ಜಮೀನಿಗಾಗಿ ಮಾಜಿ ಸೈನಿಕನ ಕುಟುಂಬ ಧರಣಿ

KannadaprabhaNewsNetwork |  
Published : Oct 28, 2025, 12:37 AM IST
ತಾಲೂಕಿನ ಹಿರೇಕಬ್ಬಾರ ಗ್ರಾಮದ ಸುರೇಂದ್ರ ಶಿವಪ್ಪ ಹಲಗೇರಿ ಹಾಗೂ ಅವರ ಕುಟುಂಭ ಜಮೀನಿಗಾಗಿ ತಹಸೀಲ್ದಾರ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಮಾಜಿ ಸೈನಿಕ ಜೀವನೋಪಾಯಕ್ಕೆ ಸರಕಾರ ನೀಡುವ ಜಮೀನಿಗಾಗಿ ಕಳೆದ 25 ವರ್ಷಗಳಿಂದ ಸಂಬಂಧ ಪಟ್ಟ ಎಲ್ಲ ಇಲಾಖೆಗಳಿಗೆ ಅಲೆದರೂ ಜಮೀನು ಮಂಜೂರು ಮಾಡದೇ ನಿರ್ಲಕ್ಷ್ಯ ವಹಿಸಿದ್ದರಿಂದ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ವಿರುದ್ಧ ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಅವರ ಕುಟುಂಬದೊಂದಿಗೆ ಸೋಮವಾರದಿಂದ ಪ್ರತಿಭಟನೆ ಆರಂಭಿಸಿದ ಘಟನೆ ಜರುಗಿದೆ.

