ಅತಿಯಾದ ಮಳೆ: ಭತ್ತದ ಬೆಳೆಗೆ ರೋಗ ಸಾಧ್ಯತೆ

KannadaprabhaNewsNetwork |  
Published : Sep 13, 2024, 01:32 AM IST
ಮುಂಡಗೋಡ: ತಾಲೂಕಿನಲ್ಲಿ ಅತಿಯಾದ ಮಳೆಯಾಗಿದ್ದರಿಂದ ಕೆಲ ಭಾಗಗಳ ಜಮೀನುಗಳಲ್ಲಿ ಹೆಚ್ಚುವರಿ ನೀರು ಸಂಗ್ರಹವಾಗಿದ್ದರಿಂದ ಕೂರಿಗೆ ಮತ್ತು ನಾಟಿ ಭತ್ತದ ಬೆಳೆಗಳಿಗೆ ಕಂದು ಜಿಗಿಹುಳು ಮತ್ತು ಎಲೆ ಕವಚದ ಮಚ್ಚೆ ರೋಗ ಕಂಡು ಬರುತ್ತಿದೆ. | Kannada Prabha

ಸಾರಾಂಶ

ಭತ್ತಕ್ಕೆ ಕಂದು ಜಿಗಿ ಹುಳು ಕಂಡುಬಂದಲ್ಲಿ ನಿಯಂತ್ರಣಕ್ಕಾಗಿ ಪ್ರತಿ ಲೀಟರ್ ನೀರಿಗೆ ೦.೨೫ ಮಿ.ಲೀ. ಇಮಿಡಾಕ್ಲೋಪಿಡ್‌ನ್ನು ನೇರವಾಗಿ ಗಿಡದ ಬುಡಕ್ಕೆ ಸಿಂಪಡಿಸಬೇಕು.

ಮುಂಡಗೋಡ: ತಾಲೂಕಿನಲ್ಲಿ ಅತಿಯಾದ ಮಳೆಯಾಗಿದ್ದರಿಂದ ಕೆಲವು ಭಾಗಗಳ ಜಮೀನುಗಳಲ್ಲಿ ಹೆಚ್ಚುವರಿ ನೀರು ಸಂಗ್ರಹವಾಗಿದ್ದರಿಂದ ಕೂರಿಗೆ ಮತ್ತು ನಾಟಿ ಬತ್ತದ ಬೆಳೆಗಳಿಗೆ ಕಂದು ಜಿಗಿಹುಳು ಮತ್ತು ಎಲೆ ಕವಚದ ಮಚ್ಚೆ ರೋಗ ಕಂಡು ಬರುವ ಸಾಧ್ಯತೆ ಇದೆ. ಮುಂಜಾಗ್ರತಾ ಕ್ರಮವಾಗಿ ಔಷಧೋಪಚಾರ ಕ್ರಮ ಕೈಗೊಳ್ಳುವಂತೆ ಮುಂಡಗೋಡ ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್. ಕುಲಕರ್ಣಿ ರೈತರಿಗೆ ಸಲಹೆ ನೀಡಿದ್ದಾರೆ.

ಬತ್ತದ ಎಲೆ ಕವಚದ ಮಚ್ಚೆ ರೋಗದ ಲಕ್ಷಣ: ಎಲೆಯ ಹೊದಿಕೆ ಮೇಲೆ ಅಂಡಾಕಾರದ ಚುಕ್ಕೆಗಳನ್ನು ಕಾಣಬಹುದು. ಇಂತಹ ಚುಕ್ಕೆಗಳ ಕೇಂದ್ರಭಾಗವು ಬೂದಿ ಮಿಶ್ರಿತ ಬಿಳಿ ಬಣ್ಣದಿಂದ ಕೂಡಿದ್ದು, ಕಂದು ಬಣ್ಣದ ಉಂಗುರದಿಂದ ಆವೃತವಾಗಿರುತ್ತವೆ. ರೋಗವು ತೀವ್ರವಾದಾಗ ಎಲ್ಲ ಎಲೆಗಳು ಒಣಗುತ್ತವೆ. ಬತ್ತಕ್ಕೆ ಕಂದು ಜಿಗಿ ಹುಳು ಕಂಡುಬಂದಲ್ಲಿ ನಿಯಂತ್ರಣಕ್ಕಾಗಿ ಪ್ರತಿ ಲೀಟರ್ ನೀರಿಗೆ ೦.೨೫ ಮಿ.ಲೀ. ಇಮಿಡಾಕ್ಲೋಪಿಡ್‌ನ್ನು ನೇರವಾಗಿ ಗಿಡದ ಬುಡಕ್ಕೆ ಸಿಂಪಡಿಸಬೇಕು. ಸಿಂಪರಣೆ ಕೈಗೊಳ್ಳುವಾಗ ಯುರಿಯಾ ರಸಗೊಬ್ಬರ ನೀಡಬಾರದು.

ಬತ್ತಕ್ಕೆ ಎಲೆ ಕವಚದ ಮಚ್ಚೆ ರೋಗ ಕಂಡು ಬಂದಲ್ಲಿ ನಿಯಂತ್ರಣಕ್ಕಾಗಿ ಪ್ರತಿ ಲೀಟರ್ ನೀರಿಗೆ ೧ ಗ್ರಾಂ ಕಾರ್ಬನ್ ಡೈಜಿಮ್ ೫೦ ಡಬ್ಲ್ಯೂಪಿ ಅಥವಾ ೨ ಗ್ರಾಂ ಮ್ಯಾಂಕೊಜಿಬ್ ಅಥವಾ ಪ್ರತಿ ಲೀಟರ್ ನೀರಿಗೆ ೧ ಗ್ರಾಂ ಸಾಫ್ ಬೆರೆಸಿ ಸಿಂಪರಣೆ ಮಾಡುವಂತೆ ಸಹಾಯಕ ಕೃಷಿ ನಿರ್ದೇಶಕರು ಸೂಚಿಸಿದ್ದಾರೆ.ಚಿರತೆ ದಾಳಿಗೆ ಆಕಳ ಕರು ಬಲಿ

ಹೊನ್ನಾವರ: ತಾಲೂಕಿನ ಕವಲಕ್ಕಿ ಹತ್ತಿರದ ಗಾಣಗೇರಿಯಲ್ಲಿ ಆಕಳ ಕರುವೊಂದು ಬುಧವಾರ ರಾತ್ರಿ ಚಿರತೆ ದಾಳಿಗೆ ಮೃತಪಟ್ಟಿದೆ.ಆಕಳ ಕರುವಿನ ಮೇಲೆ ಚಿರತೆ ದಾಳಿ ಮಾಡಿ ಅರ್ಧ ತಿಂದಿದೆ. ಕಳೆದ ಕೆಲವು ವರ್ಷಗಳಿಂದ ಈ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಅನೇಕ ಬಾರಿ ಆಕಳ ಮತ್ತು ನಾಯಿಗಳ ಮೇಲೆ ದಾಳಿ ಮಾಡಿದ ಘಟನೆ ನಡೆದಿತ್ತು. ಇದೀಗ ಕೆಲವು ದಿನಗಳ ಬಿಡುವಿನ ನಂತರ ಮತ್ತೆ ಚಿರತೆ ದಾಳಿಗೆ ಆಕಳು ಕರು ಬಲಿ ಆಗಿದೆ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