ಹಿರಿಯೂರು: ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆ ಎಷ್ಟು ಉಪಯೋಗವೋ ಅಷ್ಟೇ ಅಪಾಯಕಾರಿಯಾಗಿದೆ. ಇತ್ತೀಚಿಗೆ ಸೈಬರ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆ ನಿಟ್ಟಿನಲ್ಲಿ ಎಚ್ಚರಿಕೆಯಿಂದ ಇರಬೇಕು ಎಂದು ಚಿತ್ರದುರ್ಗ ಸೈಬರ್ ಕ್ರೈo ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಜೈರಾಂ ಹೇಳಿದರು.
18 ವರ್ಷದೊಳಗಿನ ಮಗುವಿನ ಮೇಲೆ ದೈಹಿಕ ಹಾಗೂ ಲೈಂಗಿಕ ದೌರ್ಜನ್ಯ ಮಾಡಿದವರ ವಿರುದ್ಧ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಲಾಗುವುದು. ಯಾವುದೇ ವ್ಯಕ್ತಿಯಿಂದ ಮಕ್ಕಳ ಮೇಲೆ ಇಂತಹ ಅಪರಾಧ ನಡೆದಿರುವುದು ಗಮನಕ್ಕೆ ಬಂದಲ್ಲಿ ಮಕ್ಕಳ ವಿಶೇಷ ಪೊಲೀಸ್ ಘಟಕ ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡುವುದು ಕಡ್ಡಾಯ. ಇಲ್ಲವೇ ಮಕ್ಕಳ ಸಹಾಯವಾಣಿಗೆ ಕರೆ ಮಾಡಬೇಕು ಎಂದು ತಿಳಿಸಿದರು.
ಪ್ರಾಂಶುಪಾಲ ಕೆ.ರಂಗಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಕರು ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯ ಹದಗೆಡಿಸಿಕೊಳ್ಳುವುದರ ಜತೆಗೆ ಇಡೀ ಜೀವನವನ್ನೇ ನಾಶ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಮಕ್ಕಳು ಅವುಗಳಿಂದ ದೂರ ಸರಿದು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.ಈ ಸಂದರ್ಭದಲ್ಲಿ ಉಪನ್ಯಾಸಕರಾದ ಎಲ್.ಶಾಂತಕುಮಾರ್, ಈ.ಪ್ರಕಾಶ್ ಬಬ್ಬೂರು, ಈ.ನಾಗೇಂದ್ರಪ್ಪ, ಎಚ್.ಆರ್.ಲೋಕೇಶ್, ಶಾಂತಲಾ, ರೇಷ್ಮಾ, ಜಿ.ಎಸ್.ತಿಪ್ಪೇಸ್ವಾಮಿ, ಮಂಜು ಮುಂತಾದವರು ಹಾಜರಿದ್ದರು.