- ಗಡಿಯಾರ ಕಂಬ ಬಳಿ ಮತದಾನ ಜಾಗೃತಿ ರಂಗೋಲಿ ಕಾರ್ಯಕ್ರಮ- - -
ಕನ್ನಡಪ್ರಭ ವಾರ್ತೆ, ದಾವಣಗೆರೆ ಮುಂಬರುವ ಮೇ 7ನೇ ತಾರೀಖಿನಂದು ನಡೆಯಲಿರುವ ಚುನಾವಣೆಯಲ್ಲಿ ಎಲ್ಲ ನಾಗರಿಕ ಬಂಧುಗಳು ಮತ ಹಾಕುವುದರ ಮೂಲಕ ಹಕ್ಕನ್ನು ಚಲಾಯಿಸಬೇಕು. ಯಾವುದೇ ಆಮಿಷಗಳಿಗೂ ಒಳಗಾಗದಂತೆ ಧೈರ್ಯವಾಗಿ ಸೂಕ್ತವಾದ ವ್ಯಕ್ತಿಗೆ ಮತ ನೀಡಬೇಕೆಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಮನವಿ ಮಾಡಿದರು.ನಗರದ ಎಸ್.ನಿಜಲಿಂಗಪ್ಪ ಬಡಾವಣೆಯ ರಿಂಗ್ ರಸ್ತೆಯ ಗಡಿಯಾರ ಕಂಬದ ಬಳಿ ಶುಕ್ರವಾರ ಮುಂಜಾನೆ ವಚನಾಮೃತ ಬಳಗ, ಡಾ.ಪಂಡಿತ ಪುಟ್ಟರಾಜ ಸೇವಾ ಸಮಿತಿಯಿಂದ ಆಯೋಜಿಸಿದ ರಂಗೋಲಿ ಮೂಲಕ ಮತದಾನ ಜಾಗೃತಿಯ ಸ್ಲೋಗನ್‌ಗಳನ್ನು ಬರೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಸಮಿತಿ ಅಧ್ಯಕ್ಷೆ ಸೌಮ್ಯ ಸತೀಶ್ ಧಾರವಾಡ ಮಾತನಾಡಿ, ಮತದಾನವನ್ನು ತಪ್ಪದೇ ಮಾಡಬೇಕು. ತಮ್ಮ ಹಕ್ಕನ್ನು ಚಲಾಯಿಸಬೇಕು. ಸುಭದ್ರ ಸರ್ಕಾರ ನಿರ್ಮಿಸುವಲ್ಲಿ ನಿಮ್ಮ ಮತಗಳ ಅವಶ್ಯಕತೆ ಇದೆ. ಅದರಲ್ಲಿ ದೇಶದ ಉಜ್ವಲ ಭವಿಷ್ಯ ಅಡಗಿದೆ ಎಂದರು.ಬಳಗದ ಪ್ರಧಾನ ಕಾರ್ಯದರ್ಶಿ ಮಮತಾ ನಾಗರಾಜ್ ಮಾತನಾಡಿ, ಚುನಾವಣೆಯ ದಿನ ಪ್ರತಿಯೊಬ್ಬರು ಮತ ಚಲಾಯಿಸಿ. ಯಾವುದೇ ಕಾರಣಕ್ಕೂ ಸ್ವಂತ ಕಾರ್ಯದ ಮೇಲೆ ಬೇರೆ ಊರಿಗಳೋ, ಪ್ರವಾಸಗಳಿಗೋ ಹೋಗುವುದು ಮಾಡಬೇಡಿ. ಅಂದಿನ ರಜೆಯನ್ನು ಮತದ ಹಕ್ಕನ್ನು ಚಲಾಯಿಸಲೆಂದೇ ಮೀಸಲಿಡುವಂತೆ ಹೇಳಿದರು.
ಕಾರ್ಯಕ್ರಮದಲ್ಲಿ ಬಳಗ, ಸಮಿತಿಯ ಮದುಮತಿ ಗಿರೀಶ್, ಶಾಂತ ಶಿವಶಂಕರ್, ಕವಿತಾ, ಲತಾ ಕಪ್ಪಾಲಿ, ಶ್ರುತಿ ಚಾರ್ಮನಿ, ಸ್ವಪ್ನ ಸುಮಾ, ರೇಖಾ ಬೇತೂರು, ಜ್ಯೋತಿ ಬೆಳಗಾವಿ, ದಿನಕರ್, ಮೃದಿನಿ, ದೀಪಾ ದೇವರಾಜ್, ಪೂರ್ಣಿಮಾ ಎಲ್.ಬಸವರಾಜ್, ಶ್ರೀಯ ಇತರರು ಇದ್ದರು. ಮತದಾನ ಕುರಿತ ವಿವಿಧ ಸ್ಲೋಗನ್‌ಗಳನ್ನು ವೃತ್ತದಲ್ಲಿ ರಂಗೋಲಿ ಮೂಲಕ ಬಿಡಿಸಲಾಯಿತು.- - - -12ಕೆಡಿವಿಜಿ37ಃ:
ದಾವಣಗೆರೆಯಲ್ಲಿ ವಚನಾಮೃತ ಬಳಗ, ಡಾ.ಪಂಡಿತ ಪುಟ್ಟರಾಜ ಸೇವಾ ಸಮಿತಿಯಿಂದ ನಡೆದ ಮತದಾನ ಜಾಗೃತಿ ರಂಗೋಲಿ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಮಾತನಾಡಿದರು.