ಯುವಜನೋತ್ಸವದಲ್ಲಿ ಎಕ್ಸಲಂಟ್ ವಿದ್ಯಾರ್ಥಿಗಳ ಸಾಧನೆ

KannadaprabhaNewsNetwork |  
Published : Dec 01, 2024, 01:31 AM IST
ಯುವಜನೋತ್ಸವದಲ್ಲಿ ಎಕ್ಸಲಂಟ್ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ: ಯುವಜನೋತ್ಸವ-2024ರಲ್ಲಿ ಸ್ಪರ್ಧೆ ಮಾಡಿದ ನಗರದ ಎಕ್ಸಲಂಟ್ ಪದವಿ ಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ಅಧಿಕ ಪ್ರಶಸ್ತಿಗಳನ್ನು ಪಡೆಯುವ ಮೂಲಕ ಕಾಲೇಜಿನ ಕೀರ್ತಿಗೆ ಭಾಜನರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ:

ಯುವಜನೋತ್ಸವ-2024ರಲ್ಲಿ ಸ್ಪರ್ಧೆ ಮಾಡಿದ ನಗರದ ಎಕ್ಸಲಂಟ್ ಪದವಿ ಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ಅಧಿಕ ಪ್ರಶಸ್ತಿಗಳನ್ನು ಪಡೆಯುವ ಮೂಲಕ ಕಾಲೇಜಿನ ಕೀರ್ತಿಗೆ ಭಾಜನರಾಗಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಬಿಎಲ್‌ಡಿಇ ಸಂಸ್ಥೆ, ರಾಜ್ಯ ಯುವ ಸಂಘಗಳ ಒಕ್ಕೂಟಗಳ ಸಹಯೋಗದಲ್ಲಿ ನಗರದ ಎಎಸ್‌ಪಿ ಕಾಮರ್ಸ್‌ ಕಾಲೇಜು ಕ್ಯಾಂಪಸ್‌ನಲ್ಲಿ ಜರುಗಿದ ವಿಜಯಪುರ ಜಿಲ್ಲಾ ಮಟ್ಟದ

ವಿಜ್ಞಾನ ಮಾದರಿ ತಯಾರಿಕೆ ವೈಯಕ್ತಿಕ ವಿಭಾಗದಲ್ಲಿ ಸಂದೇಶ ಅಮರಶೆಟ್ಟಿ (ಪ್ರಥಮ), ಅನುರಾಧಾ ಕೇಶ್ವಾಪುರ (ದ್ವಿತೀಯ), ವಿರೇಶ ಪಟ್ಟಣಶೆಟ್ಟಿ (ತೃತೀಯ) ಸ್ಥಾನ ಪಡೆದು ಗುಂಪು ವಿಭಾಗದಲ್ಲಿ ವಿಜಯಕುಮಾರ ತೋಡಗಿ ತಂಡ (ಪ್ರಥಮ), ಪ್ರತೀಕ ಗಿರಣಗೌಡ ತಂಡ (ದ್ವಿತೀಯ), ಸುತೇಜ ಕುಲಕರ್ಣಿ ತಂಡ (ತೃತೀಯ) ಸ್ಥಾನ ಪಡೆದಿವೆ.

ಭಾಷಣ ಸ್ಪರ್ಧೆಯಲ್ಲಿ ಕೋಮಲ ಭಾವಿಕಟ್ಟಿ (ದ್ವಿತೀಯ), ಪೇಂಟಿಂಗ್‌ ಸ್ಪರ್ಧೆಯಲ್ಲಿ ಅನುಷ್ಕಾ ಶಾಬಾದಿ (ದ್ವಿತೀಯ), ಕವಿತೆ ರಚನೆ ಸ್ಪರ್ಧೆಯಲ್ಲಿ ಸಾವಿತ್ರಿ ಕುಲಕರ್ಣಿ (ತೃತೀಯ), ಮೊಬೈಲ್ ಪೋಟೋಗ್ರಫಿ ಸ್ಪರ್ಧೆಯಲ್ಲಿ ಭಾಸ್ಕರ ನ್ಯಾಮಗೊಂಡ (ದ್ವಿತೀಯ), ಭಾಸ್ಕರ ವಿಧಾತೆ (ತೃತೀಯ) ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿದ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಸನ್ಮಾನಿಸಿ ಶುಭ ಹಾರೈಸಿದ್ದಾರೆ. ಇದೇ ವೇಳೆ ವಿದ್ಯಾರ್ಥಿಗಳು ಭತ್ತ ತುಂಬುವ ಚೀಲಗಳಂತಾಗದೇ ಬತ್ತ ಬೆಳೆಯುವ ಗದ್ದೆಗಳಾಗಬೇಕು. ಪಠ್ಯದ ಜೊತೆಯಲ್ಲಿ ಪಠ್ಯ ಪೂರಕ ಚಟುವಟಿಕೆಳಲ್ಲಿ ತೊಡಗಿಕೊಳ್ಳುವ ಮೂಲಕ ಬುದ್ದಿಬಲದ ಜೊತೆಯಲ್ಲಿ ಮನೋಬಲವನ್ನು ಹೆಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಕ್ಕಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯ ಶ್ರೀಕಾಂತ.ಕೆ.ಎಸ್ ಸೇರಿ ಸಿಬ್ಬಂದಿ ಶುಭ ಹಾರೈಸಿದರು.

PREV

Recommended Stories

ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ
ಮಾಧ್ಯಮ ಸಾಧಕರಿಗೆ ನ್ಯೂ ಇಂಡಿಯನ್‌ ಟೈಮ್ಸ್‌ ಪ್ರಶಸ್ತಿ