ಫಲಿತಾಂಶ ಸುಧಾರಣೆಗೆ ಪರೀಕ್ಷಾ ಪಯಣ ಪುಸ್ತಕ ಸಹಕಾರಿ

KannadaprabhaNewsNetwork |  
Published : Feb 04, 2026, 02:45 AM IST
ನವಲಗುಂದದ ಮಾಡಲ್‌ ಹೈಸ್ಕೂಲ್‌ನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪಯಣ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಶಾಸಕ ಎನ್.ಎಚ್. ಕೋನರಡ್ಡಿ ಉದ್ಘಾಟಿಸಿದರು. | Kannada Prabha

ಸಾರಾಂಶ

ವಿದ್ಯಾರ್ಥಿಗಳಿಗೆ ನೂರಕ್ಕೆ ನೂರರಷ್ಟು ಫಲಿತಾಂಶ ಸುಧಾರಿಸಲು ಅತ್ಯುತ್ತಮ ಮಾರ್ಗದರ್ಶಿಯಾಗಿದೆ. ತಾಲೂಕಿನ ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಉತ್ತಮ ಸಾಧನೆ ತೋರಿ ತಾಲೂಕಿಗೆ ಕೀರ್ತಿ ತರಬೇಕು.

ನವಲಗುಂದ:

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಫಲಿತಾಂಶ ಸುಧಾರಣೆಗಾಗಿ ಆರು ವಿಷಯಗಳನ್ನು ಒಳಗೊಂಡ ಪರೀಕ್ಷಾ ಪಯಣ ಪುಸ್ತಕ ಸಹಕಾರಿಯಾಗಿದೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.

ಪಟ್ಟಣದ ಮಾಡಲ್‌ ಹೈಸ್ಕೂಲ್‌ನಲ್ಲಿ ತಾಲೂಕಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಮಾರ್ಗದರ್ಶಿ ಪರೀಕ್ಷಾ ಪಯಣ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ನೂರಕ್ಕೆ ನೂರರಷ್ಟು ಫಲಿತಾಂಶ ಸುಧಾರಿಸಲು ಅತ್ಯುತ್ತಮ ಮಾರ್ಗದರ್ಶಿಯಾಗಿದೆ. ತಾಲೂಕಿನ ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಉತ್ತಮ ಸಾಧನೆ ತೋರಿ ತಾಲೂಕಿಗೆ ಕೀರ್ತಿ ತರುವಂತೆ ಕರೆ ನೀಡಿದರು.

ಅಪರ ಆಯುಕ್ತರ ಕಚೇರಿ ಉಪನಿರ್ದೇಶಕ ಗಿರೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ ಮಾತನಾಡಿ, ಈ ಪರೀಕ್ಷಾ ಮಾರ್ಗದರ್ಶಿ ಪುಸ್ತಕ ಲೋಕಾರ್ಪಣೆಗೊಂಡಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.

ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎ.ಬಿ. ಕೊಪ್ಪದ ಮಾತನಾಡಿ, ಇದೊಂದು ಉತ್ತಮವಾದ ಮಾರ್ಗದರ್ಶಿಯಾಗಿದೆ. ಮಕ್ಕಳಿಗೆ ಪ್ರತಿ ವಿಷಯದ ಪ್ರಶ್ನೆ ಪತ್ರಿಕೆಯ ಸ್ವರೂಪದಂತೆ ಸಿದ್ಧಗೊಂಡು, ನಿಖರ ಮತ್ತು ಸ್ಪಷ್ಟವಾದ ಉತ್ತರ ಬರೆಯಲು ಪೂರಕವಾಗಿದೆ. ಶಾಸಕರ ಈ ಕೊಡುಗೆ ಮಕ್ಕಳಿಗೆ ಫಲಿತಾಂಶ ಸುಧಾರಣೆಗೆ ಆಶಾಕಿರಣವಾಗಿದೆ ಎಂದರು.

ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ ಶಿಗ್ಲಿ, ನೌಕರರ ಸಂಘದ ಅಧ್ಯಕ್ಷ ವಿ.ಡಿ. ರಂಗಣ್ಣವರ, ಜಿಲ್ಲಾ ದೖಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಎಚ್. ನೇಗಲಿ, ಸಮನ್ವಯಾಧಿಕಾರಿ ರೇಣುಕಾ ಮುರನಾಳ, ಜೀವನ ಪವಾರ, ದಾವಲಸಾಬ ಖುದ್ದಣ್ಣವರ, ಅಣ್ಣಪ್ಪ ಬಾಗಿ, ವೈ.ಎಚ್. ಬಣವಿ,‌ ಪಿ.ಕೆ. ಹಿರೇಗೌಡ್ರ, ಸಿ.ಎಚ್. ಡೊಂಬರ, ಎಲ್.ವೈ. ರಾಯಪ್ಪನವರ, ಶಿವಾನಂದ ಬೆಂಚಿಕೇರಿ, ವಸಂತ ಚಾಕಲಬ್ಬಿ, ಡಿ.ಜಿ. ಹುಲ್ಲೂರ, ಭಾಗೀರಥಿ ಮಳಲಿ ಸೇರಿ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ರದ್ದು ಮಾಡಿ, ನರೇಗಾ ಮರುಸ್ಥಾಪಿಸಿ: ಸಿದ್ದು
ಸಚಿವ ತಿಮ್ಮಾಪುರ ರಾಜೀನಾಮೆಗೆ ಅಹೋರಾತ್ರಿ ಧರಣಿ