ಕನ್ನಡಪ್ರಭವಾರ್ತೆ ತುರುವೇಕೆರೆ
ತಾಲೂಕಿನ ದಂಡಿನಶಿವರ ಹೋಬಳಿ ಹೆಗ್ಗೆರೆಯ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯ ಆವರಣದಲ್ಲಿ ವೆಂಕಟೇಶ್ವರ ಸೇವಾ ಟ್ರಸ್ಟ್, ಲಯನ್ಸ್ ಕ್ಲಬ್, ಕಲ್ಪತರು ಚಾರಿಟಬಲ್ ಟ್ರಸ್ಟ್, ಬಿ ಡಬ್ಲ್ಯು ಲಯನ್ಸ್ ಹಾಸ್ಪಿಟಲ್ ಬೆಂಗಳೂರು, ಜಿಲ್ಲಾ ಅಂಧತ್ವ ನಿವಾರಣಾ ಕೇಂದ್ರ, ತಾಲೂಕು ಆರೋಗ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಜವರಪ್ಪಸ್ವಾಮಿ ಸ್ಮರಣಾರ್ಥ ಹಮ್ಮಿ ಕೊಂಡಿದ್ದ ಉಚಿತ ಕಣ್ಣಿನ ತಪಾಸಣೆ, ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ, ರಕ್ತದೊತ್ತಡ, ಶುಗರ್ ಎಚ್.ಬಿಎ1ಸಿ, ಬೋನ್ ಮಿನರಲ್ ಡೆನ್ಸಿಟಿ, ಪಿ.ಎಫ್.ಟಿ (ಶ್ವಾಸಕೋಶ ತಪಾಸಣೆ) ಥೈರಾಯಿಡ್ ಸೇರಿದಂತೆ ವಿವಿಧ ರೋಗಗಳಿಗೆ ಸಂಬಂಧಿಸಿದಂತೆ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇತ್ತೀಚೆಗೆ ರೋಗಗಳು ಹೆಚ್ಚುತ್ತಿವೆ. ನಮ್ಮ ಆಹಾರ ಪದ್ದತಿ, ಪಾಶ್ಚಾತ್ಯ ಸಂಸ್ಕೃತಿ ಅನುಕರಣೆ, ವಾಯು ಪರಿಸರ ಸೇರಿದಂತೆ ವಿವಿಧ ಕಾರಣಗಳಿಂದ ರೋಗಗಳು ಉಲ್ಬಣವಾಗುತ್ತಿದೆ ಎಂದರು. ಮನೋವ್ಯಾಧಿ ಅಧಿಕವಾಗುತ್ತಿದೆ. ಕೆಲವು ಖಾಯಿಲೆಗಳು ನಮ್ಮ ದೇಹದಲ್ಲಿ ಇದ್ದರೂ ಸಹ ಅವು ಗೋಚರಿಸುವುದಿಲ್ಲ. ಕೊನೆ ಹಂತ ತಲುಪಿದಾಗ ಅದರ ಪರಿಣಾಮ ಹೆಚ್ಚಾಗಿ ಕಾಣುತ್ತದೆ. ಆ ಹೊತ್ತಿಗೆ ಜೀವಕ್ಕೆ ಕುತ್ತು ಬರುವ ಹಂತ ತಲುಪಿರುತ್ತದೆ. ಗ್ರಾಮಾಂತರ ಪ್ರದೇಶದ ಜನರು ತಮ್ಮ ಅರೋಗ್ಯದ ಕಡೆ ಗಮನ ಹರಿಸಬೇಕು. ಆಗಾಗ್ಗೆ ತಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಕೆಲವರು ಅಸಡ್ಡೆಯಿಂದ ತಪಾಸಣೆ ಮಾಡಿಸಿಕೊಳ್ಳುವುದಿಲ್ಲ. ಅದರಿಂದಲೇ ಸಮಸ್ಯೆ ಉಲ್ಬಣವಾಗುವುದು ಎಂದರು.
ಕಲ್ಪತರು ಲಯನ್ಸ್ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಡಾ.ಚೌದ್ರಿ ನಾಗೇಶ್ ಮಾತನಾಡಿ ಮನುಷ್ಯನು ಆರೋಗ್ಯದ ಕಡೆ ಗಮನ ಹರಿಸಬೇಕಿದೆ. ಇಂದಿನ ಆಹಾರ ಶೈಲಿಯಿಂದ ಬಿಪಿ.ಶುಗರ್ ನಂತಹ ಖಾಯಿಲೆಗಳಿಗೆ ಮನುಷ್ಯರು ತುತ್ತಾಗುತ್ತಿದ್ದಾರೆ. ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಲು ಸಾಧ್ಯವಾಗದ ಗ್ರಾಮೀಣ ಭಾಗದ ರೈತರು ಸಂಘ ಸಂಸ್ಥೆಗಳು ಆಯೋಜಿಸುವ ಆರೋಗ್ಯ ಶಿಬಿರಗಳಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ವೆಂಕಟೇಶ್ವರ ಸೇವಾ ಟ್ರಸ್ಟ್ ನ ಅಧ್ಯಕ್ಷ ಎಚ್. ಎನ್. ಗಂಗಾಧರಯ್ಯ ಮಾತನಾಡಿ ವೆಂಕಟೇಶ್ವರ ಸ್ವಾಮಿ ದೇವಾಲಯ ಅಭಿವೃದ್ದಿಗೆ ದಿ.ಜವರಪ್ಪ ಸ್ವಾಮಿಯವರು ಶ್ರಮಿಸಿದ್ದರು. ಅವರ ಸ್ಮರಣಾರ್ಥ ಈ ದೇವಾಲಯ ಆವರಣದಲ್ಲಿ ಆರೋಗ್ಯ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸೇವಾ ಟ್ರಸ್ಟ್ ನಿಂದ ಹಲವು ಸೇವಾಕಾರ್ಯಗಳನ್ನು ನಡೆಸಲಾಗುವುದು. ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ನ ಅಧ್ಯಕ್ಷ ಎಚ್.ಎನ್.ಪರಮೇಶ್ವರಯ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ವೆಂಕಟೇಶ್ವರ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಹೆಚ್.ಆರ್.ಜಯರಾಮ್, ಕಲ್ಪತರು ಟ್ರಸ್ ಕಾರ್ಯದರ್ಶಿ ಎಚ್.ಆರ್. ರಂಗನಾಥ್, ವೈದ್ಯ ಡಾ.ಎ.ನಾಗರಾಜು, ಕೀಲು ಮತ್ತು ಮೂಳೆ ತಜ್ಞರಾದ ಡಾ.ಸುನಿಲ್ ಕುಮಾರ್, ಮಾರ್ಕೇಟಿಂಗ್ ಆಫೀಸರ್ಸ್ ಸುನಿಲ್ ಕುಮಾರ್, ಲಯನ್ಸ್ ಗಳಾದ ಗಂಗಾಧರ್ ದೇವರಮನೆ, ಸುನಿಲ್ ಬಾಬು, ಲಯನ್ಸ್ ನ ಖಜಾಂಚಿ ಎಚ್. ಎನ್. ಸುನಿಲ್ ಕುಮಾರ್ ಸೇರಿದಂತೆ ಲಯನ್ಸ್ ಪದಾಧಿಕಾರಿಗಳು, ಶಿಬಿರಾರ್ಥಿಗಳು ಇದ್ದರು. ಈ ವೇಳೆ ಡಾ.ಎ.ನಾಗರಾಜ್, ಡಾ.ಚೌದ್ರಿ ನಾಗೇಶ್, ಡಾ.ಎಸ್.ಸುನಿಲ್ ಕುಮಾರ್, ಡಾ.ನವ್ಯ ರನ್ನು ಗೌರವಿಸಲಾಯಿತು.