ರಟ್ಟಿಹಳ್ಳಿ: ಮಾಜಿ ಸೈನಿಕ ಜೀವನೋಪಾಯಕ್ಕೆ ಸರಕಾರ ನೀಡುವ ಜಮೀನಿಗಾಗಿ ಕಳೆದ 25 ವರ್ಷಗಳಿಂದ ಸಂಬಂಧ ಪಟ್ಟ ಎಲ್ಲ ಇಲಾಖೆಗಳಿಗೆ ಅಲೆದರೂ ಜಮೀನು ಮಂಜೂರು ಮಾಡದೇ ನಿರ್ಲಕ್ಷ್ಯ ವಹಿಸಿದ್ದರಿಂದ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ವಿರುದ್ಧ ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಅವರ ಕುಟುಂಬದೊಂದಿಗೆ ಸೋಮವಾರದಿಂದ ಪ್ರತಿಭಟನೆ ಆರಂಭಿಸಿದ ಘಟನೆ ಜರುಗಿದೆ.ತಾಲೂಕಿನ ಹಿರೇಕಬ್ಬಾರ ಗ್ರಾಮದ ಸುರೇಂದ್ರ ಶಿವಪ್ಪ ಹಲಗೇರಿ ಅವರು 1980ರಲ್ಲಿ ಸೇನೆ ಸೇರಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ, ಮಹಾರಾಷ್ಟ್ರದ ನಾಸಿಕನಲ್ಲಿ ತರಬೇತಿ ಮುಗಿಸಿ ನಂತರ ಡೆಲ್ಲಿ, ಕೊಯಿಮತ್ತೂರ, ರಾಯ ಬರೇಲಿ, ರಾಯ್ಗಡ, ರಾಂಚಿ ಹಾಗೂ ಭಾರತೀಯ ಗಡಿ ಭದ್ರತಾ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಂತರ ನಿವೃತ್ತಿಯಾದ ಇವರಿಗೆ ಸೇನೆಯಿಂದ ಸಿಗಬೇಕಾದ ಎಲ್ಲ ಸವಲತ್ತುಗಳು ದೊರೆತಿದ್ದು, ವಯೋನಿವೃತ್ತಿ ನಂತರ ರಾಜ್ಯ ಸರಕಾರ ಮಾಜಿ ಸೈನಿಕರ ಖೋಟಾದಡಿ ಜಮೀನು ನೀಡುತ್ತದೆ. ಆದ್ದರಿಂದ ಕಳೆದ 25 ವರ್ಷಗಳಿಂದ ಹಿರೇಕೆರೂರ ಹಾಗೂ ರಟ್ಟಿಹಳ್ಳಿ ತಹಸೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದರೂ ನಾನಾ ಕಾರಣಗಳಿಂದ ಜಮೀನು ಮಂಜೂರು ಮಾಡದೇ ನಿರ್ಲಕ್ಷ್ಯವಹಿಸಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.8 ವರ್ಷಗಳ ಹಿಂದೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜಮೀನಿಗಾಗಿ ಪ್ರತಿಭಟನೆ ಕೈಗೊಂಡಾಗ ಆಗಿನ ಜಿಲ್ಲಾಧಿಕಾರಿಗಳು ಜಮೀನು ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದರಿಂದ ನಂತರ ಪ್ರತಿಭಟನೆ ಕೈ ಬಿಟ್ಟಿದ್ದರು. ತಮ್ಮ ಗ್ರಾಮದ ಹಿರೇಕಬ್ಬಾರ ಹಾಗೂ ಜೋಕನಾಳ ಗ್ರಾಮದ ಬಗರ್ ಹುಕುಂ ಸಾಗುವಳಿಯ ಅರಣ್ಯ ಇಲಾಖೆಯ ಜಮೀನನ್ನು ನೀಡುವಂತೆ ಸಂಬಂಧ ಪಟ್ಟ ಇಲಾಖೆಗೆ ಮನವಿ ಸಲ್ಲಿಸಿದ್ದು, ಅಲ್ಲಿನ ಗ್ರಾಮಸ್ಥರು ಮಾಜಿ ಸೈನಿಕರಿಗೆ ಜಮೀನು ಮಂಜೂರು ಮಾಡದಂತೆ ತಕರಾರು ಅರ್ಜಿ ಸಲ್ಲಿಸಿದ್ದರಿಂದ ಜಿಲ್ಲಾಧಿಕಾರಿಗಳು ಸರಕಾರಿ ಜಮೀನು ಲಭ್ಯವಿರುವುದಿಲ್ಲ ಎಂದು ಹಿಂಬರಹ ನೀಡಿ ಜಮೀನು ನೀಡದೆ ನಮ್ಮ ಕುಟುಂಬಕ್ಕೆ ಅನ್ಯಾಯ ಮಾಡಿದ್ದರಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ವಿರುದ್ಧ ಅಸಮಧಾನ ವ್ಯಕ್ತ ಪಡಿಸಿದರು.ಮಾಜಿ ಸೈನಿಕರ ಖೋಟಾದಡಿ ಜಮೀನಿಗಾಗಿ ಕಳೆದ 25 ವರ್ಷಗಳಿಂದ ಸಂಬಂಧ ಪಟ್ಟ ಎಲ್ಲ ಇಲಾಖೆಗಳಿಗೆ ಅಲೆದಾಡಿ ಸೋತುಹೋಗಿದ್ದೇನೆ. ಆದ್ದರಿಂದ ನನಗೆ ಜಮೀನು ಮಂಜೂರು ಮಾಡುವವರೆಗೂ ಧರಣಿ ಸತ್ಯಾಗ್ರಹ ಕೈಬಿಡುವುದಿಲ್ಲ. ನಾನು ಅನಾರೋಗ್ಯದಿಂದ ಬಳಲುತ್ತಿದ್ದು ನಮ್ಮ ಪ್ರಾಣಕ್ಕೇನಾದರೂ ಅನಾಹುತವಾದಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತವೇ ನೇರ ಹೊಣೆ ಎಂದು ಆನಂದಪ್ಪ ಹಲಗೇರಿ, ಬಸಮ್ಮ ಹಲಗೇರಿ, ಕಾವ್ಯ ಹಲಗೇರಿ, ಮಾಲತೇಶ ಹಲಗೇರಿ, ಹಾಲೇಶ ಹಲಗೇರಿ ಹನಮಂತಪ್ಪ ಹಲಗೇರಿ ಎಚ್ಚರಿಸಿದರು.ತಹಸೀಲ್ದಾರ್ ಶ್ವೇತಾ ಅಮರಾವತಿ ಹೇಳಿಕೆ: ಮಾಜಿ ಸೈನಿಕರ ಕುಟುಂಬ ನಮ್ಮ ಕಚೇರಿ ಆವರಣದಲ್ಲಿ ಮಾಜಿ ಸೈನಿಕರ ಖೋಟಾದಡಿ ಜಮೀನು ನೀಡುವಂತೆ ಧರಣಿ ಸತ್ಯಾಗ್ರಹ ಕೈಗೊಂಡಿದ್ದು ಸದ್ಯ ತಾಲೂಕಿನಲ್ಲಿ ಸರಕಾರಿ ಜಮೀನು ಲಭ್ಯ ಇರದ ಕಾರಣ ಸೈಟ್ ಕೊಡುವುದಾಗಿ ಹೇಳಿದರು. ಅದಕ್ಕೊಪ್ಪದೆ ಧರಣಿ ಕೈಗೊಂಡಿದ್ದು ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಬೇರೆ ಜಿಲ್ಲೆಯಲ್ಲಾದರೂ ಜಮೀನಿನ ಲಭ್ಯತೆ ನೋಡಿಕೊಂಡು ನೀಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಟ್ಟಿದ್ದಾರೆ.

PREV

Recommended Stories

ವಾಲ್ಮೀಕಿಗೆ ದೇವರ ಪಟ್ಟ ಕೊಡದಿರುವುದು ದುರಂತ: ಡಾ.ಗೋಪಾಲ
ಚರ್ಚ್‌ನಲ್ಲಿ ನಡೆದಿರುವುದು ಆತ್ಮಹತ್ಯೆಯಲ್ಲ, ಕೊಲೆ: ಆರೋಪ