ಎಕ್ಸಲೆಂಟ್ ಮೂಡುಬಿದಿರೆಗೆ ಅತ್ಯುತ್ತಮ ಶಿಕ್ಷಣ ಸಂಸ್ಥೆ ಪ್ರಶಸ್ತಿ

KannadaprabhaNewsNetwork |  
Published : May 04, 2025, 01:33 AM IST
ಸಿಂಗಾಪುರ ಅಂತರಾಷ್ಟ್ರೀಯ ಸಮ್ಮೇಳನ, ಎಕ್ಸಲೆಂಟ್ ಮೂಡುಬಿದಿರೆ– ಅತ್ಯುತ್ತಮ ಶಿಕ್ಷಣ ಸಂಸ್ಥೆ | Kannada Prabha

ಸಾರಾಂಶ

ಸುಹಾಸ್ತಿ ಯುವ ಜೈನ್ ಮಿಲನ ಬೆಂಗಳೂರು ಮತ್ತು ಸಿಂಗಾಪುರ ಜೈನ್ ಮಿಲನ್ ಜಂಟಿಯಾಗಿ ಸಿಂಗಾಪುರದ ಆಲೋಫ್ಟ್ ನೊವೆನಾದಲ್ಲಿ ಆಯೋಜಿಸಿದ ಅಂತಾರಾಷ್ಟ್ರಿಯ ಜಿನ ಸಮ್ಮಿಲನ-೨೦೨೫ರಲ್ಲಿ ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆಗೆ ಕರ್ನಾಟಕದ ಅತ್ಯುತ್ತಮ ಶಿಕ್ಷಣ ಸಂಸ್ಥೆ -೨೦೨೫ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಸುಹಾಸ್ತಿ ಯುವ ಜೈನ್ ಮಿಲನ ಬೆಂಗಳೂರು ಮತ್ತು ಸಿಂಗಾಪುರ ಜೈನ್ ಮಿಲನ್ ಜಂಟಿಯಾಗಿ ಸಿಂಗಾಪುರದ ಆಲೋಫ್ಟ್ ನೊವೆನಾದಲ್ಲಿ ಆಯೋಜಿಸಿದ ಅಂತಾರಾಷ್ಟ್ರಿಯ ಜಿನ ಸಮ್ಮಿಲನ-೨೦೨೫ರಲ್ಲಿ ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆಗೆ ಕರ್ನಾಟಕದ ಅತ್ಯುತ್ತಮ ಶಿಕ್ಷಣ ಸಂಸ್ಥೆ -೨೦೨೫ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಗುರುಕುಲ ಮಾದರಿ ಸಂಸ್ಕಾರಯುತ ಶಿಕ್ಷಣ, ಯೋಗ, ಭಜನೆ, ಧ್ಯಾನ, ಶಿಸ್ತಿನ ಜೀವನ ಪಾಠ, ಜೀವನ ಶಿಕ್ಷಣ ಬೋಧನೆ, ೧೩ ವರ್ಷಗಳಿಂದ ಪ್ರತಿ ವರ್ಷವೂ ರಾಜ್ಯಮಟ್ಟದಲ್ಲಿ ೧೦ ರಿಂದ ೧೫ ರ‍್ಯಾಂಕ್‌ಗಳು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಭೂತಪೂರ್ವ ಯಶಸ್ಸು, ಆಡಳಿತ ಮಂಡಳಿ- ಉಪನ್ಯಾಸಕ- ವಿದ್ಯಾರ್ಥಿಗಳ ತ್ರಿಕೋನ ಬಾಂಧವ್ಯಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಪ್ರದಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಮನ್ವಿತ್ ರಾಜ್ ಜೈನ್ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.