ಎಕ್ಸಲೆಂಟ್, ಲಿಟ್ಲ್‌ಸ್ಟಾರ್ ಆಂಗ್ಲ ಮಾಧ್ಯಮ ಶಾಲೆಯಿಂದ ರಾಜ್ಯಮಟ್ಟದ ಸಾಧನೆ

KannadaprabhaNewsNetwork | Published : May 11, 2024 12:02 AM

ಸಾರಾಂಶ

ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪ್ರಥ್ವಿತಾ ಪಿ. ಶೆಟ್ಟಿ ೬೨೧ (ಶೇ.೯೯.೩೬) ಅಂಕಗಳೊಂದಿಗೆ ರಾಜ್ಯಮಟ್ಟದಲ್ಲಿ ೫ನೇ ರ್‍ಯಾಂಕ್, ಸಾಧನಾ ದೇವಾಡಿಗ ೬೧೬ (ಶೇ.೯೮.೫೬) ಅಂಕಗಳೊಂದಿಗೆ ೧೦ನೇ ರ್‍ಯಾಂಕ್‌ ಗಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕುಂದಾಪುರ

ಇಲ್ಲಿನ ಎಕ್ಸಲೆಂಟ್ ಮತ್ತು ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆಯು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.೧೦೦ ಫಲಿತಾಂಶವನ್ನು ದಾಖಲಿಸಿದ್ದು, ಪ್ರಥ್ವಿತಾ ಪಿ. ಶೆಟ್ಟಿ ೬೨೧ (ಶೇ.೯೯.೩೬) ಅಂಕಗಳೊಂದಿಗೆ ರಾಜ್ಯಮಟ್ಟದಲ್ಲಿ ೫ನೇ ರ್‍ಯಾಂಕ್, ಸಾಧನಾ ದೇವಾಡಿಗ ೬೧೬ (ಶೇ.೯೮.೫೬) ಅಂಕಗಳೊಂದಿಗೆ ೧೦ನೇ ರ್‍ಯಾಂಕ್‌ ಗಳಿಸಿದ್ದಾರೆ.

ಅಲ್ಲದೆ ಬಸನಗೌಡ ಪಾಟೀಲ್ ೬೧೦ (ಶೇ.೯೭.೬), ಕೆ. ಶ್ರೀಶಾ ಶೆಟ್ಟಿ ೬೧೦ (ಶೇ.೯೭.೬), ನಿಝಾ ೬೦೮ (ಶೇ.೯೭.೨೮), ಸನ್ನಿಧಿ ೬೦೬ (ಶೇ.೯೬.೯೬), ಸುಶ್ಮಿತಾ ಸುಕಾಲಿ ೬೦೫ (ಶೇ.೯೬.೮), ದಿವಿತ್ ಕುಮಾರ್ ಶೆಟ್ಟಿ ೬೦೨ (ಶೇ. ೯೬.೩೨), ಸಜನ್ ಜೆ. ಶೆಟ್ಟಿ ೬೦೧ (ಶೇ.೯೬.೧೬), ಐಶ್ವರ್ಯ ಬಿ. ಆಚಾರ್ಯ್ ೫೯೧ (ಶೇ.೯೪.೫೬), ಸನ್ಸಿತಾ ೫೮೮ (ಶೇ.೯೪.೦೮), ಸಂದೀಪ್ ರೆಡ್ಡಿ ವಿ. ೫೮೭ (ಶೇ.೯೩.೯೨), ವಿದ್ಯಾಶ್ರೀ ೫೮೫ (ಶೇ.೯೩.೬೦), ಕೃತಿ ಕೆ. ಶೆಟ್ಟಿ ೫೮೨ (ಶೇ.೯೩.೧೨), ಲತಿಕಾ ೫೮೧ (ಶೇ.೯೨.೯೬) ಅಂಕಗಳನ್ನು ಪಡೆದಿದ್ದಾರೆ.

ಸಂಸ್ಥೆಯಲ್ಲಿ ಪರೀಕ್ಷೆ ಬರೆದ ೭೯ ವಿದ್ಯಾರ್ಥಿಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ೩೮, ಪ್ರಥಮ ಶ್ರೇಣಿಯಲ್ಲಿ ೪೦, ದ್ವಿತೀಯ ಶ್ರೇಣಿಯಲ್ಲಿ ೧ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ವಿದ್ಯಾರ್ಥಿಗಳ ಈ ಅಭೂತಪೂರ್ವ ಸಾಧನೆಗೆ ಎಂ.ಎಂ. ಹೆಗ್ಡೆ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಎಂ. ಮಹೇಶ್ ಹೆಗ್ಡೆ, ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ ಹಾಗೂ ಮುಖೋಪಾಧ್ಯಾಯರು ಸಂತಸ ವ್ಯಕ್ತಪಡಿಸಿದ್ದಾರೆ.

------

ನಮ್ಮ ಶಾಲೆಯ ಶಿಕ್ಷಕರು ಸಂಜೆ ೬ರ ತನಕ ನಮ್ಮ ಜೊತೆ ನಿಂತು ನಿರಂತರ ತರಬೇತಿ ನೀಡಿರುವುದು ಈ ಅಂಕ ಗಳಿಸಲು ಸಹಕಾರಿಯಾಯಿತು. ನನ್ನ ಸಾಧನೆಗೆ ಬೆನ್ನೆಲುಬಾಗಿ ನಿಂತಿರುವ ಶಾಲೆಯ ಆಡಳಿತ ಮಂಡಳಿ, ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ, ಪೋಷಕರಿಗೆ ಚಿರಋಣಿಯಾಗಿದ್ದೇನೆ.

। ಪ್ರಥ್ವಿತಾ ಪಿ. ಶೆಟಿ, ೫ನೇ ರ್‍ಯಾಂಕ್ ವಿಜೇತೆ

Share this article