಾರ್‌, ಮುಖಂಡರಾದ ಕೆರಹಳ್ಳಿ ನವೀನ್‌, ಬಿ.ಕೆ.ರವಿಕುಮಾರ್‌, ಕಬ್ಬಹಳ್ಳಿ ದೀಪು, ಬೆಟ್ಟಹಳ್ಳಿ ಕೆಂಪರಾಜು, ಮಂಚಹಳ್ಳಿ ಲೋಕೇಶ್‌, ದೇವರಹಳ್ಳಿ ಪ್ರಭು, ಕೆ.ಎಂ.ಮಾದಪ್ಪ, ಟಿ.ಪಿ.ನಾಗರಾಜು, ಶಿವಪ್ಪ ದೇವರು, ಎಸ್.ಶಿವನಾಗಪ್ಪ, ಎಚ್‌ಎಸ್‌ಎಂ ಕುಟುಂಬದ ಸದಸ್ಯರು ಹಾಗೂ ಸಹಸ್ರಾರು ಕಾರ್ಯಕರ್ತರು ಇದ್ದರು.ಚಿಂತಕ ಹಾಲಹಳ್ಳಿ ಎಚ್.ಎಂ.ಪೃಥ್ವಿರಾಜ್‌ ಕಾರ್ಯಕ್ರಮ ಸ್ವಾಗತಿಸಿ, ನಿರೂಪಿಸಿದರು.೩ಜಿಪಿಟಿ೩ಗುಂಡ್ಲುಪೇಟೆ ತಾಲೂಕಿನ ಹಾಲಹಳ್ಳಿಯಲ್ಲಿ ನಡೆದ ಎಚ್.ಎಸ್.ಮಹದೇವಪ್ರಸಾದ್‌ರ ಪುಣ್ಯಾರಾಧನೆ ಸಭೆಯಲ್ಲಿ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಮಾತನಾಡಿದರು.

-------------

ಎಚ್‌ಎಸ್‌ಎಂ ಬದುಕಿದ್ದರೆ ಪ್ರಸ್ತುತ ಸಿಎಂ ರೇಸ್‌ನಲ್ಲಿ ಇರುತ್ತಿದ್ದರು- ಪಡಗೂರು ಶ್ರೀಕನ್ನಡಪ್ರಭ ವಾರ್ತೆ,ಗುಂಡ್ಲುಪೇಟೆಎಚ್.ಎಸ್.ಮಹದೇವಪ್ರಸಾದ್‌ ಇಲ್ಲಿಯ ತನಕ ಬದುಕುಳಿದಿದ್ದರೆ ಪ್ರಸ್ತುತ ಮುಖ್ಯಮಂತ್ರಿ ರೇಸ್‌ನಲ್ಲಿ ಇರುತ್ತಿದ್ದರು ಎಂದು ಪಡಗೂರು ಅಡವಿ ಮಠಾಧೀಶ ಶಿವಲಿಂಗೇಂದ್ರ ಸ್ವಾಮೀಜಿ ಹೇಳಿದರು. ಹಾಲಹಳ್ಳಿಯಲ್ಲಿ ನಡೆದ ಮಾಜಿ ಸಚಿವ ಎಚ್.ಎಸ್.ಮಹದೇವಪ್ರಸಾದ್‌ ಅವರ ೭ ನೇ ವರ್ಷದ ಪುಣ್ಯಾರಾಧನೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ ಮಹದೇವಪ್ರಸಾದ್‌ ದೂರ ದೃಷ್ಟಿಯುಳ್ಳ ಜನಪ್ರತಿನಿಧಿಯಾಗಿದ್ದರು ಹಾಗು ಪ್ರಬುದ್ಧ ರಾಜಕಾರಣಿಯೂ ಆಗಿದ್ದರು ಎಂದರು.ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಬುನಾದಿ ಹಾಕಿದ್ದರು ಅಲ್ಲದೆ ಮಹದೇವಪ್ರಸಾದ್‌ಗೆ ಪ್ರಭಾವವಿತ್ತು ಹಾಗು ಶಕ್ತಿಯಿದ್ದ ಕಾರಣದಿಂದಲೇ ಮಹದೇವಪ್ರಸಾದ್‌ರ ಹೆಸರು ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ ಎಂದರು.ಮಹದೇವಪ್ರಸಾದ್‌ ಅವರು ಸಹಕಾರ ಸಚಿವರಾಗಿದ್ದ ಅವಧಿಯಲ್ಲಿ ಗುಂಡ್ಲುಪೇಟೆಯಲ್ಲಿ ರಾಜ್ಯ ಮಟ್ಟದ ಸಹಕಾರ ಸಪ್ತಾಹ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ,ಸಚಿವ ಎಚ್.ಕೆ.ಪಾಟೀಲ್‌ ಮಹದೇವಪ್ರಸಾದ್‌ ಕೆಲಸದ ಕುರಿತು ನನ್ನ ಕ್ಷೇತ್ರದಲ್ಲೂ ಇಷ್ಟೊಂದು ಕೆಲಸ ಆಗಿಲ್ಲ ಎಂದಿದ್ದರು.‌ಎಚ್.ಎಸ್.ನಂಜಪ್ಪ, ಮಹದೇವಪ್ರಸಾದ್‌ ಆಪ್ತಮಹದೇವಪ್ರಸಾದ್‌ ಐದು ಬಾರಿ ಶಾಸಕರಾಗಿದ್ದರು. ಗಣೇಶ್‌ ಪ್ರಸಾದ್‌ ಪ್ರಸ್ತತ ಶಾಸಕ.ಮಲ್ಲಿಕಾರ್ಜುನ ಖರ್ಗೆ,ಆರ್.ವಿ.ದೇಶಪಾಂಡೆಯಂದೆ ಸತತವಾಗಿ ಗೆದ್ದು ದಾಖಲೆ ಮಾಡಬೇಕು.ನಾವು ನಿಮ್ಮ ಜೊತೆ ಇದ್ದರೆ ಸಾಕು;ಅದೇ ಧೈರ್ಯದಲ್ಲಿ ಕೆಲಸ ಆಗುತ್ತವೆ.ನಿಮ್ಮ ಹೆಸರಿಗೆ ಕಳಂಕ ತರುವ ಕೆಲಸ ನಾವು ಮಾಡಲ್ಲ.ಬಿ.ಎಂ.ಮುನಿರಾಜು, ಮಹದೇವಪ್ರಸಾದ್‌ ಆಪ್ತಮಹದೇವಪ್ರಸಾದ್‌ ಕ್ಷೇತ್ರಕ್ಕೆ ಸೀಮಿತವಾದ ನಾಯಕರಲ್ಲ.ರಾಜ್ಯ ಮಟ್ಟದ ನಾಯಕರಾಗಿ ಹೊರ ಹೊಮ್ಮಿದ್ದರು.ಜಿಲ್ಲೆಯ ಅಭಿವೃದ್ಧಿ ಹಾಗೂ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಿದ್ದರು.ಮಹದೇವಪ್ರಸಾದ್‌ ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕೆಲಸ ಮಾಡಿದ್ದರು.ಪಿ.ಮರಿಸ್ವಾಮಿ,ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷಮಹದೇವಪ್ರಸಾದ್‌ ಸಾಹೇಬರು, ನನ್ನ ತಂದೆ ಆರ್. ಧ್ರುವನಾರಾಯಣ ಸಾಹೇಬರು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದರು. ಜಿಲ್ಲೆಯ ಅಭಿವೃದ್ಧಿಯಲ್ಲಿ ಇಬ್ಬರು ನಾಯಕರ ಪಾತ್ರ ಬಹಳಷ್ಟಿದೆ.ಅವರ ದಾರಿಯಲ್ಲಿಯೇ ನಾನು ಮತ್ತು ಗಣೇಶ್‌ ಪ್ರಸಾದ್‌ ಅವರು ಸಾಗುತ್ತೇವೆ.

ದರ್ಶನ್‌, ಶಾಸಕ ನಂಜನಗೂಡು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