ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ಪಟ್ಟಣದ ಗೃಹಕಚೇರಿಯಲ್ಲಿ ಎಸ್‌ಬಿ ಚಾರಿಟಬಲ್ ಟ್ರಸ್ಟ್ ಜ್ಞಾನಕಲ್ಪ ದ ವತಿಯಿಂದ ಏರ್ಪಡಿಸಲಾಗಿದ್ದ ಒಂದು ತಿಂಗಳ ಉಚಿತ ನೀಟ್ ತರಬೇತಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರಗಳು ಮಕ್ಕಳ ಶಿಕ್ಷಣದ ವಿಚಾರದಲ್ಲಿ ಅವರ ಭವಿಷ್ಯದಲ್ಲಿ ಹುಡುಗಾಟ ಆಡಬಾರದು. ಇದರಿಂದ ಮಕ್ಕಳ ಮನಸ್ಸು ಒಡೆಯುತ್ತದೆ ಎಂಬುದಕ್ಕೆ ಈಗಾಗಲೇ ತಮ್ಮ ಪ್ರಾಣಕಳೆದುಕೊಂಡಿರುವ ಮಕ್ಕಳೇ ಸಾಕ್ಷಿಯಾಗಿವೆ. ಇನ್ನಾದರೂ ರಾಜ್ಯ ಸರ್ಕಾರವಾಗಲೀ ಕೇಂದ್ರಸರ್ಕಾರವಾಗಲೀ ಎಚ್ಚರಿಕೆ ವಹಿಸಬೇಕು ಎಂದರು.
ಮಕ್ಕಳ ಬುದ್ದಿಮಟ್ಟ ಹೆಚ್ಚಾಗಿದೆ ಅದರೆ ಸರ್ಕಾರಗಳು ತೆಗೆದುಕೊಳ್ಳುವಂತಹ ನಿರ್ಧಾರಗಳು ಸರಿಯಾಗಿಲ್ಲ ಎಸ್‌ಎಸ್‌ಎಲ್‌ಸಿ ಪರೀಕ್ಷಾ ವೇಳೆ ಹಿಂದಿ ಭಾಷೆಯ ಬಗ್ಗೆ ಗೊಂದಲ ಮಾಡಲಾಗಿತ್ತು. ಇದು ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಇದಕ್ಕೆಲ್ಲ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು. ಮಕ್ಕಳು ಯಾವುದೇ ಪರೀಕ್ಷೆಗಳು ಬಂದರು ಉತ್ತಮವಾಗಿ ಅಧ್ಯಯನ ಮಾಡಿ ಧೈರ್ಯವಾಗಿ ಎದುರಿಸಬೇಕು ಎಂದರು.ಈ ಸಂದರ್ಭದಲ್ಲಿ ಬಿಇಒ ಕಾಂತರಾಜು ಸಿ.ಎಸ್ ಮಾತನಾಡಿ, ಈ ತರಬೇತಿಗೆ ನಮ್ಮ ತಾಲೂಕು ಅಲ್ಲದೇ ವಿವಿಧ ಬೇರೆ ಬೇರೆ ತಾಲೂಕುಗಳಿಂದಲೂ ವಿದ್ಯಾರ್ಥಿಗಳು ಬಂದಿದ್ದು ಈ ಬಾರಿ ನಾಲ್ಕು ಬಾರಿ ವಿವಿಧ ಹಂತದಲ್ಲಿ ಉಚಿತವಾಗಿ ತರಬೇತಿಯನ್ನು ನೀಡಲಾಗುತ್ತಿದೆ ಎಂದರು. ಸಿಇಟಿ ನೀಟ್ ತರಬೇತಿ ಸಮಿತಿಯ ಅಧ್ಯಕ್ಷ ನಾಗರಾಜು ಮಾತನಾಡಿ, ಈ ನೀಟ್ ತರಬೇತಿಯಲ್ಲಿ ತರಬೇತಿ ಪಡೆದ ನೀವು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ ನಿಮ್ಮ ಶಿಕ್ಷಣಕ್ಕೆ ಯಾವುದೇ ಸಹಾಯವನ್ನು ನಮ್ಮ ಟ್ರಸ್ಟ್ ಮಾಡಲಿದ್ದು ಇದನ್ನು ಬಳಸಿಕೊಳ್ಳಿ ಎಂದ ಅವರು ನಿಮ್ಮೊಂದಿಗೆ ನಾವು ಸದಾ ಇರುತ್ತೇವೆ ಎಂದರು. ಈ ಸಂದರ್ಭದಲ್ಲಿ ಉಪನ್ಯಾಸಕ ಸಂದೇಶ್, ಸಿಇಟಿ ನೀಟ್ ತರಬೇತಿ ಸಮಿತಿಯ ಜಾಕೀರ್, ವರಮಹಾಲಕ್ಷ್ಮೀ ಯೋಗಿಶ್, ಸೋಮಶೇಖರ್,ಶಿವಣ್ಣ, ಸೌಖ್ಯಾಗೌತಂ, ಜಾಕೀರ್, ತಾ.ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್, ಎಂ.ಎನ್.ಸುರೇಶ್ ಸೇರಿದಂತೆ ಇತರರು ಇದ್ದರು.