ಈ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ಸುಮಾರು ೨೭೫ ಮಂದಿ ಪ್ರತಿನಿಧಿಗಳು ಹಾಗೂ ಸಿಂಗಾಪುರದ ಜೈನ ಬಂಧುಗಳು ಭಾಗವಹಿಸಿದ್ದರು. ಸಮಾರಂಭದಲ್ಲಿ ದಿಗಂಬರ ಜೈನ ಮಠ, ನವಗ್ರಹ ತೀರ್ಥ ಕ್ಷೇತ್ರ, ವರೂರಿನ, ಪರಮಪೂಜ್ಯ ಸ್ವಸ್ತಿಶ್ರೀ, ಧರ್ಮಸೇನ ಭಟ್ಟಾರಕ ಮಹಾಸ್ವಾಮಿಗಳು ಹಾಗೂ ಶ್ರೀ ದಿಗಂಬರ ಜೈನ ಮಠ, ಶ್ರೀ ಕ್ಷೇತ್ರ ಆರತಿಪುರದ ಪರಮಪೂಜ್ಯ ಸ್ವಸ್ತಿಶ್ರೀ ಸಿದ್ಧಾಂತಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.ಭಾರತೀಯ ಜೈನ್ ಮಿಲನ್ ನವದೆಹಲಿಯ ರಾಷ್ಟ್ರಿಯ ಕಾರ್ಯಾಧ್ಯಕ್ಷ ಡಿ.ಸುರೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಭಾರತೀಯ ಜೈನ್ ಮಿಲನ್ ನವದೆಹಲಿ ಅಂತಾರಾಷ್ಟ್ರಿಯ ವಿಭಾಗದ ರಾಷ್ಟ್ರಿಯ ಉಪಾಧ್ಯಕ್ಷ ಎನ್. ಪ್ರಸನ್ನಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಾ.ನೀರಜಾ ನಾಗೇಂದ್ರ ಕುಮಾರ್, ಜಿನೇಂದ್ರ ಕಣಗಾವಿ ನಿರಂಜನ್ ಸಿ. ಜೈನ್ ಮುರುಡೇಶ್ವರ, ಕೀರ್ತಿ ವಜ್ರಕುಮಾರ್ ಜೈನ್, ಅಜಿತ್ ಮುರುಗುಂಡೆ ಹುಬ್ಬಳ್ಳಿ, ವಿಮಲ್ ತಾಳಿಕೋಟೆ, ಬೆಂಗಳೂರಿನ ಮಾಳ ಹರ್ಷೇಂದ್ರ ಜೈನ್, ರಾಜೇಶ್ ಸಿ.ಸಿ., ಶ್ವೇತಾ ಜೈನ್, ಜಿತೇಶ್ ಜೈನ್, ಚಿತ್ತಾ ಜಿನೇಂದ್ರ, ಅನಿಲ್ ಕುಮಾರ್ ಎಚ್.ಎನ್., ಪ್ರೇಮ ಸುಖಾನಂದ ಬೆಂಗಳೂರು, ಸುಮಂತ್ ಪ್ರಕಾಶ್, ಪ್ರಜ್ವಲ್ ಜೈನ್, ಅಭಿನಂದನ್ ಜೈನ್, ಪೂಜಾ ದರ್ಶನ್ ಜೈನ್, ಸಂಗೀತ ವಜ್ರಕುಮಾರ್ ಮತ್ತು ಬುಣೇಂದ್ರ ಜೈನ್, ರಚನಾ ಜಿನೇಂದ್ರ ಜೈನ್ ಉಪಸ್ಥಿತರಿದ್ದರು. ಬಳಿಕ ಜೈನ ಬಂಧುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು. ಸವಿತಾ ಜೈನ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುದ್ದಿ ಓದದಿದ್ದರೆ ಡಿಜಿಟಲ್‌ ಅರೆಸ್ಟ್‌ ಆಗ್ತಿರಿ!
ರೈತರ ಯೂರಿಯಾ ಕದ್ದು ತಮಿಳ್ನಾಡಿಗೆ ಸಾಗಣೆ ದಂಧೆ ಪತ್ತೆ